Brazil: 16ರ ಪೋರಿಯನ್ನು ವರಿಸಿದ ಬೊಚ್ಚು ಬಾಯಿ, ಬೋಳು ತಲೆಯ 65ರ ಮೇಯರ್! ಬ್ಯೂಟಿಫುಲ್ ಹೆಂಡ್ತಿಗಾಗಿ ಅತ್ತೆಗೆ ನೀಡಿದ ಆಫರ್ ಕೇಳಿದ್ರೆ ಶಾಕ್ ಆಗ್ತೀರಾ!

65-year-old Brazil millionaire marries 16-year-old schoolgirl

Brazil: ಆತ ಬೊಚ್ಚು ಬಾಯಿಯ, ಬೋಳು ತಲೆಯ ಮುದುಕ. ಕಡಿಮೆ ಅಂದರೂ 60-65 ವರ್ಷ ವಯಸ್ಸಾಗಿರಬಹುದು. ಆದರೆ ಈ ಆಸಾಮಿಗೆ 16ರ ಪೋರಿಯನ್ನು ಮದುವೆಯಾಗೋ ಬಯಕೆ. ಬಯಕೆ ಏನು, ಆಗೇ ಬಿಟ್ಟಿದ್ದಾನೆ. ಈಕೆಯನ್ನು ಪಡೆಯುವ ಸಲುವಾಗಿ ಈ ಮುದುಕ ಆಕೆಯ ತಾಯಿಗೆ ಅಂದರೆ ತನಗೆ ಹೆಣ್ಣು ಕೊಡೋ ಅತ್ತೆಗೆ ಕೊಟ್ಟ ದೊಡ್ಡ ಗಿಫ್ಟ್ ಬಗ್ಗೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!

ಹೌದು, ದಕ್ಷಿಣ ಬ್ರೆಜಿಲ್‌ (mayor of Araucaria, southern Brazil) ಮುನ್ಸಿಪಾಲಿಟಿ ಮೇಯರ್, 65 ವರ್ಷದ ಹಿಸ್ಸಾಮ್ ಹುಸೇನ್ ದೇಹೈನಿ (Hissam Hussein Dehaini) ಅವರು 16 ವರ್ಷದ ಹುಡುಗಿ ಕೌನ್ ರೋಡ್ ಕ್ಯಾಮಾರ್ಗೊಳನ್ನು (Kauane Rode Camargo) ಕಾನೂನುಬದ್ಧವಾಗಿ ವಿವಾಹವಾಗಿ, ನಂತರ ದೇಹೈನಿಯು ಹುಬ್ಬೇರಿಸಿ, ಸಂಭ್ರಮಿಸಿದ್ದಾನೆ. ನಂತರ ದೊಡ್ಡ ವಿವಾದವನ್ನೂ ಸೃಷ್ಟಿಸಿದ್ದಾರೆ. ಆ ವಿಚಾರ ಕೇಳಿದ್ರೆ ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ.

ಯಾಕಂದರೆ 16ರ ಸುರ ಸುಂದರಾಂಗಿಯನ್ನು ವರಿಸಲು ಈ ಮೇಯರ್ ಮುದುಕ ತನ್ನ ಅತ್ತೆಗೆ ನೀಡಿದ ಗಿಫ್ಟ್ ನಿಮಗೆ ಹಾಗಾಗಿಸುತ್ತದೆ. ಅದೇನೆಂದರೆ ಹದಿಹರಯದ ಬಾಲಕಿಯನ್ನು ಮದುವೆಯಾದ ಕೆಲವು ದಿನಗಳ ನಂತರ ಅವರ ತಾಯಿಯನ್ನು ಅಂದರೆ ಅತ್ತೆಯನ್ನು (mother-in-law) ಅರೌಕೇರಿಯಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರನ್ನಾಗಿ ನೇಮಿಸಿದ್ದಾನೆ!

ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಶ್ರೀಮಂತ ಬ್ರೆಜಿಲಿಯನ್, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುತ್ತಿದ್ದಂತೆ ತೀವ್ರ ಆಕ್ರೋಶ, ಟೀಕೆಗಳನ್ನು ಎದುರಿಸಿ ತಮ್ಮ ಪಕ್ಷಕ್ಕೆ, ಮತ್ತು ಸರ್ಕಾರದಲ್ಲಿನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ವಧುವಿನ ವಯಸ್ಸು 16 ದಾಟುವುದಕ್ಕೆ ಕಾದಿದ್ದು, ಮರು ದಿನವೇ ಆಕೆಯನ್ನು ಮೇಯರ್ ಕಾನೂನುಬದ್ಧವಾಗಿ ಮದುವೆಯಾದರು ಎಂಬ ಮಾಹಿತಿಯೂ ಇದೆ. ಅಲ್ಲದೆ ಪ್ರೌಢಶಾಲಾ ವಿದ್ಯಾರ್ಥಿನಿ ಕಳೆದ ವರ್ಷ ಮಿಸ್ ಅರೌಕೇರಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಗಳಿಸಿದ್ದರಂತೆ!

ಹಿಸ್ಸಾಮ್ ಹುಸೇನ್ ದೇಹೈನಿ ಅವರ ಅತ್ತೆ, ಮರ್ಲಿನ್ ನಗರದ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಆದರೆ ಕಡಿಮೆ ಸಂಬಳ ಮತ್ತು ಕಡಿಮೆ ಪ್ರಭಾವವನ್ನು ಹೊಂದಿದ್ದರು. ಆದರೆ ಈಗ ವಿವಾದಾತ್ಮಕ ವಿವಾಹದ ಮರುದಿನ ಅತ್ತೆಯ ನೇಮಕಾತಿ ಸುದ್ದಿ ಅರೌಕೇರಿಯಾದಲ್ಲಿ ಭಾರಿ ಹಗರಣವನ್ನು ಹುಟ್ಟುಹಾಕಿದೆ.

ಅಂದಹಾಗೆ ಬ್ರೆಜಿಲಿಯನ್ ಕಾನೂನಿನ ಪ್ರಕಾರ, 16 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ತಮ್ಮ ಪೋಷಕರ ಒಪ್ಪಿಗೆಯೊಂದಿಗೆ ಕಾನೂನುಬದ್ಧವಾಗಿ ಮದುವೆಯಾಗಬಹುದು. ಆದ್ದರಿಂದ ಯುವ ವಧುವಿನ ತಾಯಿಯನ್ನು ಪುರಸಭೆಯ ಆಡಳಿತದಲ್ಲಿ ಉತ್ತಮ ಸಂಬಳದ ಸ್ಥಾನಕ್ಕೆ ನೇಮಕ ಮಾಡುವುದು ಒಂದು ರೀತಿಯ ಲಂಚಕೋರತನ ಎಂದು ಪರಿಗಣಿಸಲಾಗಿದೆ.

ಇನ್ನು, ತಮ್ಮ ಮೇಲಿನ ಆರೋಪಗಳಿಗೆ ಮೇಯರ್ ದೇಹೈನಿ ಪ್ರತಿಕ್ರಿಯಿಸಿದ್ದು, ಕಚೇರಿಯ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಯಾಕೆಂದ್ರೆ ನೇಮಕಾತಿಯು ಮೇಯರ್​​ ವಿವೇಚನೆಗೆ ಬಿಟ್ಟಿದ್ದು, ಅದರ ಅನುಸಾರವೇ ಎಲ್ಲವೂ ನಡೆದಿದೆ. ಮೆಯರ್​​ ಅವರ ಅತ್ತೆಯು ಪುರಸಭೆಯ ಆಡಳಿತದಲ್ಲಿ ನೇಮಕಕ್ಕೆ ಅಗತ್ಯವಿರುವ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ವಾದಿಸಿದ್ದಾರೆ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: Fast and Furious : ‘ಫಾಸ್ಟ್ and ಫ್ಯೂರಿಯಸ್’ ಸಿನಿಮಾ ನೋಡೋರಿಗೆ ವೆಬ್‌ಸೈಟ್‌ ಕೊಡ್ತು ಬಿಗ್ ಆಫರ್! ಎಲ್ಲಾ ಸಿನಿಮಾವನ್ನು ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1 ಸಾವಿರ ಡಾಲರ್!

Leave A Reply

Your email address will not be published.