Hajj For Women: ಮುಸ್ಲಿಂ ಮಹಿಳೆಯರೂ ಮಾಡಬಹುದು ಯಾತ್ರೆ! ಬಂತು ನೋಡಿ ಅರ್ಜಿಗಳ ಸರಮಾಲೆ!

Hajj For Women :ಮುಸ್ಲಿಮರ(Muslim) ಪವಿತ್ರ ಹಜ್​ ಯಾತ್ರೆಗೆ ಸಂಬಂಧಿಸಿದಂತೆ ಈ ವರ್ಷ ಅಂದರೆ 2023 ರಲ್ಲಿ ಹಲವು ರೀತಿಯ ದೊಡ್ಡಮಟ್ಟದ ಬದಲಾವಣೆಗಳನ್ನು ತರಲಾಗಿದೆ. ಹಾಗೆಯೇ ಇದರ ಜೊತೆಗೆ ಇದೇ ಮೊಟ್ಟ ಮೊದಲ ಬಾರಿಗೆ ಹಜ್‌ ಯಾತ್ರೆಗೆ ʻಮೆಹ್ರಂ’ (mehram) ಇಲ್ಲದೆ ಅಂದರೆ ಪುರುಷರು ಇಲ್ಲದೆ ಮಹಿಳೆಯರು(ladies) ಮಾತ್ರ ತೀರ್ಥಯಾತ್ರೆಗೆ ಹೋಗಬೇಕೆಂದು 4 ಸಾವಿರ ಮಹಿಳೆಯರಿಂದ ಅರ್ಜಿ(Hajj For Women)ಗಳನ್ನು ಸಲ್ಲಿಸಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಈ ರೀತಿಯ ಮಾಹಿತಿಗಳನ್ನು ತಿಳಿಸಿದೆ.

 

ಮುಸ್ಲಿಮರಲ್ಲಿ ಮೊದಲು ಹಜ್ (Hajj) ಯಾತ್ರೆ ಮಾಡುವ ಮಹಿಳೆಯರು ರಕ್ಷಕ ಪುರುಷನ ಜೊತೆ ಯಾತ್ರೆ ಮಾಡುವುದು ಅವರ ಸಂಪ್ರದಾಯದಲ್ಲಿ(culture) ಕಡ್ಡಾಯವಾಗಿತ್ತು. ಆದರೆ ಕಳೆದ ವರ್ಷ ಅಂದರೆ 2022 ರಲ್ಲಿ ಹಜ್ ಯಾತ್ರೆಯ ನಿಯಮದ ಜೊತೆಗೆ ಕೆಲ ಬದಲಾವಣೆಯಲ್ಲಿ ಈ ನಿಯಮವನ್ನು (rules) ಸಹ ತಿದ್ದುಪಡಿ ಮಾಡಲಾಯಿತು.

ಈಗಿನ ಹೊಸ ನಿಯಮಗಳ ಪ್ರಕಾರ ಮಹಿಳೆಯರು ಯಾವುದೇ ಪುರುಷ (gents) ರಕ್ಷಕನಿಲ್ಲದೆ ತಾವೇ ಒಬ್ಬಂಟಿಯಾಗಿ ಹಜ್ ಯಾತ್ರೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಹೊಸ ನಿಯಮದ ಪ್ರಕಾರ ಪುರುಷರಿಲ್ಲದೇ ಹಜ್‌ ಯಾತ್ರೆಗೆ ತೆರಳಲು ಮಹಿಳೆಯರು ಹೆಚ್ಚಿನ ಒಲವು ತೋರಿಸಿದ್ದು, ಮೊದಲ ಬಾರಿಗೆ, ಯಾವುದೇ ಹೆದರಿಕೆಗೆ ಒಳಗಾಗದೆ 4,314 ಮಹಿಳೆಯರು ‘ಮೆಹ್ರಂ’ ಇಲ್ಲದೆ ನಾವೇ ಸ್ವತಃ ಯಾರದೇ ಸಹಾಯ ಇಲ್ಲದೆ ಒಬ್ಬಂಟಿಯಾಗಿ ತೀರ್ಥಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸಿದ್ದಾರೆ.

