Home latest Crime News: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದ ಪಾಪಿಗಳು ; ಅಷ್ಟಕ್ಕೂ ಯಾಕಾಗಿ...

Crime News: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದ ಪಾಪಿಗಳು ; ಅಷ್ಟಕ್ಕೂ ಯಾಕಾಗಿ ಈ ಕೃತ್ಯ?

Odisha
Image source: The Indian law

Hindu neighbor gifts plot of land

Hindu neighbour gifts land to Muslim journalist

Odisha: ಕುಟುಂಬದ ಜಗಳಗಳು ಸಾಮಾನ್ಯ. ಅದರಲ್ಲೂ ಆಸ್ತಿ ವಿಷಯಕ್ಕೆ ಅಣ್ಣ-ತಮ್ಮಂದಿರ ನಡುವೆ ಜಗಳಗಳು ಪ್ರತೀ ಕುಟುಂಬದಲ್ಲೂ ಇದ್ದೇ ಇರುತ್ತದೆ. ಅದೆಷ್ಟೋ ಇಂತಹ ಜಗಳಗಳು ಕೊನೆಗೆ ಸಾವಿನಲ್ಲಿ (death) ಅಂತ್ಯವಾಗಿರುತ್ತದೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ಒಡಿಶಾದ (odisha)  ಬರ್ಗರ್‌ನಲ್ಲಿ ನಡೆದಿದೆ (Crime News).

ಎರಡು ಕುಟುಂಬದ ಮಧ್ಯೆ ಜಮೀನು ವಿವಾದ ಉಂಟಾಗಿದ್ದು, ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ.

ಎರಡು ಕುಟುಂಬದ ಮಧ್ಯೆ ಕಳೆದ ಕೆಲ ವರ್ಷಗಳಿಂದ ಜಮೀನು ವಿವಾದ ಉಂಟಾಗಿದ್ದು, ಮೃತರ ಕುಟುಂಬಕ್ಕೆ ಆರೋಪಿಗಳು ಈ ಮೊದಲೇ ಕೊಲೆ ಬೆದರಿಕೆ ಹಾಕಿದ್ದರು. ಇದೀಗ ಈ ವಿವಾದ ಕಳೆದ ಸೋಮವಾರ ತಡರಾತ್ರಿ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಮೃತರ ಮನೆಗೆ ನುಗ್ಗಿದ ಆರೋಪಿಗಳು, ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಘಟನೆ ಪರಿಣಾಮ ತೀವ್ರ ಗಾಯಗೊಂಡ ನಾಲ್ವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಶ್ಚರ್ಯವೆಂದರೆ, ಮರುದಿನ ಬೆಳಗ್ಗೆ ಕೊಲೆಗೈದ ಆರೋಪಿಯೇ ಗ್ರಾಮಸ್ಥರ ಮುಂದೆ ವಿಷಯ‌ ಬಹಿರಂಗಪಡಿಸಿದ್ದಾನೆ.

ಗ್ರಾಮಸ್ಥರು ಸರಣಿ ಕೊಲೆಗೆ ಅಚ್ಚರಿಗೊಂಡಿದ್ದು, ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಇನ್ನು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳ ಮತ್ತು ವೈಜ್ಞಾನಿಕ ತಂಡದೊಂದಿಗೆ ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Free Stent: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಹಿಸುದ್ದಿ ; ಹೃದಯ ರೋಗಿಗಳಿಗೆ ಉಚಿತ ಸ್ಟೆಂಟ್ ಅಳವಡಿಕೆ!!