WHO: ಮಾಂಸಾಹಾರ ಪ್ರಿಯರೇ ಎಚ್ಚರ!! ಇನ್ನು ಅತಿಯಾಗಿ ಚಿಕನ್ ಸೇವಿಸಿದ್ರೆ ನೀವು ವಿಶ್ವದ ಅತಿದೊಡ್ಡ ಕಾಯಿಲೆಗೆ ತುತ್ತಾಗ್ಬೋದು!!

WHO alert Fond of eating chicken could be world most dangerous disease

WHO Alert: ಚಿಕನ್(Chiken) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾನ್​ವೆಜ್ ಪ್ರಿಯರು ಹೆಚ್ಚಾಗಿ ಚಿಕನ್​ನಿಂದ ಮಾಡಿದ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಊಟದ ಜೊತೆಗೆ ಒಂದು ಪೀಸ್ ಚಿಕನ್ ಇಲ್ಲ ಎಂದರೆ ಹಲವರಿಗೆ ಅವತ್ತಿನ ಊಟ ಸಮಾಧಾನವೇ ತರುವುದಿಲ್ಲ. ಅಷ್ಟರಮಟ್ಟಿಗೆ ಚಿಕನ್ ಊಟವನ್ನು ಇಷ್ಟಪಡುವವರಿದ್ದಾರೆ. ಆದರೆ ನೀವು ಹೆಚ್ಚು ಚಿಕನ್ ತಿನ್ನುತ್ತಿದ್ದರೆ ಜಾಗರೂಕರಾಗಿರಿ. ಯಾಕೆಂದರೆ ನಿಮ್ಮ ನೆಚ್ಚಿನ ಚಿಕನ್ ನಿಮ್ಮನ್ನ ವಿಶ್ವದ 10ನೇ ಅತಿದೊಡ್ಡ ಕಾಯಿಲೆಗೆ ಬಲಿಪಶುವಾಗಿಸಬಹುದು. ಈ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒ (WHO alert) ಕೂಡ ಎಚ್ಚರಿಕೆ ನೀಡಿದೆ.

ಹೌದು, ಚಿಕನ್ ಪ್ರಿಯರು ಖಂಡಿತಾ ಈ ಸುದ್ದಿ ಓದಲೇಬೇಕು ಏಕೆಂದರೆ, ಅತಿಯಾಗಿ ಚಿಕನ್‌ ತಿನ್ನುವ ಅಭ್ಯಾಸದಿಂದಾಗಿ ಆಸ್ಪತ್ರೆಯಲ್ಲಿ ನೀವು ದಿನ ದೂಡಬೇಕಾದ ಸಮಯ ಬರಬಹುದು. ಯಾಕೆಂದರೆ ಅತಿಯಾದ ಚಿಕನ್‌ ಸೇವೆಯಿಂದಾಗಿ ನೀವು ವಿಶ್ವದ 10ನೇ ಅತ್ಯಂತ ಅಪಾಯಕಾರಿ ಕಾಯಿಲೆ ಬಲಿಪಶುವಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ. ನಿಜ, ಅತಿಯಾದ ಚಿಕನ್‌ ಸೇವನೆಯಿಂದಾಗಿ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್‌( Antimicrobial resistance) ಅಥವಾ ಎಎಂಆರ್‌(AMR) ಎನ್ನುವ ಅಪಾಯಕಾರಿ ಕಾಯಿಲೆ ನಿಮ್ಮನ್ನು ಆವರಿಸಿಬಿಡಬಹುದು. ಇದು ವಿಶ್ವ 10ನೇ ಅತ್ಯಂತ ಅಪಾಯಕಾರಿ ಕಾಯಿಲೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಆರೋಗ್ಯ ತಜ್ಞ ಡಾ.ಎಂ.ವಲಿ(Dr. M Vali) ಈ ಕುರಿತಾಗಿ ಮಾತನಾಡಿದ್ದು, ಚಿಕನ್ ತಿನ್ನುವ ಮೂಲಕ ಜನರು ಎಎಂಆರ್’ಗೆ ಬಲಿಯಾಗುತ್ತಿದ್ದಾರೆ. ಪ್ರೋಟೀನ್, ಖನಿಜಗಳು ಮತ್ತು ಜೀವಸತ್ವಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಕನ್ ಆರೋಗ್ಯಕ್ಕೆ ಹೇಗೆ ಅಪಾಯಕಾರಿ ಎಂದು ಹೇಳಿದ್ದಾರೆ.

