Antilia: ಅಂಬಾನಿಯ ದುಬಾರಿ ಮನೆಗೆ ಆಂಟಿಲಿಯಾ ಎಂದು ಯಾಕೆ ಹೆಸರಿಟ್ಟಿದ್ದಾರೆ. ಏನಿದರ ಅರ್ಥ?

Antilia : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಇವರು ಅತ್ಯಂತ ದುಬಾರಿ ಮನೆಯನ್ನು (Mukesh Ambani house) ಹೊಂದಿದ್ದಾರೆ. ಈ ಮನೆಯ ಹೆಸರು ಆಂಟಿಲಿಯಾ (Antilia). ಆಂಟಿಲಿಯಾ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ.

ಆಂಟಿಲಿಯಾ ದಕ್ಷಿಣ ಮುಂಬೈನ ಹೃದಯಭಾಗದಲ್ಲಿದೆ. ಇದು ಮೂರು ಹೆಲಿಪ್ಯಾಡ್‌ಗಳನ್ನು ಮತ್ತು ವಿದೇಶದಲ್ಲಿ ಮುಂಬೈ ಮತ್ತು ಅರೇಬಿಯನ್ ಸಮುದ್ರದ ಸ್ಕೈಲೈನ್‌ಗಳನ್ನು ಹೊಂದಿದೆ. ಈ ಮನೆಯನ್ನು ಚಿಕಾಗೋ ಮೂಲದ ಎರಡು ಪ್ರಸಿದ್ಧ ಯುಎಸ್‌ ಮೂಲದ ಆರ್ಕಿಟೆಕ್ಚರ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಹಿರ್ಷ್ ಬೆಡ್ನರ್ ಅಸೋಸಿಯೇಟ್ಸ್ ವಿನ್ಯಾಸಗೊಳಿಸಿದ್ದಾರೆ. ಆಂಟಿಲಿಯಾ (Antilia) ನಿರ್ಮಾಣ 2006 ರಲ್ಲಿ ಪ್ರಾರಂಭವಾಗಿ, 2010 ರಲ್ಲಿ ಪೂರ್ಣಗೊಂಡಿತು. ಈ ಮನೆಯನ್ನು ಆಸ್ಟ್ರೇಲಿಯನ್ ಮೂಲದ ನಿರ್ಮಾಣ ಕಂಪನಿ ಲೈಟನ್ ಹೋಲ್ಡಿಂಗ್ಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಕಟ್ಟಡವು 8 ರಷ್ಟು ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಫೋರ್ಬ್ಸ್ ಪ್ರಕಾರ, ಅಂಬಾನಿ ಕುಟುಂಬದ ನಿವಾಸದ ವೆಚ್ಚ ಸುಮಾರು 1ರಿಂದ 2 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದ್ರೆ, 6,000 ಕೋಟಿ ಮತ್ತು 12,000 ಕೋಟಿ ರೂ. ಎನ್ನಲಾಗಿದೆ.

ದುಬಾರಿ, ಭವ್ಯ ನಿವಾಸ ಆಂಟಿಲಿಯಾ ಮನೆಯು ಸುಮಾರು 173 ಮೀಟರ್ ಎತ್ತರವಾಗಿದೆ ಮತ್ತು 37000 ಸ್ಕ್ವೇರ್ ಫೀಟ್ ಅನ್ನು ಹೊಂದಿದೆ. 27 ಅಂತಸ್ತಿನ ಈ ಆಂಟಿಲಿಯಾ ಒಟ್ಟು ಒಂಬತ್ತು ಲಿಫ್ಟ್‌ಗಳನ್ನು ಹೊಂದಿದೆ. ಆಂಟಿಲಿಯಾ ಪ್ರತ್ಯೇಕ ಮನರಂಜನಾ ಸ್ಥಳ, ಭವ್ಯ ಪ್ರವೇಶ, ವಿಶಾಲವಾದ ಕೋಣೆಗಳು, 6-ಅಂತಸ್ತಿನ ಕಾರ್ ಪಾರ್ಕಿಂಗ್, ಯೋಗ ಕೇಂದ್ರ, ನೃತ್ಯ ಸ್ಟುಡಿಯೋ, ಆರೋಗ್ಯ ಸ್ಪಾ ಮತ್ತು ಈಜುಕೊಳ ಸೇರಿದಂತೆ ಹಲವು ಅದ್ಭುತವಾದ ವ್ಯವಸ್ಥೆಗಳನ್ನು ಒಳಗೊಂಡಿದೆ. ಈ ಮನೆ ನೋಡಲು ಆಕರ್ಷಣೀಯವಾಗಿದ್ದು, ಮೈನವಿರೇಳಿಸುವಂತಿದೆ. ಆಂಟಿಲಿಯಾವನ್ನು ನೋಡಿಕೊಳ್ಳಲು ಸುಮಾರು 600 ಸಿಬ್ಬಂದಿಗಳಿದ್ದಾರೆ. ಆದರೆ, ಈ ಭವ್ಯ ಬಂಗಲೆಗೆ ಅಂಟಿಲಿಯಾ ಎಂದು ಹೆಸರಿಟ್ಟಿರುವುದು ಯಾಕೆ ಗೊತ್ತಾ?

