Agriculture News । ಬಿಸಿ ಗಾಳಿ ಹೆಚ್ಚಳ, ಕೃಷಿಗೆ ಭಾರೀ ಹೊಡೆತ ; ಮಾರ್ಚ್‌ ಮೇ ತಿಂಗಳಲ್ಲಿ ಸೆಖೆಗೆ ಜನ ಹಾಕಲಿದ್ದಾರಾ ಹಾಹಾಕಾರ ?!

Agriculture News: ಮುಂದಿನ ಬೇಸಿಗೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜನರು ಬಿಸಿಗಾಳಿಯಿಂದ ಜನರು ಕಂಗಲಾಗಲಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಕೆಲ ರಾಜ್ಯಗಳಲ್ಲಿ ಮಾರ್ಚ್ ಮತ್ತು ಮೇ ನಡುವೆ ಬಿಸಿ ಗಾಳಿ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮಂಗಳವಾರ ತಿಳಿಸಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. ” ಬರುವ ಮಾರ್ಚ್‌ನಿಂದ ಮೇ ಋತುವಿನಲ್ಲಿ ಬಿಸಿಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿರಲಿದೆ ” ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಣೆಯಲ್ಲಿ ತಿಳಿಸಿದೆ.

ಗೋಧಿ ಉತ್ಪಾದಿಸುವ ಪ್ರಮುಖ ಕೇಂದ್ರ ಮತ್ತು ಉತ್ತರ ರಾಜ್ಯಗಳಲ್ಲಿ ಸೆಕೆಯ ಅಬ್ಬರ ಜಾಸ್ತಿ ಆಗಿರಲಿದೆ. ಈಗಿನ ಫೆಬ್ರವರಿ ತಿಂಗಳಲ್ಲಿ ಭಾರತದ ವಿವಿಧೆಡೆ ಗರಿಷ್ಠ ಉಷ್ಣತೆ ದಾಖಲಾಗಿಡೆ. ಅದು ಮಾರ್ಚ್‌ ನಂತರವೂ ಇದು ಮುಂದುವರೆಯುವ ಸಾಧ್ಯತೆ ಮತ್ತು ಮತ್ತಷ್ಟು ಬಿಗಡಾಯಿಸುವ ಸೂಚನೆಯಿದೆ. ಈ ಬಿಸಿಗಾಳಿಯ ತೀವ್ರತೆ ಹೆಚ್ಚಾಗಲಿರುವುದರಿಂದ ಗೋಧಿ, ಸಾಸಿವೆ, ಕಡಲೆಯಂತಹ ಕೃಷಿ ಬೆಳೆಗಳ ಉತ್ಪಾದನೆ ಕುಂಠಿತವಾಗಗುವ ನಿರೀಕ್ಷೆ ಹೆಚ್ಚಿದೆ. ಇದರಿಂದಾಗಿ ಆಹಾರ ಸಂಬಂಧಿ ಹಣದುಬ್ಬರ ತಗ್ಗಿಸುವ ಸರಕಾರದ ಪ್ರಯತ್ನಗಳು ವಿಫಲಗೊಳ್ಳಬಹುದು ಅಥವಾ ನಿಯಂತ್ರಿಸಲು ತ್ರಾಸದಾಯಕ ಆಗಬಹುದು.

“ಹೆಚ್ಚಿನ ತಾಪಮಾನದಿಂದಾಗಿ ಗೋಧಿ ಬೆಳೆಗೆ ಈಗಾಗಲೇ ತೊಂದರೆಯಾಗಿದೆ. ಮಾರ್ಚ್‌ ತಿಂಗಳಲ್ಲಿ ತಾಪಮಾನ ಹೆಚ್ಚಾಗಿ ಇಳುವರಿ ನಷ್ಟವಾಗಬಹುದು” ಎಂದು ಮುಂಬೈ ಮೂಲದ ಡೀಲರ್‌ವೊಬ್ಬರು ಜಾಗತಿಕ ವ್ಯಾಪಾರ ಸಂಸ್ಥೆಗೆ ತಿಳಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಭಾರತದಲ್ಲಿ ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ಗೋಧಿ ಬೆಳೆಯಲಾಗುತ್ತದೆ. ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಗೋಧಿ ಕೃಷಿ ಆರಂಭಿಸಲಾಗುತ್ತದೆ. ಮಾರ್ಚ್‌ ತಿಂಗಳಲ್ಲಿ ಅದನ್ನು ಕಟಾವು ಮಾಡಲಾಗುತ್ತದೆ. 2022 ರಲ್ಲಿ, ಬಿಸಿಗಾಳಿಯ ಅಲೆಗಳಿಂದಾಗಿ ಭಾರತದ ಗೋಧಿ ಉತ್ಪಾದನೆಯನ್ನು ಕುಂಠಿತಗೊಂಡಿತ್ತು. ಆದುದರಿಂದ ಜಗತ್ತಿನ ಎರಡನೇ ದೊಡ್ಡ ಗೋಧಿ ರಫ್ತುದಾರ ದೇಶವೆನಿಸಿಕೊಂಡಿದ್ದ ಭಾರತವು ಗೋಧಿ ರಫ್ತು ಮಾಡುವುದನ್ನೇ ನಿಲ್ಲಿಸುವಂತಹ ಪರಿಸ್ಥಿತಿಗೆ ಬಂದಿತ್ತು.