ಹೌದು, ಸೌದಿ ಅರೇಬಿಯಾದ (Saudi Arabia) ಮೆಕ್ಕಾ (Mecca) ನಗರದಲ್ಲಿ ಯಾವುದೇ ರಕ್ತ ಸಂಬಂಧ ಹೊಂದಿರುವ ಪುರುಷ ಅಥವ ತನ್ನ ಪೋಷಕರಿಲ್ಲದೆ (parents) 4,000 ಕ್ಕೂ ಹೆಚ್ಚು ಮಹಿಳೆಯರು ಹಜ್ ಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸುದ್ದಿ ಮಾಧ್ಯಮಗಳಿಗೆ ಈ ರೀತಿಯ ಮಾಹಿತಿಯನ್ನು ತಿಳಿಸಿದೆ.

ಶೀಘ್ರದಲ್ಲೇ ಹಜ್ ಪ್ರಯಾಣ ಯಾತ್ರಿಕರ ಪಟ್ಟಿ

ಸಾವಿರಾರು ಮಹಿಳೆಯರ ಆದ್ಯತೆಯ ಮೇರೆಗೆ ಸಚಿವಾಲಯವು ಅರ್ಜಿಗಳನ್ನು ನೋಡಿ ಕ್ರಮವನ್ನು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಹಜ್ ಪ್ರಯಾಣ ಯಾತ್ರಿಕರ ಪಟ್ಟಿಯ ಬಗ್ಗೆಯೂ ಮಾಹಿತಿಯನ್ನು ಜನರಿಗೆ ಈ ವಾರ ತೆರವುಗೊಳಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಂದ ಇಷ್ಟು ದೊಡ್ಡ ಮಟ್ಟದ ಅರ್ಜಿಗಳು ಬಂದಿರುವುದು ಇದೇ ಮೊದಲ ಬಾರಿ ಎಂದು ಹೇಳಿದೆ. ಯಾವುದೇ ಪುರುಷ ಪೋಷಕರಿಲ್ಲದೆ ಹಜ್ ಯಾತ್ರೆಗೆ ಪ್ರಯಾಣಿಸಲು ಬಯಸುವ ಮಹಿಳೆಯರಿಗೆ ಅವರ ಅರ್ಜಿಯ ಮೇರೆಗೆ ಸಿಹಿ ಸುದ್ದಿಯನ್ನು ನೀಡಿದೆ

ಪುರುಷ ರಕ್ಷಕರಿಲ್ಲದೆ ಮಹಿಳೆಯರ ಉಮ್ರಾಗೆ ಅವಕಾಶ ಮಾಡಿಕೊಟ್ಟ ಸೌದಿ ಸರ್ಕಾರ.

ಸೌದಿ ಅರೇಬಿಯಾ ಸರ್ಕಾರವು (Saudi Arabia government) ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಮದುವೆಗೆ ಅನುಮತಿಯಿಲ್ಲದ ಪುರುಷ ರಕ್ತಸಂಬಂಧಿ (ಅವರನ್ನು ಮೆಹ್ರಂ ಎನ್ನಲಾಗುತ್ತದೆ) ಇನ್ನು ಮುಂದೆ ವಿಶ್ವದ ಯಾವುದೇ ಭಾಗದಿಂದ ಮಹಿಳಾ ಯಾತ್ರಿಕರೊಂದಿಗೆ ಹೋಗುವ ಅಗತ್ಯವಿಲ್ಲ ಎಂದು ಕಟ್ಟು ನಿಟ್ಟಿನ ಕ್ರಮವನ್ನು ಘೋಷಿಸಿತು.