ಅಂಟಿಲಿಯಾ ಎಂಬುವುದು ಐಸ್‌ಲ್ಯಾಂಡ್‌ನ ಹೆಸರಾಗಿದೆ. ಆಂಟಿಲಿಯಾ ಮನೆಯು ಅಟ್ಲಾಂಟಿಕ್ ಸಾಗರದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್‌ನ ಪಶ್ಚಿಮಕ್ಕೆ ಫ್ಯಾಂಟಮ್ ದ್ವೀಪದಿಂದ ಸ್ಫೂರ್ತಿ ಪಡೆದಿದೆ. ಈ ದ್ವೀಪವನ್ನು ಐಲ್ ಆಫ್ ಸೆವೆನ್ ಸಿಟೀಸ್ ಎಂದು ಕೂಡ ಕರೆಯಲಾಗುತ್ತದೆ. ಈ ದ್ವೀಪ 15ನೇ ಸೆಂಚುರಿಯ ಮ್ಯಾಪ್‌ನಲ್ಲಿ ಕಾಣಸಿಗುತ್ತದೆ. ಅತೀಂದ್ರಿಯ ದ್ವೀಪದಂತೆಯೇ, ಆಂಟಿಲಿಯಾ, ತುಂಬಾ ತನ್ನದೇ ಆದ ಮೋಡಿಗಳಿಂದ ತುಂಬಿದೆ.
ಆಂಟಿಲಿಯಾ ಎಂಬ ಹೆಸರು ವಸತಿ ಕಟ್ಟಡಕ್ಕೆ ಸರಿಹೊಂದುತ್ತದೆ. ಯಾಕೆಂದರೆ ಇದು ಸೂರ್ಯ ಮತ್ತು ಕಮಲ ಎರಡನ್ನು ಸೇರಿಸಿದ ಹೆಸರು ಆಗಿದೆ. ಸಸ್ಯಗಳ ವಿಚಾರಕ್ಕೆ ಬಂದಾಗ ಅಂಟಿಲಿಯಾವು ಆಸ್ಟರೇಸಿ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಒಂದು ಕುಲವಾಗಿದೆ. ಪ್ರಸ್ತುತ ಕ್ಯೂಬಾದಲ್ಲಿ ಸ್ಥಳೀಯವಾಗಿ ಅಂಟಿಲಿಯಾ ಬ್ರಾಚಿಚೆಟಾ ಎಂಬ ಒಂದು ಜಾತಿಯಿದೆ.

ಆಂಟಿಲಿಯಾ ಮನೆಯಲ್ಲಿ ಮುಖೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ, ತಮ್ಮ ಇಬ್ಬರು ಪುತ್ರರಾದ ಆನಂದ್ ಮತ್ತು ಆಕಾಶ್ ಅವರೊಂದಿಗೆ ವಾಸವಿದ್ದಾರೆ. ಆಕಾಶ್ ಶ್ಲೋಕಾ ಮೆಹ್ತಾ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಗೆ ಪೃಥ್ವಿ ಆಕಾಶ್ ಅಮಾಬಾಯಿ ಎಂಬ ಮಗನಿದ್ದಾನೆ – ಇಬ್ಬರೂ ಸಹ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದಾರೆ.

 

ಇದನ್ನು ಓದಿ : Cut hand joined : 11 ವರ್ಷದ ಬಾಲಕನ ತುಂಡಾಗಿ ಬಿದ್ದ ಕೈಯನ್ನು ಯಶಸ್ವಿಯಾಗಿ ಮರು ಜೋಡಿಸಿದ ವೈದ್ಯರು

Leave A Reply

Your email address will not be published.