Karnataka Election 2023: ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವಧನ ; ಯಾರಿಗೆ ಎಷ್ಟು? ಸಂಪೂರ್ಣ ವಿವರ ಇಲ್ಲಿದೆ

Honorarium of officers and staff attending Karnataka election duty

Karnataka Election Duty: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಹಿನ್ನೆಲೆ ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಮೇ 13 ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಮತದಾನ ಹಾಗೂ ಮತಏಣಿಕೆ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ (Karnataka Election Duty) ಅಧಿಕಾರಿ, ಸಿಬ್ಬಂದಿಗಳಿಗೆ ಗೌರವಧನ ನೀಡಲಾಗುತ್ತದೆ. ಯಾರಿಗೆ ಎಷ್ಟು ಮೊತ್ತ ನೀಡಲಾಗುತ್ತದೆ ಎಂಬುದರ ವಿವರ ಇಲ್ಲಿದೆ.

ಮತಗಟ್ಟೆ ಅಧಿಕಾರಿಗಳು, ಮತಏಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವಧನ ಪಾವತಿಸಲು ಸೂಚಿಸಲಾಗಿದ್ದು, ಇದು ರಾಜ್ಯದ ಎಲ್ಲಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೂ ಅನ್ವಯಿಸಲಿದೆ ಎಂದು ಹೇಳಲಾಗಿದೆ.

ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು
ಗೌರವಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಕರ್ನಾಟಕ ವಿಧಾನಸಭಾ ಸಾರ್ವತ್ರಿಕೆ ಚುನಾವಣೆ-2023ರ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳಿಗೆ ಗೌರವಧನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ 24-05-2018 ರ ನಡವಳಿ ಆದೇಶದ ಪ್ರಕಾರ ಗೌರವಧನವನ್ನು ಪಾವತಿಸಲಾಗುತ್ತದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ಗೌರವಧನವನ್ನು ನಿಗದಿಪಡಿಸಲಾಗಿದೆ” ಎಂದು ಹೇಳಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿ, ಸಿಬ್ಬಂದಿಗಳ ಗೌರವಧನದ ವಿವರ ಇಲ್ಲಿದೆ:-

ಪ್ರೆಸಿಡಿಂಗ್ ಆಫೀಸರ್ ಗಳಿಗೆ ರೂ.500ರಂತೆ 4 ದಿನಕ್ಕೆ ರೂ.2,000
ನೀಡಲಾಗುತ್ತದೆ. ಎ ಆರ್ ಪಿ.ಓ ಅವರಿಗೆ ರೂ.350ರಂತೆ ನಾಲ್ಕು ದಿನಕ್ಕೆ ರೂ.1,400, ಪೊಲಿಂಗ್ ಆಫೀಸರ್ ಗೆ ರೂ.350ರಂತೆ 4 ದಿನಕ್ಕೆ ರೂ.1050, ಮೈಕ್ರೋ ವೀಕ್ಷಕರಿಗೆ ರೂ.1,500, ಪೊಲಿಂಗ್ ದಿನದ ಬಿಎಲ್‌ಓಗಳಿಗೆ ರೂ.350 ಹಾಗೂ ಡಿ-ಗ್ರೂಪ್ ಸಿಬ್ಬಂದಿಗೆ ರೂ.200 ನೀಡಲಾಗುತ್ತದೆ.

ಇದನ್ನೂ ಓದಿ:Kantara Prequel: ʼಕಾಂತಾರ 2′ ಸ್ಕ್ರಿಪ್ಟ್‌ ಫಸ್ಟ್‌ ಡ್ರಾಫ್ಟ್‌ ರೆಡಿ?! ಶೂಟಿಂಗ್‌ ಶೀಘ್ರ ಆರಂಭ

Leave A Reply

Your email address will not be published.