BedLight : ಮಲಗುವ ಮೊದ್ಲು ಬೆಡ್ ಲೈಟ್‌ಗಳನ್ನು ಮಂದಗೊಳಿಸಿದ್ರೆ ಗರ್ಭಿಣಿಯರಿಗೆ ಮಧುಮೇಹ ಅಟ್ಯಾಕ್ ಆಗೋದಿಲ್ಲ: ಸಂಶೋಧನೆ ಮಾಹಿತಿ ಬಹಿರಂಗ
Pregnant women: ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ತೊಂದರೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಇದು ಮುಖ್ಯವಾಗಿ ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ದತಿಯನ್ನು ಅನುಸರಿಸುವವರಿಗೆ ಬಹುಬೇಗಾನೆ ಮಧುಮೇಹ ಅಟ್ಯಾಕ್ ಅಗುತ್ತದೆ ಎಂದೆನ್ನುತ್ತಾರೆ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆಯನ್ನು ಅನುಭವಿಸುತ್ತಾರೆ.ಇದರಿಂದ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿ ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು. ಇದಕ್ಕಾಗಿ ವೈದ್ಯರು ಸಾಮಾನ್ಯವಾಗಿ ಸರಿಯಾದ ಆಹಾರ ಪದ್ಧತಿಯಿಂದ ಸೂಚಿಸುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಯು ರಾತ್ರಿ ಮಲಗುವ ಕೆಲವು ಗಂಟೆಗಳ ಮೊದಲು ಮಂದ ಬೆಳಕಿನ ಮಲಗಿದರೆ, ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಬಹುದು ಎಂದು ತೋರಿಸಿದೆ.
ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಸಂಶೋಧಕರು ಅಧ್ಯಯನ ನಡೆಸಿದರು. ಗರ್ಭಿಣಿಯರು (Pregnant women) ಮಲಗುವ ಕೆಲವು ಗಂಟೆಗಳ ಮೊದಲು ಕೋಣೆಯಲ್ಲಿ ದೀಪಗಳನ್ನು ಮಂದಗೊಳಿಸಬೇಕು ಎಂದು ಅಧ್ಯಯನ ಹೇಳಿದೆ. ಇದರರ್ಥ ದೀಪಗಳನ್ನು ಮಬ್ಬಾಗಿಸುವುದರಿಂದ ಮಹಿಳೆಯರಲ್ಲಿ ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.
ನಾರ್ತ್‌ವೆಸ್ಟರ್ನ್ ಮೆಡಿಸಿನ್‌ನ ಸಂಶೋಧಕರು ಅಧ್ಯಯನ ನಡೆಸಿದರು. ಗರ್ಭಿಣಿಯರು ಮಲಗುವ ಕೆಲವು ಗಂಟೆಗಳ ಮೊದಲು ಕೋಣೆಯಲ್ಲಿ ದೀಪಗಳನ್ನು ಮಂದಗೊಳಿಸಬೇಕು ಎಂದು ಅಧ್ಯಯನ ಹೇಳಿದೆ. ಇದರರ್ಥ ದೀಪಗಳನ್ನು ಮಬ್ಬಾಗಿಸುವುದರಿಂದ ಮಹಿಳೆಯರಲ್ಲಿ ಗರ್ಭಾವಸ್ಥೆಯ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.
ಮಲಗುವ ಮೂರು ಗಂಟೆಗಳ ಮೊದಲು ದೀಪಗಳನ್ನು ಮಂಕಾಗಿಸಿ
ನಾರ್ತ್ ವೆಸ್ಟರ್ನ್ ಮೆಡಿಸಿನ್ ನ ಸಂಶೋಧಕರ ಪ್ರಕಾರ. ಗರ್ಭಿಣಿಯರು ಮಲಗುವ ಮೂರು ಗಂಟೆಗಳ ಮೊದಲು ಮನೆಯ ದೀಪಗಳನ್ನು ಮಸುಕಾಗಿಸಿ ಅಥವಾ ಶೂನ್ಯ ವ್ಯಾಟ್ ಬಲ್ಬ್ ಬಳಸಿ ಕಂಪ್ಯೂಟರ್, ಸ್ಮಾರ್ಟ್ಫೋನ್ ಅಥವಾ ಇತರ ಗ್ಯಾಜೆಟ್ಗಳ ಬೆಳಕನ್ನು ಮಂದಗೊಳಿಸಿದರೆ ಗರ್ಭಿಣಿಡಯಾಬಿಟಿಸ್ ಉಂಟಾಗುವ ಅಪಾಯವು ಬಹಳವಾಗಿ ಕಡಿಮೆಯಾಗುತ್ತದೆ.
ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಮಹಿಳೆಯರು ಮಲಗುವ ಮೊದಲು ಪ್ರಕಾಶಮಾನವಾದ ಬೆಳಕಿಗೆ ಒಡ್ಡಿಕೊಳ್ಳುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಮತ್ತೊಂದೆಡೆ, ಕಡಿಮೆ ಬೆಳಕು ಮತ್ತು ವ್ಯಾಯಾಮದಲ್ಲಿ ವಾಸಿಸುವ ಮಹಿಳೆಯರಲ್ಲಿ ಗರ್ಭಾವಸ್ಥೆಯ ಮಧುಮೇಹದ ಪ್ರಕರಣಗಳು ಬಹಿರಂಗಗೊಂಡಿಲ್ಲ. ಮಲಗುವ ಮುನ್ನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಗರ್ಭಧಾರಣೆಯ ಮಧುಮೇಹ ಉಂಟಾಗುವ ಹೆಚ್ಚಿನ ಅಪಾಯವಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ ಎಂದು ಪ್ರಮುಖ ಸಂಶೋಧಕ ಡಾ.ಮಿಂಜಿ ಕಿಮ್ ಹೇಳಿದ್ದಾರೆ.