Audi e-Tron GT: ಆಡಿ ಬಿಡುಗಡೆ ಮಾಡಿತು ಹೊಸ ಇ-ಕಾರ್‌ ಆಡಿ: ಭಾರತದಲ್ಲಿ ಎಷ್ಟು ಬೆಲೆ ಗೊತ್ತಾ?

Audi e-Tron GT EV: ಭಾರತದ ಮಾರುಕಟ್ಟೆಗೆ ನೂತನ ಕಾರುಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ವಿವಿಧ ರೀತಿಯಲ್ಲಿ ಆಕರ್ಷಿಸಲು ಸಜ್ಜಾಗಿವೆ. ಹಾಗೆಯೇ ಇದೀಗ ಆಡಿ ತನ್ನ ಹೊಸ ಇ-ಟ್ರಾನ್‌ ಜಿಟಿ ಎಲೆಕ್ಟ್ರಿಕ್‌ ಕಾರ (Audi e-Tron GT EV) ನ್ನು ಬಿಡುಗಡೆ ಮಾಡಿದೆ. ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ.

ಜರ್ಮನಿ ಮೂಲದ ಕಾರು ತಯಾರಿಕ ಕಂಪನಿ ಆಡಿ(Audi), ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಎಲೆಕ್ಟ್ರಿಕ್‌ ಕಾರ್‌ ಇದಾಗಿದೆ. ಕೆಲ ತಿಂಗಳ ಹಿಂದೆ ಇ-ಟ್ರಾನ್‌ ಎಸ್‌ಯುವಿ(e-tron SUV) ಹಾಗೂ ಇ-ಟ್ರಾನ್‌ ಸ್ಪೋರ್ಟ್‌ ಬ್ಯಾಕ್‌ ಎಸ್‌ಯೂವಿ ಕಾರನ್ನು ಆಡಿ ಭಾರತದಲ್ಲಿ ಬಿಡುಗಡೆ ಮಾಡಿತ್ತು.

ಸದ್ಯ Audi e-Tron ಕಾರು ಪ್ಯಾನೆಲ್‌ನಲ್ಲಿ ಕಂಪನಿಯ ಸಿಗ್ನೇಚರ್‌, ಮ್ಯಾಟ್ರಿಕ್ಸ್‌ ಎಲ್‌ಇಡಿ ಹೆಡ್‌ಲೈಟ್‌ಗಳು, ಓಆರ್‌ವಿಎಂ ಇಂಡಿಕೇಟರ್‌ಗಳು ಮತ್ತು ಇದು 19 ಇಂಚ್‌ನ ಚಕ್ರ ಹೊಂದಿದೆ. ಈ ಕಾರು ಒಂಬತ್ತು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಐದು ಸೀಟರ್‌ಗಳಿದ್ದು, ಅಕೌಸ್ಟಿಕ್‌ ಎಚ್ಚರಿಕೆ ವ್ಯವಸ್ಥೆ, ಸ್ಪೋರ್ಟ್ಸ್‌ ಮಾದರಿಯ ಮುಂಭಾಗ ಸೀಟುಗಳು, ಫ್ಲ್ಯಾಟ್‌ ಬಾಟಮ್ ಸ್ಟ್ರೀರಿಂಗ್‌ ಈ ಕಾರಿನಲ್ಲಿ ಆಕರ್ಷಣೀಯವಾಗಿದೆ.

ಅಲ್ಲದೆ, 12.3 ಇಂಚಿನ ವರ್ಚ್ಯುವಲ್‌ ಕಾಕ್‌ಪೀಟ್‌, 10.1 ಇಂಚ್‌ನ ಟಚ್‌ ಸ್ಕ್ರೀನ್‌ ಟಿ.ವಿ,ವೈ-ಫೈ ಹಾಟ್‌ ಸ್ಪಾಟ್, ವಾಯ್ಸ್‌ ಕಮಾಂಡ್‌ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಏರ್‌ಬ್ಯಾಗ್ಸ್‌ ಹಾಗೂ ಪಾರ್ಕಿಂಗ್‌ ಕ್ಯಾಮೆರಾ ಕೂಡ ಇದೆ. ಈ ಕಾರು ಎರಡು ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ಹೊಂದಿದ್ದು, 85kWh ಲೀಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಬ್ಯಾಟರಿಗಳು ಫಾಸ್ಟ್‌ ಚಾರ್ಜಿಂಗ್‌ ಆಗಿದ್ದು, ಗರಿಷ್ಠ ಗಂಟೆಗೆ 250 ಕಿ.ಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಪಡೆದಿದೆ.

ಈ ಕಾರು ಸಂಪೂರ್ಣವಾಗಿ ಜರ್ಮನಿಯಲ್ಲೇ ನಿರ್ಮಾಣವಾಗಿ ಭಾರತಕ್ಕೆ ಬರಲಿದ್ದು, ಜಿಟಿ ಕ್ವಾಟ್ರೋ ಮಾದರಿಯ ಎಕ್ಸ್ ಶೋ ರೂಂ ಬೆಲೆ ₹ 1.80 ಕೋಟಿ ಇದೆ. ಹಾಗೂ ಟಾಪ್ ಆಫ್‌ ದಿ ಲೈನ್ ಆರ್‌ ಎಸ್‌ ಮಾದರಿಯ ಕಾರಿಗೆ ₹ 2.05 ಇರಲಿದೆ.

Leave A Reply

Your email address will not be published.