Old Man bike stunt video : ಹುಡುಗರನ್ನೇ ಮೀರಿಸುವಂತ ಬೈಕ್‌ ಸ್ಟಂಟ್‌ ಮಾಡಿದ ತಾತ! ಏನ್‌ ಎನರ್ಜಿ ಗುರು!!!

Old Man bike stunt video : ಯುವಜನತೆಗೆ ಬೈಕ್ ಅಂದರೆ ಸಾಕು ಏನೋ ಒಂದು ಹೇಳತೀರದ ಬಾಂಡಿಂಗ್ ಬೆಳೆದುಬಿಟ್ಟಿರುತ್ತೆ. ಅದರಲ್ಲಿಯೂ ಬೈಕ್ ಸ್ಟಂಟ್ ಮಾಡುವ ಕ್ರೇಜ್ ನೋಡುವುದೇ ಕಣ್ಣಿಗೆ ಹಬ್ಬ. ಬೈಕ್ ಹಿಡಿದು ಒಂದು ಟ್ರಿಪ್ ಹೋಗಿ ಬರದೇ ಇದ್ದರೆ ಹುಡುಗರಿಗೆ ಸಮಾಧಾನವೇ ಇರದು. ಅದರಲ್ಲಿಯೂ ಲಾಂಗ್ ಡ್ರೈವ್ ಮಾಡೊದು ಎಂದರೇ ಯುವಜನತೆಯ ಪಾಲಿಗೆ ಹೇಳಲಾಗದಷ್ಟು ಖುಷಿಯನ್ನು ಉಂಟು ಮಾಡುತ್ತದೆ.

ಹುಡುಗರಿಗೂ ಈ ಬೈಕ್ ಗಳಿಗೂ ಏನೋ ಒಂದು ವಿವರಣೆ ನೀಡಲಾಗದ ಬಾಂಧವ್ಯ. ಎಷ್ಟೋ ಮಂದಿಗೆ ಬೈಕ್ ಎನ್ನೋದು ತಮ್ಮ ಗರ್ಲ್ ಫ್ರೆಂಡ್ ಇದ್ದಂಗೆ. ನಾವು ಸೋಷಿಯಲ್ ಮೀಡಿಯಾದಲ್ಲಿ ಹುಡುಗರ ಅನೇಕ ಸ್ಟಂಟ್ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಯಂಗ್ ಆಂಡ್ ಎನರ್ಜಿಟಿಕ್ ಆಗಿ ಹುಡುಗರೇ ಹಿಂತಿರುಗಿ ನೋಡುವಂತೆ ವಯಸ್ಸಾದ ಅಜ್ಜ ಬೈಕ್ ಸ್ಟಂಟ್ ಮಾಡಿದ್ದಾರೆ. ಅಜ್ಜನ ಬೈಕ್ ನೋಡಿ ನೆಟ್ಟಿಗರಂತು ಅಜ್ಜನ ಬೈಕ್ ಸ್ಟಂಟ್‌(Old Man bike stunt ) ಸೂಪರೋ ಸೂಪರ್‌ ಎಂದು ಹೊಗಳಿ ಕೊಂಡಾಡುತ್ತಿದ್ದಾರೆ.

ವಯಸ್ಸಾಗುತ್ತಾ ಹೋದಂತೆ ಹೆಚ್ಚಿನವರು ಮನೆಯಿಂದ ಹೊರ ಹೋಗುವುದಕ್ಕೆ ಹಿಂದೂ ಮುಂದೂ ನೋಡುತ್ತಾರೆ. ಅಷ್ಟೆ ಏಕೆ, ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಒಂದರ ಮೇಲೊಂದು ಕಾಣಿಸಿಕೊಂಡು ಮಂಡಿ ನೋವು, ಕಾಲು ನೋವು ಎಂದು ಮನಸು ಕೂಡ ಜಡವಾಗುತ್ತ ಹೋಗುತ್ತದೆ. ವಯಸ್ಸಾದಂತೆ ಮುಂಚಿನ ಹಾಗೇ ಚೈತನ್ಯ, ಉತ್ಸಾಹ ಯಾವುದರಲ್ಲಿಯೂ ಇರುವುದಿಲ್ಲ ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅಜ್ಜ ತನ್ನ ಇಳಿಯ ವಯಸ್ಸಿನಲ್ಲೂ ಬೈಕ್ ಹಿಡಿದು ಸ್ಟಂಟ್ ಮಾಡಿದ್ದಾರೆ. ಸದ್ಯ, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.

