Gold Rules : ಸರ್ಕಾರದ ನಿಯಮದ ಪ್ರಕಾರ ಮನೆಯಲ್ಲಿ ಇಡಬಹುದಾದ ಚಿನ್ನ ಎಷ್ಟು ?

Gold Rules : ಚಿನ್ನ (gold) ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ತಮ್ಮ ಮನೆಯಲ್ಲೂ ಚಿನ್ನ (gold) ಇರಬೇಕು ಎಂಬ ಆಸೆ ಪ್ರತಿ ಹೆಂಗಸರಿಗೂ ಇದ್ದೇ ಇರುತ್ತದೆ. ಹಾಗಂತ ಎಷ್ಟು ಬೇಕಾದರು ಚಿನ್ನವನ್ನು (gold rules) ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಗರಿಷ್ಠ ಪ್ರಮಾಣದ ಚಿನ್ನವನ್ನು ಇಟ್ಟುಕೊಂಡರೆ ಏನಾಗುತ್ತದೆ? ಸರ್ಕಾರ ನಿಯಮ (government rules) ಏನು ತಿಳಿಯಿರಿ.

ನೀವೇನಾದರೂ ನಮ್ಮಲ್ಲಿ ಶಕ್ತಿ ಸಾಮರ್ಥ್ಯವಿದೆ ಎಷ್ಟು ಬೇಕಾದರೂ ಚಿನ್ನ (gold) ಇಟ್ಟುಕೊಳ್ಳುತ್ತೆವೆ ಎಂದರೆ ಸಂಕಷ್ಟ ತಪ್ಪಿದ್ದಲ್ಲ. ಸರ್ಕಾರದ ನಿಯಮದ (government rules) ಪ್ರಕಾರ ಇಂತಿಷ್ಟೇ ಚಿನ್ನ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದು ಚುನಾವಣೆ (election) ಬಿಸಿಗೆ ಮಾಡಿರುವ ನಿಯಮವಲ್ಲ. ಚುನಾವಣೆ (election) ಇದ್ದರೂ, ಇಲ್ಲದಿದ್ದರೂ ಒಂದು ಮನೆಯಲ್ಲಿ ನಿಗದಿತ ಪ್ರಮಾಣದಷ್ಟೆ ಚಿನ್ನ (gold) ಇರಬೇಕು.

ಸರ್ಕಾರವು ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆ ಮತ್ತು ಚಿನ್ನದ (gold) ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಮದುವೆಯಾದ ಮಹಿಳೆ, ಮದುವೆಯಾಗದ ಯುವತಿ, ಪುರುಷರಿಗೂ ಕೂಡ ಚಿನ್ನ ಇಡುವ ವ್ಯತ್ಯಾಸವಿದೆ. ಮದುವೆಯಾದ ಮಹಿಳೆ ಮನೆಯಲ್ಲಿ 500 ಗ್ರಾಂ (gram) ಚಿನ್ನ ಇಟ್ಟುಕೊಳ್ಳಬಹುದು. ಮದುವೆಯಾಗದ ಯುವತಿಯು 250 ಗ್ರಾಂ (gram) ಚಿನ್ನ ಇಟ್ಟುಕೊಳ್ಳಬಹುದು. ಇನ್ನು ಪುರುಷರಿಗೆ ಗರಿಷ್ಠ 100 ಗ್ರಾಂ (gram) ಚಿನ್ನ ಇಟ್ಟುಕೊಳ್ಳವ ಅವಕಾಶವಿದೆ.

ಸರ್ಕಾರಿ ಅಧಿಕಾರಿಗಳು (government officers) ದಾಳಿ ಮಾಡಿದಾಗ ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಚಿನ್ನವಿದ್ದರೆ ಅದನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ ದಾಳಿ ವೇಳೆ ಮನೆಯಲ್ಲಿ ನಿಗದಿತ ಪ್ರಮಾಣದ ಚಿನ್ನವಿದ್ದರೆ ವಶಪಡಿಸಿ ಕೊಳ್ಳುವಂತಿಲ್ಲ. ಅಧಿಕಾರಿಗಳು ನಿಮ್ಮ ಚಿನ್ನಕ್ಕೆ ದಾಖಲೆ (documents) ಕೇಳಿದರೆ ನೀವು ಅವರಿಗೆ ಸರಿಯಾದ ದಾಖಲೆಗಳನ್ನು (documents) ಒದಗಿಸಬೇಕು.

ಭಾರತವು ಅತೀ ಹೆಚ್ಚು ಚಿನ್ನ (gold) ಆಮದು ಮಾಡಿಕೊಳ್ಳುವ ದೇಶವಾಗಿದೆ. ಇದರಿಂದ ಭಾರತದಲ್ಲಿ ಆಮದಿನ ಪ್ರಮಾಣವೂ ಹೆಚ್ಚಾಗಿ ಇದೆ. 2022 ರಲ್ಲಿ ಭಾರತ ಅತಿ ಹೆಚ್ಚು ಚಿನ್ನ (gold) ಆಮದು ಮಾಡಿಕೊಂಡ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಬರೋಬ್ಬರಿ 31.25 ಟನ್ (tan) ಚಿನ್ನವನ್ನು ಭಾರತ ಆಮದು ಮಾಡಿಕೊಂಡಿದೆ. ಆಮದು ಮೌಲ್ಯ 3.45 ಲಕ್ಷ ಕೋಟಿಗೆ ತಲುಪಿದೆ. 2021 ರಲ್ಲಿ ಚಿನ್ನದ ಆಮದು 2 ಲಕ್ಷ ಕೋಟಿಯಷ್ಟಿತ್ತು. ಆದರೆ ಕಳೆದ 11 ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಾಗಿ ಭಾರತದಲ್ಲಿ ವಿನಿಮಯ ಕೊರತೆ 135 ಲಕ್ಷ ಕೋಟಿಗೆ ತಲುಪಿದೆ. ಇದಲ್ಲದೆ ವಿಶ್ವದಲ್ಲೇ ಭಾರತವು ಚಿನ್ನದ (gold) ಬಳಕೆಯಲ್ಲಿ 2 ನೇ ಸ್ಥಾನದಲ್ಲಿದೆ.

ಇದರಿಂದ ಭಾರತ ಸರ್ಕಾರವು ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

Leave A Reply

Your email address will not be published.