Kitchen Management : ಅಡುಗೆ ಮನೆಯ ಆಹಾರ ಸಾಮಾಗ್ರಿಗಳು ವ್ಯರ್ಥವಾಗದಂತೆ ನೋಡಿಕೊಳ್ಳುವ ಟಿಪ್ಸ್‌ ನಿಮಗಾಗಿ ಇಲ್ಲಿದೆ !

Kitchen Management : ಜಗತ್ತಿನಲ್ಲಿ ಇಂದಿಗೂ ಅದೆಷ್ಟೋ ಜನರು ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಇಂದಿನ ಸ್ಥಿತಿ ಹೇಗಿದೆ ಅಂದ್ರೆ ಹಸಿವು ಹೆಚ್ಚಿರೋರಿಗೆ ಊಟವೇ ಇಲ್ಲ. ಅದೇ ಊಟ ಹೆಚ್ಚಿರೋರಿಗೆ ಹಸಿವು ಕಡಿಮೆಯೇ ಇರಬೇಕು. ಅದಕ್ಕೆ ಅರ್ಧಂಬರ್ಧ ಊಟ ಮಾಡಿ ಉಳಿದದ್ದನ್ನು ಬಿಸಾಕುತ್ತಾರೆ. ನೀವು ಹೋಟೆಲ್ ಗಳಿಗೆ ಹೋದರೆ ಇಂತಹ ವ್ಯರ್ಥವಾಗುವ ಆಹಾರಗಳನ್ನು ನೋಡಬಹುದು. ಹಾಗೇ ಬೀದಿ ಬದಿ ವ್ಯಾಪಾರಿಗಳಲ್ಲಿನ ಆಹಾರ ಸಾಮಗ್ರಿಗಳು ವ್ಯರ್ಥವಾಗುವುದು ನೋಡಬಹುದು. ಇದು ಮನೆಯಲ್ಲೂ ಸಂಭವಿಸುತ್ತದೆ. ಆಹಾರ ಹೆಚ್ಚಾಗಿ ಅಥವಾ ಕೊಳೆತು ಬಿಸಾಕುತ್ತಾರೆ. ಆದರೆ ಮನೆಯಲ್ಲಿನ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು. ಹೇಗೆ? ಆಹಾರ ಹಾಗೂ ಆಹಾರ ಸಾಮಗ್ರಿಗಳು ವ್ಯರ್ಥವಾಗದಂತೆ ಅಡುಗೆಮನೆ ನಿರ್ವಹಣೆ (Kitchen management) ಮಾಡುವುದು ಹೇಗೆಂಬ ಸಲಹೆಗಳು ಇಲ್ಲಿವೆ.

• ಮನೆಯಲ್ಲಿನ ಮಹಿಳೆಯರಿಗೆ ಏನಾದರೂ ರೆಸಿಪಿ ಮಾಡುವ ಹವ್ಯಾಸವಿರುತ್ತದೆ. ಹಾಗೇ ಬೆಳಗ್ಗಿನ ತಿಂಡಿಗೋ, ಮದ್ಯಾಹ್ನದ ಊಟಕ್ಕೋ, ಒಂದೊಳ್ಳೆಯ ರೆಸಿಪಿ ಮಾಡಬೇಕು ಎನಿಸುತ್ತದೆ. ಆದರೆ ನೀವು ಅಡುಗೆ ಸಾಮಗ್ರಿಗಳನ್ನು ತರುವ ಮೊದಲು, ಒಮ್ಮೆ ಅಡುಗೆ ಮನೆ, ಫ್ರಿಡ್ಜ್‌ನಲ್ಲಿ ಕಣ್ಣಾಡಿಸಿ. ಯಾಕಂದ್ರೆ ನಿಮ್ಮ ರೆಸಿಪಿಗೆ ಬೇಕಾಗುವ ವಸ್ತುಗಳು ಈಗಾಗಲೇ ಮನೆಯಲ್ಲಿ ಇರಬಹುದು. ಇದ್ದರೆ ಮತ್ತೆ ತರುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ, ಆಹಾರ ಸಾಮಾಗ್ರಿ ವ್ಯರ್ಥವಾಗುವುದು ಉಳಿಯುತ್ತದೆ.

