Congress – BJP: ರಾಹುಲ್ ಗಾಂಧಿ, ಯತೀಂದ್ರ ಸಿದ್ದರಾಮಯ್ಯಗೂ ನಿರುದ್ಯೋಗ ಭತ್ಯೆ!? ಬಿಜೆಪಿ ಹೇಳಿದ್ದೇನು?

karnataka bjp tweet grant unemployment allowance to rahul gandhi

Congress – BJP: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್(Congress) ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಜಾರಿ ಸರ್ಕಾರ ರಚನೆಯಾದರೂ ವಿಳಂಬವಾಗಿತ್ತು. ಹೀಗಾಗಿ ಬಿಜೆಪಿ(Congress – BJP) ಕಾಂಗ್ರೆಸ್ ಅನ್ನು ಅವಕಾನ ಸಿಕ್ಕಲೆಲ್ಲ ಟೀಕಿಸಿ ಕಾಲೆಳೆದಿತ್ತು. ಆದರೆ ನಿನ್ನೆ ದಿನ 5 ಗ್ಯಾರಂಟಗಳ ಅನುಷ್ಠಾನಗೊಳಿಸಿದ ಕಾಂಗ್ರೆಸ್ ಸುದ್ದಿಗೋಷ್ಠಿ ಆದ ಬಳಿಕ ಟ್ವೀಟ್ ಮಾಡಿ ಬಿಜೆಪಿಯ ನಾಯಕರಿಗೆ ಟಾಂಗ್ ನೀಡಿತ್ತು. ಈ ಬೆನ್ನಲ್ಲೇ ಮತ್ತೆ ಬಿಜೆಪಿಯು ಟ್ವೀಟ್ ಮಾಡಿ ಕಾಂಗ್ರೆಸ್ ಗೆ ಕೌಂಟರ್ ನೀಡಿದೆ.

ಹೌದು, ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ(5 Guaranty)ಯೋಜನೆಗಳ ಬಗ್ಗೆ ಆರಂಭದಿಂದಲೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಹೀಗಾಗಿ ಸಿದ್ದರಾಮಯ್ಯ ಯೋಜನೆಗಳನ್ನು ಘೋಷಿಸುತ್ತಿದ್ದಂತೆ, ಬಸವರಾಜ ಬೊಮ್ಮಾಯಿ(Basavaraj bommai) ಹಾಗೂ ನಳಿನ್ ಕುಮಾರ್ ಕಟೀಲ್(Nalin Kumar kateel) ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ(Current free)ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಟಾಂಗ್ ಕೊಟ್ಟಿತ್ತು.

ಜತೆಗೆ ಶೋಭಾ ಕರಂದ್ಲಾಜೆ(Shobha karandlaje) ಅವರನ್ನು ಟ್ಯಾಗ್ ಮಾಡಿ ನಿಮಗೂ ಪ್ರಯಾಣ ಫ್ರೀ! ಸಿ.ಟಿ. ರವಿ(C T Ravi) ಅವರೇ, ನಿಮ್ಮ ಮನೆಯವರಿಗೂ 2000 ರೂ. ಫ್ರೀ. ಅಲ್ಲದೆ ಬಜರಂಗದಳದ(Bajrangdal) ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಹೇಳಿಕೊಂಡಿತ್ತು.

ಇದೀಗ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವ ನಿರುದ್ಯೋಗ ಭತ್ಯೆಯನ್ನು ಪಧವೀಧರರಾಗಿದ್ದರೆ ರಾಹುಲ್ ಗಾಂಧಿ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೂ ದಯಪಾಲಿಸಿ ಎಂದು ರಾಜ್ಯ ಬಿಜೆಪಿ ಹೇಳಿದೆ. ಒಟ್ಟಿನಲ್ಲಿ ಎರಡೂ ಪಾರ್ಟಿಗಳ ವೈಯಕ್ತಿಕ ಟ್ವೀಟ್ ಸಮರ ನೋಡುಗರಿಗಂತೂ ಒಳ್ಳೆಯ ಮಜ ನೀಡುತ್ತಿದೆ.

 

 

ಇದನ್ನು ಓದಿ : Ration: ಜನತೆಗೆ ಸಿಹಿಸುದ್ದಿ ; ಜುಲೈ 1 ರಿಂದ 10 ಕೆಜಿ ಆಹಾರ ಧಾನ್ಯ ಲಭ್ಯ!! 

Leave A Reply

Your email address will not be published.