ಡಿಸೇಂಬರಿನಲ್ಲಿ ಬಿತ್ತಿದ ಬೆಳೆಗಳು ಮಾರ್ಚ್‌ನಲ್ಲಿ ಸಮೃದ್ಧವಾಗಿ ಬೆಳೆಯುತ್ತವಾದುದರಿಂದ ಕೃಷಿಕರಿಗೆ ಮಾರ್ಚ್‌ ಪ್ರಮುಖ ತಿಂಗಳಾಗಿದೆ. ಗರಿಷ್ಠ ತಾಪಮಾನವು ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧೆಡೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಷ್ಟೇ ಅಲ್ಲದೆ, ಈ ತಾಪಮಾನ ಹೆಚ್ಚಳದಿಂದ ವಿದ್ಯುತ್‌ ಬಳಕೆ ಹೆಚ್ಚಾಗಬಹುದು. ಕೃಷಿ ಮಾತ್ರವಲ್ಲದೆ ಮನೆಯೊಳಗೆ ಬಳಸುವ ವಿದ್ಯುತ್ ಬಿಲ್ ನಲ್ಲಿ ಹೆಚ್ಚಳ ಸಾಧ್ಯತೆ ಕಂಡುಬಂದಿದೆ. ಮನೆಯಲ್ಲಿ ಮತ್ತು ಆಫೀಸುಗಳಲ್ಲಿ ಬಳಸುವ ಫ್ಯಾನ್‌, ಏಸಿ, ಕೂಲಿಂಗ್‌ ಇತ್ಯಾದಿಗಳಿಗೆ ಹೆಚ್ಚಿನ ವಿದ್ಯುತ್‌ ಬೇಡಿಕೆ ಬರಲಿದೆ. ನಮ್ಮಲ್ಲಿ ಫೆಬ್ರವರಿ ತಿಂಗಳಿನಲ್ಲಿ ಸರಾಸರಿ ಗರಿಷ್ಠ ತಾಪಮಾನವು 29.54 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಹವಾನಾ ಇಲಾಖೆಗಳ ದಾಖಲೆಗಳ ಪ್ರಕಾರ 1901ರ ಬಳಿಕದಿಂದಲೇ ದಾಖಲಾದ ಅತ್ಯಧಿಕ ಉಷ್ಣತೆಯಾಗಿದೆ.

ಅಲ್ಲದೆ ಫೆಈ ಬಾರಿ ಭಾರತದಲ್ಲಿ ಶೇಕಡ 68 ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದು ಕೂಡಿಸ ಬಿಸಿ ಏರಿಸಲು ಮುಖ್ಯ ಕಾರಣ ಎನ್ನಲಾಗಿದೆ. ಭಾರತ ಮಾತ್ರವಲ್ಲ, ದಕ್ಷಿಣ ಏಷ್ಯಾದ ದೇಶಗಳಲ್ಲಿ ಇನ್ನಷ್ಟು ಬಿಸಿಗಾಳಿ ತೊಂದರೆ ಉಂಟಾಗಲಿದೆ ವಾಯುಮಾನ ಅಧಿಕಾರಿಗಳು ಕಳೆದ ವರ್ಷವೇ ಎಚ್ಚರಿಸಿದ್ದರು. ಈಗ ಭಾರತದ ವಿವಿಧ ಕಡೆಗಳಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಅದಕ್ಕಾಗಿ ಸಿದ್ಧತೆಯಲ್ಲಿದೆ ಎಂದು ತಿಳಿಸಿದೆ.

Leave A Reply

Your email address will not be published.