Cut hand joined : 11 ವರ್ಷದ ಬಾಲಕನ ತುಂಡಾಗಿ ಬಿದ್ದ ಕೈಯನ್ನು ಯಶಸ್ವಿಯಾಗಿ ಮರು ಜೋಡಿಸಿದ ವೈದ್ಯರು

Cut hand joined : ಬಾಲಕನೊಬ್ಬನ ತುಂಡಾದ ಕೈಯನ್ನು ವೈದ್ಯರುಗಳು ಮರು ಜೋಡಿಸಿದ ಜೀವದಾನ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕುಪ್ಪಂ ಮೂಲದ ಚರಣ್ (11) ಎಂಬಾತ ಹುಲ್ಲು ಕತ್ತರಿಸುತ್ತಿದ್ದ. ಆಗ ಹುಲ್ಲು ಕತ್ತರಿಸುವ ಯಂತ್ರಕ್ಕೆ ಮರದ ಕಡ್ಡಿಯೊಂದು ಸಿಕ್ಕಿ ಹಾಕಿಕೊಂಡಿತ್ತು. ಆ ಮರದ ತುಂಡನ್ನು ಆತ ತೆಗೆಯಲು ಯತ್ನಿಸುವಾಗ ದುರದೃಷ್ಟವಶಾತ್ ಆತನ ಕೈ ಯಂತ್ರಕ್ಕೆ ಸಿಕ್ಕಿಹಾಕಿಕೊಂಡಿದೆ. ಅವಘಡದಲ್ಲಿ ಆತನ ಮುಂಗೈ ತುಂಡಾಗಿ ಕೆಳಕ್ಕೆ ಬಿದ್ದಿದೆ. (Cut hand joined )

ತಕ್ಷಣ ಆತನನ್ನು ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಂಗಳೂರಿನ ನಾರಾಯಣ ಹೆಲ್ತ್‌ ( Narayana Health) ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ನಾರಾಯಣದ ವೈದ್ಯರುಗಳು ಆ ಬಾಲಕನ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ಕೈಯನ್ನು ಮತ್ತೆ ದೇಹಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತುಂಡಾಗಿದ್ದ ತೋಳಿಗೆ ರಕ್ತದ ಸಂಚಲನೆಯನ್ನು ಮರು-ಸ್ಥಾಪಿಸಲು ಮೈಕ್ರೋಸರ್ಜಿಕಲ್ ದುರಸ್ತಿ ಆಪರೇಶನ್ ಅನ್ನು ಮಾಡಲಾಯಿತು. ಶಸ್ತ್ರಚಿಕಿತ್ಸೆಯು ಕೈಯನ ಗಾಯಗೊಂಡ ಎಲ್ಲಾ ರಚನೆಗಳ ಮರು ನಿರ್ಮಾಣ ಮಾಡುವ ಕೆಲಸವನ್ನು ಒಳಗೊಂಡಿತ್ತು.

ಬಾಲಕ ಚರಣ್ ನದ್ದು ಇನ್ನೂ ಚಿಕ್ಕ ವಯಸ್ಸು. ಆತನ ದೇಹದ ಗಾಯದ ಪ್ರಕಾರ (ಕ್ರಶ್ ಅವಲ್ಶನ್ ಕಟ್) ಮತ್ತು ಅವರು ಪ್ರಯಾಣಿಸಿದ ದೂರದಿಂದಾಗಿ ಆತನ ಶಸ್ತ್ರಚಿಕಿತ್ಸೆಯು ತುಂಬಾ ಜಟಿಲವಾಗಿತ್ತು. ಸದ್ಯ ಚರಣ್ ನನ್ನು 10 ದಿನಗಳ ಕಾಲ ತೀವ್ರ ನಿಗಾ ಮತ್ತು ಔಷಧೋಪಚಾರದಲ್ಲಿ ಇರಿಸಲಾಗಿದೆ. ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳಲು 9 ತಿಂಗಳಿನಿಂದ ವರ್ಷಗಳ ಸಮಯವೇ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ನಾರಾಯಣ ಹೆಲ್ತ್ ನ ಶಸ್ತ್ರಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಡಾ. ರವಿ ಡಿಆರ್ ಮಾತನಾಡಿ, ಯಾವುದೇ ಪ್ರಕರಣದಲ್ಲಿ ದೇಹದಿಂದ ಬೇರ್ಪಟ್ಟ ಕೈ-ಕಾಲುಗಳ ಮರುಜೋಡಣೆ ಮಾಡಲು ಬೇರ್ಪಟ್ಟ ಆರು ಗಂಟೆಗಳ ಸುವರ್ಣ ಅವಧಿಯಲ್ಲಿ ನಡೆಸಿದಾಗ ಹೆಚ್ಚಿನ ಪ್ರಮಾಣದ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದಾರೆ.

 

ಇದನ್ನು ಓದಿ : Richest CM Of India : ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್! ಸಿಎಂ ಬೊಮ್ಮಾಯಿ ಎಷ್ಟು ಸಿರಿವಂತರು ಗೊತ್ತಾ? 

Leave A Reply

Your email address will not be published.