ತಾಯಿಯ ಅಜ್ಜನ ಸರ್‌ನೇಮನ್ನು ಯಾರಾದರೂ ಬಳಸುತ್ತಾರೆಯೇ? ನೆಹರು ಉಪನಾಮ ಕುರಿತು ಮೋದಿಗೆ ಕಾಂಗ್ರೆಸ್ ತಿರುಗೇಟು!!

ಗಾಂಧಿ ಕುಟುಂಬದವರೇಕೆ ನೆಹರೂ ಸರ್ ನೇಮ್ ಬಳಸುವುದಿಲ್ಲ, ತಮ್ಮ ಕುಟುಂಬದವರೇ ಆದ, ದೇಶದ ಮಹಾನ್ ವ್ಯಕ್ತಿಯ ಹೆಸರನ್ನು ಬಳಸದಿರುವುದು ನಿಜಕ್ಕೂ ನಮಗೆಲ್ಲ ಆಶ್ಚರ್ಯ ಎಂದಿದ್ದ ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಮೋದಿಯವರಿಗೆ ಭಾರತೀಯ ಸಂಸ್ಕೃತಿಯ ಕುರಿತು ಮೂಲಭೂತ ತಿಳುವಳಿಕೆ ಇಲ್ಲ, ಆ ದೇವರೇ ಈ ದೇಶವನ್ನು ಕಾಪಾಡಬೇಕು ಎಂದು ವ್ಯಂಗ್ಯವಾಡಿದೆ.

ಇತ್ತೀಚೆಗೆ ರಾಜ್ಯಸಭೆಯಲ್ಲಿ ರಾಷ್ಟಪತಿಗಳ ಭಾಷಣದ ಮೇಲೆ, ವೇದನಾ ನಿರ್ಣಯದ ನುಡಿಗಳನ್ನಾಡುವಾಗಾ ಪ್ರಧಾನಿ ಮೋದಿ ಅವರು ನೆಹರೂ ಹೆಸರಿನ ವಿಚಾರವಾಗಿ ಪ್ರಸ್ತಾಪ ಮಾಡಿ ‘ಗಾಂಧಿಗಳಿಗೆ ನಾನು ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ. ನೆಹರು ಹೆಸರು ಹೇಳಿಲ್ಲ ಎಂದು ಯಾವಾಗ್ಲೂ ತಲೆ ಕೆಡಿಸಿಕೊಳ್ಳುವ ನೀವು ನಿಮ್ಮ ಸರ್‌ನೇಮ್‌ನಲ್ಲಿ ಯಾಕೆ ಅವರ ಹೆಸರು ಇಟ್ಟುಕೊಂಡಿಲ್ಲ, ಅವರ ತಲೆಮಾರಿನ ಯಾವುದೇ ವ್ಯಕ್ತಿ ನೆಹರೂ ಸರ್‌ನೇಮ್‌ ಅನ್ನು ಹೊಂದಲು ಏಕೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಅನ್ನೋದೆ ನನಗೆ ಅರ್ಥವಾಗಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಹೆಸರನ್ನು ಇಟ್ಟಿದೆ ಎನ್ನುವುದನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ನೆಹರು ಅಷ್ಟು ಗ್ರೇಟ್‌ ಎಂದಾದಲ್ಲಿ ಅವರು ಕುಟುಂಬದವರೇಕೆ ನೆಹರು ಸರ್‌ ನೇಮ್‌ ಇರಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಮೋದಿ ಅವರ ಈ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್​ ಸುರ್ಜೇವಾಲಾ, ಮೋದಿಯವರಿಗೆ ಭಾರತೀಯ ಸಂಸ್ಕೃತಿಯ ಕುರಿತು ಮೂಲಭೂತ ತಿಳುವಳಿಕೆ ಇಲ್ಲ, ಯಾರಾದರೂ ತಾಯಿಯ ಅಜ್ಜನ ಉಪನಾಮವನ್ನು ತಮ್ಮ ಹೆಸರಿನ ಮುಂದೆ ಬಳಸುತ್ತಾರೆಯೆ? ಎಂದು ತಿರುಗೇಟು ನೀಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಯಾರಾದರೂ ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆಯೇ? ನಿಮಗೆ ಸಾಮಾನ್ಯ ತಿಳುವಳಿಕೆ ಕೂಡ ಇಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.

ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ ಅವರು, ‘ಪ್ರಧಾನಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರಿಗೆ ಭಾರತದ ಸಂಸ್ಕೃತಿಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ ಎಂದು ಪ್ರಧಾನಿ ಹೇಳಿಕೆ ತೀವ್ರ ಅಸಮಧಾನ ವ್ಯಕ್ತಪಡಿಸಿ, ನೀವು ದೇಶದ ಯಾವುದೇ ವ್ಯಕ್ತಿಯನ್ನೂ ಕೇಳಿ, ಯಾರಾದರೂ ತಾಯಿಯ ಅಜ್ಜನ ಉಪನಾಮವನ್ನು ತಮ್ಮ ಹೆಸರಿನ ಮುಂದೆ ಬಳಸುತ್ತಾರೆಯೇ?. ಭಾರತೀಯ ಸಂಸ್ಕೃತಿಯಲ್ಲಿ ಯಾರೂ ತಾಯಿಯ ಅಜ್ಜನ ಉಪನಾಮವನ್ನು ಬಳಸುವುದಿಲ್ಲ, ಮೋದಿಯವರಿಗೆ ಇದನ್ನ ಅರ್ಥಮಾಡಿಕೊಳ್ಳುವಷ್ಟು ಸಾಮಾನ್ಯ ತಿಳುವಳಿಕೆ ಇಲ್ಲ ಎಂದು ಕುಟುಕಿದ್ದಾರೆ.

Leave A Reply

Your email address will not be published.