• ಪ್ರತಿ ಬಾರಿ ಅಡುಗೆ ಮಾಡುವಾಗ ಫ್ರಿಡ್ಜ್‌ನಲ್ಲಿ ಕಣ್ಣಾಡಿಸಿ. ಯಾಕಂದ್ರೆ ನೀವು ಫ್ರಿಡ್ಜ್‌ ಡೋರ್ ಓಪನ್ ಮಾಡಿ ನೋಡದೆ ಇದ್ದರೆ ಅದರಲ್ಲಿನ ಆಹಾರ ಸಾಮಾಗ್ರಿ, ಹಣ್ಣುಗಳು ಕೊಳೆತು, ವ್ಯರ್ಥವಾಗುತ್ತದೆ. ಹಾಗೆಯೇ ಒಣಗಿದ ತರಕಾರಿಗಳನ್ನು ಮೊದಲು ಬಳಸಬೇಕು. ಕೆಲವೊಂದು ತರಕಾರಿ, ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಹಾಗಾಗಿ ಅವುಗಳನ್ನು ಇರಿಸುವ ರೀತಿ ಕೂಡ ಮುಖ್ಯವಾಗುತ್ತದೆ. ಆಹಾರ ಸಾಮಾಗ್ರಿಗಳನ್ನು ಪ್ರತಿಯೊಂದನ್ನು ವಿಭಾಗ ಮಾಡಿ, ಅವುಗಳನ್ನು ಬೇರೆ ಬೇರೆಯಾಗಿಸಿ, ಕವರ್ ಅಥವಾ ಡಬ್ಬಿನ ಮೇಲೆ ಲೇಬಲ್ ಅಂಟಿಸಬೇಕು. ಆಗ ಸುಲಭವಾಗಿ, ಬೇಗನೆ ಸಿಗುತ್ತದೆ.

• ಕೆಲವೊಂದು ಬಾರಿ ಪದಾರ್ಥಗಳು ಹೆಚ್ಚಾಗಿ, ಬಿಸಾಕುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಮೊದಲೇ ಎಷ್ಟು ಬೇಕು ಅಷ್ಟು ಮಾತ್ರ ಸಾಂಬಾರ್ ಮಾಡಿ, ಆಗ ವ್ಯರ್ಥವಾಗುವುದಿಲ್ಲ. ಅಲ್ಲದೆ, ಕೆಲವೊಂದು ಬಾರಿ ಅರ್ಧ ಹೆಚ್ಚಿ, ಉಳಿದ ತರಕಾರಿಯನ್ನು ಬಿಸಾಕುವುದುಂಟು. ಹೀಗೆ ಮಾಡಬೇಡಿ. ಬದಲಾಗಿ ಉಳಿದ ತರಕಾರಿಯಿಂದ ಬೇರೆ ರೆಸಿಪಿ ತಯಾರಿಸಿ. ಇದರಿಂದ ತರಕಾರಿ ವ್ಯರ್ಥ ಆಗೋದು ಇಲ್ಲ. ಬೇರೆ ಬೇರೆ ಆಹಾರ ಸವಿದ ಹಾಗೂ ಆಗುತ್ತದೆ.

• ಹೆಚ್ಚಾಗಿ ಆಹಾರ ವ್ಯರ್ಥ ಆಗೋದು ಹೋಟೆಲ್ ಗಳಲ್ಲಿ. ಸಾಕಷ್ಟು ಜನರು ಬಂದು ತಿನ್ನುವ ಸ್ಥಳ ಅದು, ಹಾಗಾಗಿ ಸಾಕಷ್ಟು ಆಹಾರ ವ್ಯರ್ಥವಾಗುತ್ತದೆ. ಹಾಗಾಗಿ ಎಷ್ಟು ಬೇಕು ಅಷ್ಟು ತೆಗೆದುಕೊಳ್ಳುವುದು ಒಳಿತು. ಇಲ್ಲವೇ, ಉಳಿದ ಆಹಾರವನ್ನು ಮನೆಗೆ ತಂದು ಬಿಸಿ ಮಾಡಿಕೊಂಡು ತಿನ್ನಬಹುದು. ಹೋಟೆಲ್‌ನಿಂದ ಆಹಾರ ಪಾರ್ಸೆಲ್‌ ತಂದಾಗಲೂ ಉಳಿದ ಆಹಾರವನ್ನು ಎಸೆಯುವುದಕ್ಕಿಂತ ಬಿಸಿ ಮಾಡಿ ಮತ್ತೊಮ್ಮೆ ಬಳಸುವುದು ಉತ್ತಮ. ಇದರಿಂದ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು.

Leave A Reply

Your email address will not be published.