Yadgiri: ಚಿಂಚನಸೂರು ಬೆನ್ನಲ್ಲೇ ಬಿಜೆಪಿಗೆ ಇನ್ನೊಂದು ಶಾಕ್! ಮತ್ತೊಬ್ರು ಮಾಜಿ ಸಚಿವರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ!

A B Malakareddy :ಚುನಾವಣೆ ಬೆನ್ನಲ್ಲಿ ಪಕ್ಷಾಂತರದ ಕಾವು ತುಂಬಾನೇ ಜೋರಾಗಿದೆ. ದಿನದಿಂದ ದಿನಕ್ಕೆ ಬಿಜೆಪಿಗೆ ಆಘಾತಕ್ಕೊಳು ಹೆಚ್ಚಾಗುತ್ತಲೇ ಇವೆ. ನಿನ್ನೆ ತಾನೆ ಬಾಬುರಾವ್ ಚಿಂಚನಸೂರ್ (Baburao Chinchansur) ಬಿಜೆಪಿ ತ್ಯಜಿಸಿ, ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಮತ್ತೊಬ್ಬ ಮಾಜಿ ಸಚಿವ ಕಮಲವನ್ನು ತ್ಯಜಿಸಿ ‘ಕೈ’ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಕ್ಷೇತ್ರದಲ್ಲಿ ಮಾಜಿ ಸಚಿವರ ಘರ್ ವಾಪ್ಸಿ ಸಾಧ್ಯತೆ ವಿಚಾರ ಭಾರೀ ಚರ್ಚೆಯಾಗುತ್ತಿದೆ.

ಹೌದು, ಬಾಬುರಾವ್ ಚಿಂಚನಸೂರ್ (Baburao Chinchansur) ಬಿಜೆಪಿ ತ್ಯಜಿಸಿ ಮರಳಿ ಕಾಂಗ್ರೆಸ್ (Congress) ಸೇರ್ಪಡೆಯಾಗಿರುವ ಬೆನ್ನಲ್ಲೇ ಮತ್ತೊಬ್ಬ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ(A B Malakareddy) ಮರಳಿ ‘ಕೈ’ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಲಕರೆಡ್ಡಿ ಸೋಲನುಭವಿಸಿದ್ದರು.

ಕಾಂಗ್ರೆಸ್​​ನಿಂದ ಐದು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದ ಮಾಲಕರೆಡ್ಡಿ ಈ ಬಾರಿ ತಮ್ಮ ಮಗಳನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲು ಚಿಂತನೆ ಮಾಡಿದ್ದಾರೆ. ಮಾಲಕರೆಡ್ಡಿ ಈಗಾಗಲೇ ಮಗಳು ಅನುರಾಗ ಹೆಸರಲ್ಲಿ ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​​ಗೆ ಅರ್ಜಿ ಹಾಕಿಸಿದ್ದಾರೆ.

ಅಂದಹಾಗೆ ಕಳೆದ ಲೋಕಸಭಾ ಚುನಾವಣೆ ವೇಳೆ ಈಗಿನ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikharjuna Karge) ಅವರನ್ನು ಸೋಲಿಸಲು ಮಾಲಕರೆಡ್ಡಿ, ಚಿಂಚನಸೂರ್ ಹಾಗೂ ಮಾಲಿಕಯ್ಯ ಗುತ್ತೆದಾರ್ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಇದೀಗ ಇವರಲ್ಲಿ ಒಬ್ಬರು ಈಗಾಗಲೇ ಕಾಂಗ್ರೆಸ್ ಸೇರಿದ್ದು, ಮತ್ತೊಬ್ಬರೂ ಅವರನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಚಿಂಚನಸೂರ್ ಕೂಡ ಪ್ರಮುಖ ಪಾತ್ರ ವಹಿಸಿದ್ದ ಬಾಬುರಾವ್ ಚಿಂಚನಸೂರ್ ಸೋಮವಾರವಷ್ಟೇ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಇಂದು (ಮಾರ್ಚ್ 22) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರು ಕೂಡ 2019 ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಸೋತಿದ್ದರು.

Leave A Reply

Your email address will not be published.