Whatsapp users: ವಾಟ್ಸಪ್ ಬಳಕೆದಾರರೇ ಎಚ್ಚರ : ‘ಗುಡ್ ಮಾರ್ನಿಂಗ್’ ಮೆಸೇಜ್ ಮಾಡಿದ್ರೂ ನಿಷೇಧವಾಗಬಹುದು ನಿಮ್ಮ ಖಾತೆ!

Whatsapp users : ಇಂದಿನ ಟೆಕ್ನಾಲಜಿ ಯುಗದಲ್ಲಿ ವಾಟ್ಸಪ್ ಅನ್ನು ಬಳಸಿದ ಜನರೆಲ್ಲ ಎಂದೇ ಹೇಳಬಹುದು. ಏಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ಬಯಸ್ತರವರಿಗೂ ವಾಟ್ಸಪ್ ಬಳಕೆಯಲ್ಲಿದೆ. ಯಾಕಂದ್ರೆ ಮನೆಯಲ್ಲಿ ಕೂತುಕೊಂಡು ಎಲ್ಲಿಂದ ಎಲ್ಲಿಯೋ ಇರುವಂತಹ ನಮ್ಮ ಸ್ನೇಹಿತರನ್ನು ಸಂಬಂಧಿಕರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು. ಇಂತಹ ಒಂದು ಅದ್ಭುತ ಪ್ರಯೋಜನಗಳನ್ನು ನೀಡುತ್ತಿರುವ ವಾಟ್ಸಾಪ್ ಎಲ್ಲಾ ಬಳಕೆದಾರರ ಮನ ಗೆದ್ದಿದೆ. ಹೀಗಾಗಿ ವಾಟ್ಸಾಪ್ ಅನ್ನು ಲಕ್ಷಾಂತರ ಭಾರತೀಯರು ಬಳಸುತ್ತಾರೆ.

ಅಂತೆಯೇ ವಾಟ್ಸಪ್ ತನ್ನ ಬಳಕೆದಾರರನ್ನು(Whatsapp users) ಮೆಚ್ಚಿಸಲು ಆಸಕ್ತಿದಾಯಕ ಫೀಚರ್ಸ್​ಗಳನ್ನುಬಿಡುಗಡೆ ಮಾಡುತ್ತಿದೆ. ಬಳಕೆದಾರರ ಅಗತ್ಯಗಳನ್ನು ಗುರುತಿಸಿ ಮತ್ತು ಅವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಹೊಸ ಫೀಚರ್ಸ್​ ಅನ್ನು ಬಿಡುಗಡೆ ಮಾಡುತ್ತಿದೆ. ಎಷ್ಟು ಹೊಸ ಅಪ್ಡೇಟ್ ಗಳನ್ನು ನೀಡುತ್ತದೆಯೋ ಅಷ್ಟೇ ಜಾಗ್ರತೆಗಳನ್ನು ವಹಿಸುತ್ತದೆ.

ಹೌದು. ವಾಟ್ಸಾಪ್ನಲ್ಲಿ ಹೆಚ್ಚಿನ ಸಂದೇಶಗಳನ್ನು ಕಳುಹಿಸಿದರೆ, ಖಾತೆಯನ್ನು ಶಾಶ್ವತವಾಗಿ ಬ್ಯಾನ್‌ ಮಾಡಲಾಗುತ್ತದೆ. ನೀವು ನಿಮ್ಮ ಸ್ನೇಹಿತರಿಗೆ ಕೇವಲ ಗುಡ್ ಮಾರ್ನಿಂಗ್ ಕಳುಹಿಸಿದರು ಕೂಡ ನಿಮ್ಮ ಖಾತೆಯನ್ನು ಬ್ಯಾನ್ ಮಾಡಬಹುದು. ಇಂತಹ ಒಂದು ನಿರ್ಧಾರದ ಹಿಂದೆಯೂ ಕಾರಣ ಇದೆ ಎಂಬುದನ್ನು ಕಂಪನಿ ತಿಳಿಸಿದೆ.

ಹೌದು. ಕಂಪನಿಯು ಇಂತಹ ಸಂದೇಶವನ್ನು ಸ್ಪ್ಯಾಮ್ ಎಂದು ಪರಿಗಣಿಸುತ್ತದೆ. ಯಾಕಂದ್ರೆ ಒಂದೇ ಸಂದೇಶವನ್ನು ಅನೇಕ ಜನರಿಗೆ ಮತ್ತೆ ಮತ್ತೆ ಫಾರ್ವರ್ಡ್ ಮಾಡುವುದು ಸ್ಕ್ಯಾಮ್ ಆಗಿದೆ. ಹೀಗಾಗಿ ಖಾತೆಯನ್ನು ನಿಷೇಧಿಸಬಹುದು. ಅಲ್ಲದೆ, ಹೆಚ್ಚಿನ ಸಂಪರ್ಕಗಳನ್ನು ಹಂಚಿಕೊಂಡರೆ ಖಾತೆಯನ್ನು ಸಹ ನಿಷೇಧ ಮಾಡಲಾಗುತ್ತದೆ. ಹೀಗಾಗಿ ವಾಟ್ಸಪ್ ಬಳಕೆದಾರರು ಜಾಗ್ರತೆ ವಹಿಸುವುದು ಮುಖ್ಯ.

1 Comment
  1. […] ಇದನ್ನೂ ಓದಿ: Whatsapp users: ವಾಟ್ಸಪ್ ಬಳಕೆದಾರರೇ ಎಚ್ಚರ : ‘ಗುಡ್ … […]

Leave A Reply

Your email address will not be published.