ಮುಸ್ಲಿಮ್ ಮಹಿಳೆಯರು(Muslim ladies) ಹಜ್ ಯಾತ್ರೆ ಹೋಗಲು ಅವರಿಗೆ ಸುರಕ್ಷಿತ(safe), ನಂಬಿಕಸ್ಥ ರಕ್ಷಕ ಅಥವಾ ಮೆಹ್ರಂ ಕರೆತರುವುದು ಅವರ ಸಂಪ್ರದಾಯದಲ್ಲಿ ಕಡ್ಡಾಯವಾಗಿತ್ತು. ಈ ಕಾಯ್ದೆಯಿಂದ ಹಲವು ಮುಸ್ಲಿಮ್ ಮಹಿಳೆಯರು ಹಜ್ ಯಾತ್ರೆಗೆ ಹೋಗುವ ಆಸೆಯನ್ನೇ ಮರೆತು ಬಿಡುತ್ತಿದ್ದರು. ಅದರ ಜೊತೆಗೆ ಹಜ್ ಯಾತ್ರೆಯ ವೆಚ್ಚವೂ ಸಾಮಾನ್ಯವಾಗಿರಲಿಲ್ಲ. ಅಲ್ಲಿಗೆ ಹೋಗಬೇಕೆಂದರೆ ಅದರ ಹಣದ ವೆಚ್ಚವು ಅಧಿಕವಾಗುತ್ತಿತ್ತು.

ಇದನ್ನೆಲ್ಲಾ ನೋಡಿ ಸೌದಿ ಅರೇಬಿಯಾ ಸರ್ಕಾರ (Saudi Arabia government) ಮೆಕ್ಕಾಗೆ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೆ ತೆರಳಿ ಹಜ್‌ನಲ್ಲಿ ತಮ್ಮನ್ನು ತಾನು ಪಾಲ್ಗೊಳ್ಳಬಹುದು ಎಂದು ಹೊಸ ರೀತಿಯ ಆದೇಶವನ್ನು ಮಹಿಳೆಯರಿಗೆ ಹೊರಡಿಸಿತು.

ಸೌದಿಯಲ್ಲಿ ಸುಧಾರಣೆ ತಂದ ಬಿನ್ ಸಲ್ಮಾನ್

ಸೌದಿಯಲ್ಲಿದ್ದ ಹಲವು ಕಠಿಣ ನಿಯಮಗಳು ಸೌದಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್(crown Prince Mohammed bin Salman) ಅವರ ಕಾಲದಲ್ಲಿ ಮಹತ್ತರ ಅಂದರೆ ದೊಡ್ಡ ಮಟ್ಟದ ಬದಲಾವಣೆ ಕಂಡಿವೆ ಎನ್ನಬಹುದು. ಇವರು ಇಂತಹ ಕೆಲ ಕಠಿಣ ಕ್ರಮಗಳನ್ನು (tough rules) ಸಡಿಲಗೊಳಿಸುತ್ತಿದ್ದು, ಹಲವು ರೀತಿಯ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ ಎನ್ನಬಹುದು.

ಇಸ್ಲಾಂ ಧರ್ಮದಲ್ಲಿ(Muslim religion) ಪ್ರಮುಖ ಯಾತ್ರೆ ಹಜ್​ ಆಗಿದ್ದು, ಮುಸ್ಲಿಂ ಧರ್ಮದವರು ತಾನು ಸಾಯುವ ಮೊದಲು ಒಮ್ಮೆಯಾದರೂ ಮೆಕ್ಕಾ-ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಮುಗಿಸಬೇಕೆಂಬುದು ಬಯಸುತ್ತಾರೆ. ಇದು ಅವರ ಕನಸು (dream)ಮತ್ತು ಆಸೆಯೂ ಆಗಿರುತ್ತದೆ. ಅದಕ್ಕೆ ಅಂತಾನೇ ಪುರುಷರು ಮತ್ತು ಮಹಿಳೆಯರು ಪ್ರತಿವರ್ಷ ಹಜ್‌ ಯಾತ್ರೆ ಕೈಗೊಳ್ಳುತ್ತಾರೆ ಅಲ್ಲಿಗೆ ಭೇಟಿ ನೀಡಿ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ.

Leave A Reply

Your email address will not be published.