Beer Bus: ಎಣ್ಣೆ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ! ಈ ಬಸ್ಸಿನಲ್ಲಿ ಪ್ರಯಾಣಿಸಿದರೆ ನಿಮಗೆ ಸಿಗಲಿದೆ 120 ನಿಮಿಷಗಳವರೆಗೆ ಫ್ರೀ ಬಿಯರ್!

Beer Bus : ಮದ್ಯ ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ಎಣ್ಣೆಪ್ರಿಯರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ ನೋಡಿ! ಈ ಬಸ್ಸಿನಲ್ಲಿ ಪ್ರಯಾಣಿಸಿದರೆ 120 ನಿಮಿಷಗಳವರೆಗೆ ಅನ್ಲಿಮಿಟೆಡ್ ಬಿಯರ್(Beer Bus) ಫ್ರೀಯಾಗಿ ಸಿಗುತ್ತೆ! ಅರೇ, ಈ ರೀತಿ ಆಫರ್ ಎಲ್ಲಿರೋದು ಎಂದು ಯೋಚಿಸುತ್ತಿದ್ದರೆ ನೀವು ಈ ಮಾಹಿತಿ ಓದಲೇಬೇಕು.

ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ. ಅಂತಹ ಮದ್ಯ ಪ್ರಿಯರಿಗೆ ಇಲ್ಲಿದೆ ಬಂಪರ್ ಸಿಹಿ ಸುದ್ದಿ! ಬೇಸಿಗೆಯ ಸಮಯದಲ್ಲಿ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು (Tourists) ಭೇಟಿ ನೀಡುವುದು ಸಾಮಾನ್ಯ. ಹೀಗಾಗಿ, ಜನದಟ್ಟಣೆ ಕೂಡ ಹೆಚ್ಚಿರುತ್ತದೆ. ಅನೇಕ ರಾಜ್ಯಗಳಲ್ಲಿ ಸರ್ಕಾರ ಪ್ರವಾಸೋದ್ಯಮವನ್ನು(Tourism) ಉತ್ತೇಜಿಸಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ.

ಪುದುಚೇರಿ ಹೆಚ್ಚು ಯುವಕರನ್ನು ಆಕರ್ಷಿಸುವ ಪ್ರವಾಸಿ ತಾಣವಾಗಿದ್ದು (Tourist Place), ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕೂಡ ದೇಶದ ಪ್ರವಾಸಿ ತಾಣಗಳಲ್ಲೊಂದು. ಕ್ಯಾಟಮರನ್ ಬ್ರೂಯಿಂಗ್ ಕಂಪನಿ (Catamaran Brewing Company) ಮದ್ಯ ಸೇವಿಸುವವರನ್ನು ಆಕರ್ಷಿಸುವ ಸಲುವಾಗಿ ಬಿಯರ್ ಬಸ್ ಪರಿಚಯಿಸಲು ತೀರ್ಮಾನ ಕೈಗೊಂಡಿದೆ. ಕಂಪನಿಯು ತಮ್ಮ ಮೈಕ್ರೊ ಬ್ರೂವರಿ ಬಿಯರ್ ರುಚಿಯೊಂದಿಗೆ ಪ್ರವಾಸದ ಸೌಲಭ್ಯವನ್ನು ನೀಡುತ್ತಿದೆ. ಈ ವೇಳೆ 120 ನಿಮಿಷಗಳ ಅನ್​ಲಿಮಿಟೆಡ್​ ಬಿಯರ್ ಸೇವೆ ಮತ್ತು ರುಚಿಕರವಾದ ಮೂರು ಬಗೆಯ ಊಟವನ್ನು​ ನೀಡಲಾಗುತ್ತದೆ ಎಂದು ಕಂಪನಿಯ ಪಾಲುದಾರರೊಬ್ಬರು ಮಾಹಿತಿ ನೀಡಿದ್ದಾರೆ. ಪ್ರವಾಸಿಗರನ್ನು ಅವರ ಆಯ್ಕೆಯ ಅನುಸಾರ ಕೇಂದ್ರಾಡಳಿತ ಪ್ರದೇಶದ ಒಂದು ಅಥವಾ ಎರಡು ಜನಪ್ರಿಯ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ.

