Uttar Pradesh: ಇಲ್ಲೊಬ್ಬಳು ಆಧುನಿಕ ಮೀರಾಬಾಯ್: ಸಾಕ್ಷಾತ್ ಶ್ರೀಕೃಷ್ಣನನ್ನೇ ವರಿಸಿದಳು ಈ ಕಾನೂನು ಪದವೀಧರೆ!

Bhagwan krishna :ಈಗಂತೂ ವಿಭಿನ್ನವಾದಂತಹ ಮದುವೆಗ(Marriage) ನಡೆದು ನಮಗೆಲ್ಲರಿಗೂ ಅಚ್ಚರಿಯನ್ನು ಉಂಟುಮಾಡುತ್ತಿವೆ. ಕಳೆದ ವರ್ಷ ಭಾರತದಲ್ಲಿಯೇ ಇಂತಹ ಮದುವೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಬ್ಬಳು ದೇವರನ್ನು ಮದುವೆಯಾದರೆ ಮತ್ತೊಬ್ಬಳು ತನ್ನನ್ನು ತಾನೇ ಮದುವೆ ಆಗಿ ಸುದ್ಧಿಯಾಗಿದ್ದಳು. ಮೊನ್ನೆ ಮೊನ್ನೆ ತಾನೆ ವಿದೇಶಿ ಪೋರಿಯೊಬ್ಬಳು ತನ್ನನ್ನು ತಾನೇ ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದ(Divorce) ನವನ್ನೂ ಪಡೆದುಕೊಂಡಿದ್ದಳು. ಆದರೀಗ ಯುವತಿಯೊಬ್ಬಳು ಭಗವಾನ್ ಶ್ರೀಕೃಷ್ಣ(Shree Krishna) ನನ್ನು ಮದುವೆಯಾದ ವಿಚಿತ್ರ ಪ್ರಸಂಗವೊಂದು ನಡೆದಿದೆ.

 

ಹೌದು, ಉತ್ತರ ಪ್ರದೇಶದ(Uttara Pradesha) ಔರ್ರೈಯಾ ಜಿಲ್ಲೆಯಲ್ಲಿ ಇಂಥದೊಂದು ಘಟನೆ ನಡೆದಿದ್ದು, ರಕ್ಷಾ(Raksha) ಎಂಬ ವಿದ್ಯಾರ್ಥಿನಿ ಕೃಷ್ಣನನ್ನೇ ಮದುವೆಯಾಗಿದ್ದಾಳೆ. ಕಾನೂನು ಪದವಿ(LLB) ಓದಿರುವ ಈಕೆಗೆ ಕೃಷ್ಣನ ಮೇಲೆ ಅತಿಯಾದ ಭಕ್ತಿ. ಈಕೆ ಪ್ರತಿನಿತ್ಯ ಕೃಷ್ಣನ್ನು ಪೂಜಿಸುತ್ತಿದ್ದಳು. ಇದೀಗ ಭಕ್ತಿ ಹೆಚ್ಚಾಗಿ ಕೃಷ್ಣ (Bhagwan krishna) ಯಾವತ್ತೂ ನನ್ನ ಜೊತೆಗೇ ಇರಬೇಕು ಅನ್ನೋ ಉದ್ದೇಶದಿಂದ ಆತನನ್ನೇ ವರಿಸಿದ್ದಾಳಂತೆ. 16ನೇ ಶತಮಾನದಲ್ಲಿ ಮೀರಾಬಾಯ್​ (Mirabai) ಶ್ರೀ ಕೃಷ್ಣನನ್ನೇ ತನ್ನ ಗಂಡ ಎಂದು ತಿಳಿದುಕೊಂಡು ಜೀವನವನ್ನು ಸಾಗಿಸ್ತಿದ್ದ ಕಥೆ ನಮಗೆ ಗೊತ್ತಿದೆ, ಆದರೆ ಈ ಆಧುನಿಕ ಮೀರಾಬಾಯ್ ಕೂಡ ಎಲ್ಲರಲ್ಲೂ ಅಚ್ಚರಿ ಉಂಟುಮಾಡಿದ್ದಾಳೆ.

ಅಂದಹಾಗೆ ಈಗಾಗಲೇ ಹೇಳಿದಂತೆ ರಕ್ಷಾ ಶ್ರೀ ಕೃಷ್ಣ ದೇವರನ್ನು ಹೃದಯದಿಂದ ಪೂಜಿಸುತ್ತಿದ್ದಳು. ಹಾಗೆಯೇ ಪ್ರೀತಿಸುತ್ತಲೂ ಇದ್ದಾಳು. ನಂತರ ಈ ದೇವರನ್ನೇ ಮದುವೆ ಆಗುವ ನಿರ್ಧಾರವನ್ನೂ ಮಾಡಿದಳು. ಈ ವಿಷಯವನ್ನು ಮೊದಲು ತನ್ನ ತಂದೆಯಾದ ರಂಜಿತ್​ ಸಿಂಗ್​ ಸೋಲಂಕಿಯ ಬಳಿ ಹೇಳಿದ್ದಾಳೆ. ಇದಕ್ಕೆ ಆಕೆಯ ತಂದೆ ಕೂಡ ಒಪ್ಪಿಕೊಂಡು, ಅವರ ಕುಟುಂಬದವರಿಗೆ ಈ ವಿಷಯವನ್ನು ತಿಳಿಸಿ, ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮದುವೆಯಲ್ಲಿ ರಕ್ಷಾಳ ಕುಟುಂಬಸ್ಥರು, ಆಪ್ತರು ಎಲ್ಲರೂ ಆಗಮಿಸಿದ್ದರು.

ಅಂತೆಯೇ ಮದುವೆಯಲ್ಲಿ ಪ್ರತೀ ಶಾಸ್ತ್ರವನ್ನು ಮಾಡಿದ್ದಾರೆ. ಇದೇ ಸಮಯಲ್ಲಿ ಕೃಷ್ಣನ ಮೂರ್ತಿ ಮತ್ತು ರಕ್ಷಾಳ ಮದುವೆಯ ಅದ್ಧೂರಿ ಮೆರವಣಿಗೆ ಕೂಡ ನಡೆದಿದೆ. ಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡ ರಕ್ಷ ಮೆರವಣಿಗೆಯಲ್ಲಿ ಹೆಜ್ಜೆಹಾಕಿದ್ದಾಳೆ. ಈ ವೇಳೆ ಕುಟುಂಬಸ್ಥರು ಆರತಿ ಬೆಳಗಿದ್ದಾರೆ. ಬಳಿಕ ಕೃಷ್ಣನ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಬಳಿಕ ವಧು ರಕ್ಷಾ , ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್​ಪುರ ಪ್ರದೇಶದಲ್ಲಿನ ಒಬ್ಬರ ನೆಂಟರ ಮನೆಗೆ ಹೋಗಿದ್ದಾಳೆ. ನಂತರ ಅಲ್ಲಿಂದ ತನ್ನ ಪತಿ ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ತವರಿಗೆ ವಾಪಾಸ್​ ಬಂದಿದ್ದಾಳೆ.

Leave A Reply

Your email address will not be published.