ಮಹೀಂದ್ರಾ XUV400 EV 1.75 ಕೋಟಿಗೆ ಖರೀದಿ ಮಾಡಿದ ವ್ಯಕ್ತಿ!

ಮಹೀಂದ್ರಾ XUV400 ಎಲೆಕ್ಟ್ರಿಕ್ SUV (Mahindra XUV400) ಯನ್ನು ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಬುಕಿಂಗ್ ಆರಂಭವಾಗಿದೆ. ಈ XUV400 ಎಲೆಕ್ಟ್ರಿಕ್ SUV ಯನ್ನು ಹರಾಜಿನಲ್ಲಿ ಮಾರಾಟ ಮಾಡುವುದಾಗಿ ಮಹೀಂದ್ರಾ ಈ ಹಿಂದೆ ಘೋಷಣೆ ಮಾಡಿತ್ತು. ಇದೀಗ ವ್ಯಕ್ತಿಯೊಬ್ಬರು 1.75 ಕೋಟಿ ರೂ.ಗೆ ಮಹೀಂದ್ರಾ XUV400 EV ಅನ್ನು ಖರೀದಿಸಿದ್ದಾರೆ. ಆ ವ್ಯಕ್ತಿ ಯಾರು ಗೊತ್ತಾ?

ಮಹೀಂದ್ರಾ(Mahindra) ವಿಶೇಷ ಆವೃತ್ತಿಯ XUV400 ಸಾರ್ವಜನಿಕ ಸಮಾರಂಭದಲ್ಲಿ 1.75 ಕೋಟಿ ರೂ.ಗೆ ಹರಾಜು ಮಾಡಲಾಗಿದೆ. ಈ ಮಹೀಂದ್ರಾ XUV400 ಅನ್ನು ಮಹೀಂದ್ರಾ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಅವರು ಹೈದರಾಬಾದ್ ಮೂಲದ ಕರುಣಾಕರ್ ಕುಂದವರಮ್ ಅವರಿಗೆ 1 ಕೋಟಿ 75 ಸಾವಿರ ರೂ.ಗೆ ಹಸ್ತಾಂತರಿಸಿದರು. ಹಾಗೆಯೇ ಹರಾಜಿನಿಂದ ಬರುವ ಹಣವನ್ನು ಮಹೀಂದ್ರಾ ರೈಸ್ ಸಸ್ಟೈನಬಿಲಿಟಿ ಚಾಂಪಿಯನ್ ಪ್ರಶಸ್ತಿ ಮತ್ತು ಸಾಮಾಜಿಕ ಸೇವೆಗಳ ವಿಜೇತರಿಗೆ ವಿತರಿಸಲಾಗುವುದು ಎಂದು ಮಹೀಂದ್ರಾ ತಿಳಿಸಿದೆ.

ಇನ್ನು ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಹೀಂದ್ರಾದ ಮುಖ್ಯ ವಿನ್ಯಾಸ ಅಧಿಕಾರಿ ಪ್ರತಾಪ್ ಬೋಸ್ ಮತ್ತು ಫ್ಯಾಷನ್ ಡಿಸೈನರ್ ರಿಮ್ಸಿಮ್ ದಾದು ಅವರು ವಿನ್ಯಾಸಗೊಳಿಸಿದ್ದಾರೆ. ಈ ಎಸ್ ಯುವಿ ಬ್ಯಾಟರಿ ಪ್ಯಾಕ್ ಮತ್ತು ಶ್ರೇಣಿಯನ್ನು ಹೊಂದಿದ್ದು, ಇದನ್ನು ನೀಲಿ ಬಣ್ಣದ ಆಯ್ಕೆಯಲ್ಲಿ ನಿರ್ಮಿಸಲಾಗಿದೆ. SUV ನಲ್ಲಿ ಕಾಪರ್ ಆಕ್ಸೆಂಟ್‌ಗಳು, ಬ್ಲಾಕ್ ಅಲಾಯ್ ವೀಲ್‌ಗಳು, ಕಾಪರ್ ರೂಫ್ ಮತ್ತು ಕಾರಿನಾದ್ಯಂತ ರಿಮ್ಸಿಮ್ ದಾದು x ಬೋಸ್ ಬ್ರ್ಯಾಂಡಿಂಗ್‌ನಂತಹ ಕೆಲವು ವಿಶೇಷ ವೈಶಿಷ್ಟ್ಯಗಳು ಇವೆ.

ಮಹೀಂದ್ರಾದ ಎಲೆಕ್ಟ್ರಿಕ್ ಕಾರು ಪ್ರಸ್ತುತ EC ಮತ್ತು EL ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದೀಗ EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ ರೂ.ಗಳಿಂದ 18.99 ಲಕ್ಷ ರೂ. ಇದೆ. XUV400 EC ರೂಪಾಂತರಕ್ಕಾಗಿ 34.5 kWh ಬ್ಯಾಟರಿ ಪ್ಯಾಕ್ ಮತ್ತು 375 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಹಾಗೇ ಎರಡನೇ EL ರೂಪಾಂತರವು 39.4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು 456 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

XUV400 EV ಮುಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು, ಇದು 150 bhp ಪವರ್ ಮತ್ತು 310 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ SUV ಕೇವಲ 8.3 ಸೆಕೆಂಡುಗಳಲ್ಲಿ 100 kmph ವೇಗವನ್ನು ತಲುಪುತ್ತದೆ. ಹಾಗೇ ಇದರಲ್ಲಿ 50kW DC ಫಾಸ್ಟ್ ಚಾರ್ಜರ್ ಬಳಸಿ 50 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇ 80 ರಷ್ಟು ಚಾರ್ಜ್ ಮಾಡಬಹುದು. 7.2kW ಅಥವಾ 3.3kW AC ಚಾರ್ಜರ್ ಕ್ರಮವಾಗಿ 6 ​​ಗಂಟೆ 30 ನಿಮಿಷಗಳು ಮತ್ತು 13 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎನ್ನಲಾಗಿದೆ.

Leave A Reply

Your email address will not be published.