ಡಿವೋರ್ಸ್‌ ಬೇಕಾದರೆ ಕೋರ್ಟ್‌ ಗೆ ಹೋಗಬೇಕು, ಶರಿಯಾ ಕೌನ್ಸಿಲ್‌ ಗೆ ಅಲ್ಲ – ಹೈಕೋರ್ಟ್‌

ಮುಸ್ಲಿಂ ಮಹಿಳೆಯರಿಗೆ ದೊಡ್ಡ ತಲೆನೋವಾಗಿದ್ದ ತ್ರಿವಳಿ ತಲಾಖ್ ಅನ್ನು ಸರ್ವೋಚ್ಚ ನ್ಯಾಯಾಲಯ ಕಾನೂನು ವಿರೋಧಿ, ಸಂವಿಧಾನ ವಿರೋಧಿ, ಅಸಿಂಧು ಎಂದು ತೀರ್ಪು ನೀಡಿ ಮುಸ್ಲಿಂ ಮಹಿಳೆಯರಿಗೆ ನೆಮ್ಮದಿ ನೀಡಿತ್ತು. ಇದೀಗ, ಮುಸ್ಲಿಂ ಮಹಿಳೆಯರ ವಿಚ್ಛೇದನದ ಕುರಿತಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.

2017ರಲ್ಲಿ ತಮ್ಮ ಪತ್ನಿಯು ಶರಿಯಾ ಕೌನ್ಸಿಲ್‌ನಿಂದ ಪಡೆದಿರುವಂಥ ವಿಚ್ಛೇದನ ಪ್ರಮಾಣ ಪತ್ರವನ್ನು ರದ್ದುಪಡಿಸ ಬೇಕೆಂದು ಕೋರಿ ವ್ಯಕ್ತಿಯೊಬ್ಬರು ಮನವಿ ಮಾಡಿ ಅರ್ಜಿ ಸಲ್ಲಿಸಿದ ಹಿನ್ನೆಲೆ ಈ ಪ್ರಕರಣದ ವಿಚಾರಣೆಯ ಸಂದರ್ಭ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವ ನಿಟ್ಟಿನಲ್ಲಿ ಮುಸ್ಲಿಂ ಮಹಿಳೆಯರು ಕೇವಲ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕೆಂದು ಮದ್ರಾಸ್ ಹೈಕೋರ್ಟ್ ಸೂಚಿಸಿದ್ದು, ಇದರ ಹೊರತಾಗಿ ಶರಿಯಾ ಕೌನ್ಸಿಲ್‌ನಂಥ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವಂತಿಲ್ಲ ಎಂದು ತಿಳಿಸಿದೆ. ಇದಲ್ಲದೆ, ಖಾಸಗಿ ಸಂಸ್ಥೆಗಳು ನೀಡುವಂಥ ವಿಚ್ಛೇದನ (ಖುಲಾ) ಪ್ರಮಾಣ ಪತ್ರವು ಕಾನೂನಿನ ಪ್ರಕಾರ ಮಾನ್ಯತೆ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ, ತಮಿಳುನಾಡು ತೌಹೀದ್ ಜಮಾತ್ಮನ ಶರಿಯಾ ಕೌನ್ಸಿಲ್ ವಿತರಿಸಿದ್ದ ಖುಲಾ ಪ್ರಮಾಣಪತ್ರವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಈ ವಿಷಯದಲ್ಲಿ, ಅರ್ಜಿದಾರರು ವಿಶ್ವ ಮದನ್ ಲೋಚನ್ Vs ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು (2014) ನಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಅವಲಂಬಿತರಾಗಿದ್ದಾರೆ. ಈ ಪ್ರಕರಣದಲ್ಲಿ ಮೊಘಲ್ ಇಲ್ಲವೇ ಬ್ರಿಟಿಷರ ಆಳ್ವಿಕೆಯಲ್ಲಿ ‘ಫತ್ವಾ’ ಯಾವುದೇ ಸ್ಥಾನಮಾನವಿರಲಿ ಅದಕ್ಕೆ ಸಂವಿಧಾನಾತ್ಮಕ ಯೋಜನೆಯಡಿಯಲ್ಲಿ ಸ್ವತಂತ್ರ ಭಾರತದಲ್ಲಿ ಯಾವುದೇ ರೀತಿಯ ಸ್ಥಾನಮಾನವಿಲ್ಲ ಎಂಬುದನ್ನು ಕೋರ್ಟ್ ಸೂಚಿಸಿದೆ ಎನ್ನಲಾಗಿದೆ.

Leave A Reply

Your email address will not be published.