Ram Gopala Varma: 37 ವರ್ಷಗಳ ನಂತರ ಇಂಜಿನಿಯರಿಂಗ್ ಪದವಿ ಪಡೆದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

Ram Gopal Varma : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ(Acharya Nagarjuna University Guntur) ದಲ್ಲಿ ಬಿಟೆಕ್ ಮುಗಿಸಿದ 37 ವರ್ಷಗಳ ನಂತರ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಕುರಿತು ಮಾರ್ಕ್ಸ್‌ ಶೀಟ್‌ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತೋಷ ವ್ಯಕ್ತಪಡಿಸಿದ್ದಾರೆ.

 

ನಾನು ಉತ್ತೀರ್ಣರಾದ 37 ವರ್ಷಗಳ ನಂತರ ಇಂದು ನನ್ನ ಬಿ ಟೆಕ್ ಪದವಿಯನ್ನು ಸ್ವೀಕರಿಸಲು ತುಂಬಾ ಥ್ರಿಲ್ ಆಗಿದ್ದೇನೆ. 1985ರಲ್ಲಿ ನಾನು ಸಿವಿಲ್ ಇಂಜಿನಿಯರಿಂಗ್ ಅನ್ನು ಅಭ್ಯಾಸ ಮಾಡಲು ಆಸಕ್ತಿ ಹೊಂದಿಲ್ಲದ ಕಾರಣ ಅದನ್ನು ಎಂದಿಗೂ ತೆಗೆದುಕೊಂಡಿರಲಿಲ್ಲ. ವಿಶ್ವವಿದ್ಯಾನಿಲಯಕ್ಕೆ ಧನ್ಯವಾದಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 1985ರ ಜುಲೈನಲ್ಲಿ ನಡೆದ ಪರೀಕ್ಷೆಯಲ್ಲಿ ಬಿ ಟೆಕ್ (ಸಿವಿಲ್ ಇಂಜಿನಿಯರಿಂಗ್) ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಅವರು 1989 ರಲ್ಲಿ ಕ್ರೈಮ್ ಥ್ರಿಲ್ಲರ್ ಶಿವನೊಂದಿಗೆ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಆರ್‌ಜಿವಿ ಅವರು ಟ್ವಿಟರಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದು ‘ಅಶಿಕ್ಷಿತನಾದ ನಾನು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪಡೆದ ಪ್ರಾಧ್ಯಾಪಕರೊಂದಿಗೆ’ ಎಂಬ ಶೀರ್ಷಿಕೆ ನೀಡಿದ್ದಾರೆ. ಗೌರವಾನ್ವಿತ ಉಪಕುಲಪತಿ ಪ್ರೊ. ರಾಜಶೇಖರ್(Vice Chancellor Pr. Rajashekar) ಅವರಿಗೆ ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ಹೇಳಿದ್ದೇನೆ. ಆದರೆ ಅವರು ನನ್ನನ್ನು ಒತ್ತಾಯಿಸಿದರು’ ಎಂದು ಹೇಳಿದ್ದಾರೆ.

ಅಲ್ಲದೆ ‘ಪ್ರೊ. ರಾಜಶೇಖರ್ ಅವರೇ, ನಾನು ಸಾಮಾನ್ಯವಾಗಿ ಗೌರವಕ್ಕೆ ಪಾತ್ರನಾಗಲು ಭಯಪಡುತ್ತೇನೆ. ಆದರೆ, ಈ ಬಾರಿ ಅಂತಹ ಗೌರವಾನ್ವಿತ ಜನರೊಂದಿಗೆ ಗೌರವ ತುಂಬಿದ ಸಂದರ್ಭದಲ್ಲಿ ನಾನು ನಿಜವಾಗಿಯೂ ಗೌರವವನ್ನು ಅನುಭವಿಸುತ್ತೇನೆ’ ಎಂದು ಎಂದು ಬರೆದಿದ್ದಾರೆ.

ಹೈದರಾಬಾದಿನಲ್ಲಿ ಜನಿಸಿದ ರಾಮ ಗೋಪಾಲ ವರ್ಮಾ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳಿಂದ ಮಾತ್ರವಲ್ಲದೇ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಪ್ರಸಿದ್ಧರಾಗಿದ್ದಾರೆ. ಕಲೆಕ್ಟರ್ ಗಾರಿ ಅಬ್ಬಾಯಿ’,`ರಾವಗಾರಿಲ್ಲು’ ಚಿತ್ರಗಳ ಮೂಲಕ ಸಹಾಯಕ ನಿರ್ದೇಶಕನಾಗಿ ತೆಲಗು ಚಿತ್ರರಂಗ ಪ್ರವೇಶಿಸಿದ ವರ್ಮಾ ಇಂದು ಬಹುದೊಡ್ಡ ನಿರ್ದೇಶಕರಾಗಿ ಸಿನಿ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

Leave A Reply

Your email address will not be published.