Post Office : ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್ ತಿಳಿಯಲು ಇಲ್ಲಿದೆ 7 ಸುಲಭ ಮಾರ್ಗ!!
Post office balance enquiry : ಪ್ರಸ್ತುತ ಭಾರತೀಯ ನಾಗರಿಕರು ಅಂಚೆ ಕಚೇರಿಯ ಉಳಿತಾಯ ಖಾತೆಯನ್ನು (savings account ) ಆನ್ಲೈನ್ (online ) ಅಥವಾ ಆಫ್ಲೈನ್ (offline ) , ಅಂಚೆ ಕಚೇರಿಗಳು ಅಥವಾ ಯಾವುದೇ ಬ್ಯಾಂಕ್ನಲ್ಲಿ ತೆರೆಯಬಹುದು. ಇನ್ನು ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯ ಗ್ರಾಹಕರು ದೇಶದ ಯಾವುದೇ ಮೂಲೆಯಿಂದ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವಿಲ್ಲದೆಯೂ ಖಾತೆಯ ಮಾಹಿತಿ (Post office balance enquiry) ಪಡೆಯಬಹುದು.
ಮುಖ್ಯವಾಗಿ ಗ್ರಾಹಕರಿಗೆ ತಮ್ಮ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ಮೊತ್ತವನ್ನು ತಿಳಿದುಕೊಳ್ಳಲು ಅಂಚೆ ಇಲಾಖೆಯು ನಾನಾ ರೀತಿಯ ಆಯ್ಕೆಗಳನ್ನು ನೀಡಿದೆ. ಇದು ಆನ್ಲೈನ್ ಹಾಗೂ ಆಫ್ಲೈನ್ ವ್ಯವಸ್ಥೆಯನ್ನು ಹೊಂದಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ :
ಗ್ರಾಹಕರು 8424054994 ಸಂಖ್ಯೆಗೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ಕಾಲ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಎಸ್ಎಂಎಸ್ ರೂಪದಲ್ಲಿ ಉಳಿತಾಯ ಖಾತೆ ಬ್ಯಾಲೆನ್ಸ್ ವಿವರಗಳನ್ನು ಅಂಚೆ ಕಚೇರಿ (post office ) ಕಳುಹಿಸುತ್ತದೆ.
ಅದಲ್ಲದೆ ಗ್ರಾಹಕರು “balance” ಎಂದು ಟೈಪ್ ಮಾಡಿ 7738062873 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬೇಕು. ಕೆಲವೇ ನಿಮಿಷಗಳಲ್ಲಿ ತಮ್ಮ ಬ್ಯಾಲೆನ್ಸ್ ವಿವರಗಳನ್ನು ಒಳಗೊಂಡಿರುವ ಸಂದೇಶ ಗ್ರಾಹಕರ ಮೊಬೈಲ್ಗೆ ಬರುತ್ತದೆ.
ಇನ್ನು IPPB ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಖಾತೆ ಸಂಖ್ಯೆ, ಗ್ರಾಹಕ ID ಸಂಖ್ಯೆ ನಮೂದಿಸಿ. ನೋಂದಾಯಿತ ಮೊಬೈಲ್ ಫೋನ್ನಲ್ಲಿ OTP ಸ್ವೀಕರಿಸಲಾಗುತ್ತದೆ. ಇದು ಪರಿಶೀಲಿಸುತ್ತದೆ. OTP ನಂತರ ನೋಂದಣಿ ಪೂರ್ಣಗೊಳ್ಳುತ್ತದೆ. ಅಪ್ಲಿಕೇಶನ್ಗೆ ಲಾಗ್ ಇನ್ ಮಾಡುವ ಮೂಲಕ MPIN ಅನ್ನು ಹೊಂದಿಸಿ. ಡ್ಯಾಶ್ಬೋರ್ಡ್ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
ಇನ್ನು ಗ್ರಾಹಕರು ಇ-ಪಾಸ್ಬುಕ್ ಸೌಲಭ್ಯ ಅಥವಾ ಇಂಟ್ರಾಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್(IVRS) ಮೂಲಕವೂ ತಮ್ಮ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 155299 (ಟೋಲ್ ಫ್ರೀ) ಅನ್ನು ಡಯಲ್ ಮಾಡಿ. IVRS ಆಜ್ಞೆಯನ್ನು ಅನುಸರಿಸಿ. ಇದಕ್ಕಾಗಿ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಉಳಿತಾಯ ಖಾತೆ ವಿವರಗಳನ್ನು ಆಯ್ಕೆಮಾಡಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಗೆಟ್ ಬ್ಯಾಲೆನ್ಸ್ ಆಯ್ಕೆಯನ್ನು ಆರಿಸಿದಾಗ ನಿಮ್ಮ ಖಾತೆ ಮೊತ್ತ ವಿವರಗಳು ತಿಳಿಯಬಹುದು.
ಅದಲ್ಲದೆ ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ಗೆ ಹೋಗಿ. ನೀವು ವೆಬ್ಸೈಟ್ನಲ್ಲಿ (website) ಖಾತೆಯನ್ನು ರಚಿಸಬೇಕು. ನೀವು ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಪಡೆಯುತ್ತೀರಿ. DOP ಇ-ಬ್ಯಾಂಕಿಂಗ್ ಪೋರ್ಟಲ್ಗೆ ಲಾಗ್ ಇನ್ ಮಾಡಿ ಮತ್ತು ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. OTP ಅನ್ನು ನಮೂದಿಸುತ್ತದೆ. ಈಗ ಖಾತೆ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
ಈ ಮೇಲಿನಂತೆ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಯಾವುದೇ ತೊಂದರೆ ಇಲ್ಲದೆ ಮೊಬೈಲ್ ಫೋನ್ನಲ್ಲಿ ಖಾತೆಯ ಉಳಿತಾಯ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.