ವೈರಲ್( Viral) ಆಗಿರುವ ವಿಡಿಯೋದಲ್ಲಿ, ವೃದ್ಧರೊಬ್ಬರು(Old Men) ಬೈಕ್ ಹಿಡಿದು ರಸ್ತೆಯಲ್ಲಿ ಸ್ಟಂಟ್ ಮಾಡಿದ್ದು(Old Man bike stunt video)ಮಾತ್ರವಲ್ಲ, ಇಳಿ ವಯಸ್ಸಿನಲ್ಲೂ ಅವರ ದೈರ್ಯ, ಸಾಹಸ ಮಾಡಬೇಕು ಎನ್ನುವ ಅವರ ಉತ್ಸಾಹಕ್ಕೆ ಮೆಚ್ಚುಗೆ ಸಲ್ಲಿಸಲೇಬೇಕು. ಮೊದಲಿಗೆ ಅಜ್ಜ ಬೈಕ್ ಹ್ಯಾಂಡಲ್ ಬಿಟ್ಟರು. ಆ ಬಳಿಕ,ಬೈಕ್‌ನಲ್ಲಿ ಡಾನ್ಸ್ (Dance)ಮಾಡಲು ಆರಂಭಿಸಿದ್ದಾರೆ. ಅಲ್ಲಿ ನಿಲ್ಲದೆ ಹಿಂದಕ್ಕೆ ಒರಗಿ ಕೈ ಬೀಸುತ್ತಾರೆ. ಎದ್ದ ಬಳಿಕ ಎರಡೂ ಕೈಗಳಿಂದ ಬೈಕ್ ಮೇಲೆ ಕುಣಿದಿದ್ದು, ಯುವಕರಂತೆ ಬೈಕ್ ನಲ್ಲಿ ಹಲವು ಸ್ಟಂಟ್ ಗಳನ್ನು ಮಾಡಿ ಗಮನ ಸೆಳೆದಿರುವ ತಾತ ತಮ್ಮ ಗ್ರಿಪ್ ಮೂಲಕ ಬೀಳದಂತೆ ಹ್ಯಾಂಡಲ್ ಮಾಡಿಕೊಂಡು ಸ್ಟಂಟ್ ಮಾಡುವುದು ನಿಜಕ್ಕೂ ಸುಲಭದ ಮಾತಲ್ಲ. ತಾತನ ಈ ಸಾಹಸ ಪ್ರವೃತ್ತಿಗೆ ಸೆಲ್ಯೂಟ್ ಹೊಡೆದರೂ ತಪ್ಪಾಗಲಿಕ್ಕಿಲ್ಲ.

ಅಜ್ಜ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದ್ದು, ajit_navghane_official_07 ಹೆಸರಿನ Instagram ಖಾತೆಯಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಬೈಕ್ ನಲ್ಲಿ ಅಜ್ಜನ ಸ್ಟಂಟ್ಸ್ ನೋಡಿ ವಿಡಿಯೋ ನೋಡಿದವರೆಲ್ಲಾ ಅಚ್ಚರಿಗೆ ಒಳಗಾಗಿದ್ದಾರೆ. ನೆಟ್ಟಿಗರು ಅಜ್ಜನ ಬೈಕ್ ಸ್ಟಂಟ್ ನೋಡಿ ಮೆಚ್ಚುಗೆಯ ಸುರಿಮಳೆ ಗೈಯುತ್ತಿದ್ದಾರೆ. ಒಂದು ವಾರದ ಹಿಂದೆ ಪೋಸ್ಟ್ ಮಾಡಿದ ಈ ವಿಡಿಯೋ ನೋಡಿ ಹೆಚ್ಚಿನ ಮಂದಿ ಲೈಕ್ ಮಾಡಿದ್ದು, ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇದನ್ನೂ ಓದಿ: Megastar Chiranjeevi : ನಟ ಚಿರಂಜೀವಿಗೆ ವಿಷಪೂರಿತ ಕೇಕ್ ತಿನ್ನಿಸಿದ ಅಭಿಮಾನಿ ; ಕೊನೆಗೇನಾಯ್ತು?

Leave A Reply

Your email address will not be published.