ಪ್ರಸ್ತುತ ಈ ಸೇವೆಯನ್ನು ಚೆನ್ನೈಯಿಂದ ಪುದುಚೇರಿಗೆ ಮಾತ್ರ ನೀಡಲಾಗುತ್ತಿದೆ. ಚೆನ್ನೈನಿಂದ (Chennai) ಪುದುಚೇರಿಗೆ ವಾರಾಂತ್ಯದಲ್ಲಿ ಒಂದು ದಿನದ ಪ್ಯಾಕೇಜ್ ಟ್ರಿಪ್​ ಆಗಿದ್ದು, ಕ್ಯಾಟಮರನ್ ಬ್ರೂಯಿಂಗ್ ಕಂಪನಿ ಏಪ್ರಿಲ್​ 22ರಂದು ಹಾಪ್ ಆನ್ ಬ್ರೀವರಿ ಟೂರ್ ಬಸ್ ಅಥವಾ ಬಿಯರ್ ಬಸ್ ಅನ್ನು ಪರಿಚಯಿಸಲು ರೆಡಿಯಾಗಿದೆ.ಬಸ್ ಪ್ರಯಾಣದ ಸಂದರ್ಭದಲ್ಲಿ ಮದ್ಯ ವಿತರಣೆಗೆ ಸರ್ಕಾರಿ ನಿಯಮಗಳು ಅವಕಾಶ ನೀಡದ ಹಿನ್ನೆಲೆ ಬಸ್ ನಲ್ಲಿ ಬಿಯರ್ ನೀಡಲಾಗುವುದಿಲ್ಲ. ಆದರೆ ಪುದುಚೇರಿಯಲ್ಲಿರುವ ಬ್ರೀವರಿಯಲ್ಲಿ (ಬಿಯರ್​ ತಯಾರಾಗುವ ಸ್ಥಳ) ನೀಡಲಾಗುವ ಕುರಿತು ಸಂಸ್ಥೆ ಖಚಿತಪಡಿಸಿದೆ.

ವೀಕೆಂಡ್ (Weekend) ಪ್ರತಿಕ್ರಿಯೆಯ ಆಧಾರದ ಅನುಸಾರ, ರಜಾ ದಿನಗಳು ಹಾಗೂ ವಾರದ ಮಧ್ಯದ ದಿನಗಳಲ್ಲಿ ಈ ಯೋಜನೆಯನ್ನು ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಬೆಂಗಳೂರಿನಂತಹ (Bangalore)ಇತರ ನಗರಗಳಿಂದಲೂ ಭವಿಷ್ಯದಲ್ಲಿ ಬಿಯರ್ ಬಸ್ ಆರಂಭಿಸುವ ಬಗ್ಗೆಯೂ ಯೋಜನೆ ಪ್ರಗತಿಯಲ್ಲಿದೆ ಎನ್ನಲಾಗಿದೆ. ಈ ಬಿಯರ್​ ಬಸ್ ಶನಿವಾರ ಮತ್ತು ಭಾನುವಾರ ಮಾತ್ರ ಕಾರ್ಯ ನಿರ್ವಹಿಸಲಿದೆ. 35ರಿಂದ 40 ಪ್ರವಾಸಿಗರ ಗುಂಪನ್ನು ಚೆನ್ನೈನ ಒಂದು ಪಾಯಿಂಟ್ನಿಂದ ಬೆಳಗ್ಗೆ 10.30 ಗಂಟೆಗೆ ಪಿಕಪ್ ಮಾಡಿ ಅದೇ ದಿನ ರಾತ್ರಿ 9 ಗಂಟೆಗೆ ಚೆನ್ನೈಗೆ ಬಿಡಲಾಗುತ್ತದೆ.

ಪ್ರವಾಸಿಗರನ್ನು ಎಸಿ ವೋಲ್ವೋ ಬಸ್ನಲ್ಲಿ 35-40 ಪ್ರವಾಸಿಗರನ್ನು ಗುಂಪಾಗಿ ಸಾಗಿಸಲು ಕಂಪನಿಯು ಐಷಾರಾಮಿ ಬಸ್ ಆಪರೇಟರ್​ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಐಟಿ ವೃತ್ತಿಪರರು ಮತ್ತು ಎಂಎನ್ಸಿ ಉದ್ಯೋಗಿಗಳು ಕಂಪನಿಯ ಮುಖ್ಯ ಟಾರ್ಗೆಟ್ ಆಗಿದ್ದು, ಬಿಯರ್ ಪ್ರೇಮಿಗಳು, ಕುಡಿಯದವರು ಹಾಗೂ ಮಕ್ಕಳೊಂದಿಗೆ ಹೋಗುವ ವಯಸ್ಕರಿಗೆ ಪ್ರತ್ಯೇಕ ದರಗಳನ್ನು ನಿಗದಿ ಮಾಡಲಾಗಿದೆ.

 

ಇದನ್ನು ಓದಿ : Antilia: ಅಂಬಾನಿಯ ದುಬಾರಿ ಮನೆಗೆ ಆಂಟಿಲಿಯಾ ಎಂದು ಯಾಕೆ ಹೆಸರಿಟ್ಟಿದ್ದಾರೆ. ಏನಿದರ ಅರ್ಥ? 

Leave A Reply

Your email address will not be published.