ಚಿಕನ್‌ನಲ್ಲಿ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳು ತುಂಬಿವೆ ಎಂದು ವೈದ್ಯರು ಹೇಳಿದ್ದಾರೆ. ಹೀಗಿದ್ದಾಗ, ಈ ಪೋಷಕಾಂಶಗಳು ನಿಮ್ಮನ್ನು ಹೇಗೆ ಅನಾರೋಗ್ಯಕ್ಕೆ ಒಳಪಡಿಸಬಹುದು? ಎನ್ನುವ ಪ್ರಶ್ನೆ ಉದ್ಭವವಾಗಬಹುದು. ಆದರೆ, ನೆನಪಿರಲಿ, ಕೋಳಿಯನ್ನು ಆರೋಗ್ಯಕರವಾಗಿ ಮತ್ತು ತಾಜಾವಾಗಿಸಲು ಇತ್ತೀಚಿನ ದಿನಗಳಲ್ಲಿ ಕೋಳಿಗಳಿಗೆ ಪ್ರತಿಜೀವಕಗಳು ಅಥವಾ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ಇದರಿಂದಾಗಿ ಕೋಳಿಯ ದೇಹದಲ್ಲಿ ಬಹಳಷ್ಟು ಆ್ಯಂಟಿಬಯೋಟಿಕ್ ಸಂಗ್ರಹಗೊಳ್ಳುತ್ತವೆ. ಇದು ಕೋಳಿ ತಿನ್ನುವವರ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಕೋಳಿಯನ್ನು ತಿಂದಾಗ ಕೋಳಿಯೊಳಗಿನ ಆ್ಯಂಟಿಬಯೋಟಿಕ್ ತಿನ್ನುವವರ ದೇಹದಲ್ಲಿ ಸಂಗ್ರಹವಾಗುತ್ತದೆ.

ಚಿಕನ್ ತಿನ್ನುವುದರಿಂದ ದೇಹಕ್ಕೆ ಬರುವ ಪ್ರತಿಜೀವಕಗಳನ್ನ ಸ್ವಲ್ಪ ಸಮಯದ ನಂತ್ರ ಆಂಟಿಮೈಕ್ರೊಬಿಯಲ್ ಪ್ರತಿರೋಧ ಎಎಂಆರ್ ಆಗಿ ಪರಿವರ್ತಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹವು ಅನೇಕ ರೀತಿಯ ಸೋಂಕುಗಳಿಗೆ ಬಲಿಯಾಗಬಹುದು. ಆತಂಕಕಾರಿ ವಿಷಯವೆಂದರೆ ಸೋಂಕಿನ ಚಿಕಿತ್ಸೆಯೂ ತುಂಬಾ ಕಷ್ಟಕರವಾಗಿರುತ್ತದೆ.

ಹೀಗಾಗಿ ಆ್ಯಂಟಿಬಯೋಟಿಕ್ಸ್ ದೇಹದಲ್ಲಿ ಸಂಗ್ರಹವಾಗುವ ರೀತಿ ಎಎಂಆರ್ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇಂತಹ ಪರಿಸ್ಥಿತಿಯಲ್ಲಿ ಸಸ್ಯಾಹಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಹಸಿರು ತರಕಾರಿಗಳು, ಪನೀರ್, ಹಾಲು ಮತ್ತು ಮೊಸರು ಬಳಸಬೇಕು. ಇದು ಪ್ರೋಟೀನ್‌ನ ಉತ್ತಮ ಮೂಲವೂ ಆಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Congress – BJP: ರಾಹುಲ್ ಗಾಂಧಿ, ಯತೀಂದ್ರ ಸಿದ್ದರಾಮಯ್ಯಗೂ ನಿರುದ್ಯೋಗ ಭತ್ಯೆ!? ಬಿಜೆಪಿ ಹೇಳಿದ್ದೇನು?

Leave A Reply

Your email address will not be published.