ಪ್ರೀತಿಗಾಗಿ ‘ಲಿಂಗ’ ಬದಲಿಸಿದ ಯುವತಿ | ನಂತರ ಆದದ್ದು ಮಾತ್ರ ವಿಪರ್ಯಾಸ!!!

ಪ್ರಪಂಚದಲ್ಲಿ ಪ್ರೀತಿ ಒಂದು ಅಮಾನುಷವಾದ ಮತ್ತು ಬಲವಾದ ಶಕ್ತಿ ಕೂಡ ಹೌದು. ಪ್ರೀತಿಗೆ ಕಣ್ಣಿಲ್ಲ ಅಂತಾ ಎಲ್ಲರೂ ಹೇಳ್ತಾರೆ. ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರು ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಅಂತಲೂ ಕೇಳಿದ್ದೇವೆ. ಕೆಲವರ ಪ್ರೀತಿ ಅಮರ ಇನ್ಯಾರದೋ ಪ್ರೀತಿ ಮೋಸದಾಟ. ಹೌದು ಉತ್ತರ ಪ್ರದೇಶದ ಝಾನ್ಸಿ ವ್ಯಾಪ್ತಿಯಲ್ಲಿ ನಡೆದ ಪ್ರೇಮಕಥೆಯೊಂದು ನೀವು ತಿಳಿದುಕೊಳ್ಳಲೇ ಬೇಕು.

2016 ರಲ್ಲಿ, ಸನಾ ಎಂಬ ಹುಡುಗಿ ಝಾನ್ಸಿ ಪ್ರದೇಶದ ಪ್ರೇಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಅದೇ ಮನೆಯ ಮಾಲೀಕರ ಮಗಳು ಸೋನಾಲ್ ಶ್ರೀವಾಸ್ತವ್ ಜೊತೆ ಸ್ನೇಹ ಬೆಳೆಸಿದ್ದಳು. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. 2017ರಲ್ಲಿ ಸೋನಾಲ್ ಮನೆಯಲ್ಲಿ ಇವರಿಬ್ಬರ ಪ್ರೇಮ ಪ್ರಕರಣ ಬೆಳಕಿಗೆ ಬಂದಿತ್ತು. ದೊಡ್ಡ ಜಗಳ ನಡೆದಿತ್ತು. ಕೂಡಲೇ ಸನಾಳನ್ನು ಮನೆ ಖಾಲಿ ಮಾಡಿ ಕಳುಹಿಸಲಾಗಿತ್ತು.

ಆ ಬಳಿಕ ಮನೆಯವರೊಂದಿಗೆ ಜಗಳವಾಡಿಕೊಂಡು ಸನಾ ಜತೆ ವಾಸವಾಗಲು ಸೋನಾಲ್ ಮನೆ ಬಿಟ್ಟಿದ್ದಳು. 2017ರಲ್ಲಿ ಇಬ್ಬರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ, ಎರಡು ಕುಟುಂಬದವರು ರಾಜಿ ಮಾಡಿಕೊಂಡಿದ್ದರು. ಬಳಿಕ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರಲು ಎರಡೂ ಕುಟುಂಬಗಳ ಅನುಮತಿ ಪಡೆದಿದ್ದರು. 2020 ರಲ್ಲಿ, ಸೋನಾಲ್ ಕೋರಿಕೆಯಂತೆ ಸನಾ ಲಿಂಗ ಪರಿವರ್ತನೆಗೆ ಒಳಗಾಗಿದ್ದರು. ಈ ಪ್ರಕ್ರಿಯೆಗೆ ಸನಾ 12 ಲಕ್ಷ ರೂ. ಖರ್ಚು ಮಾಡಿ ಸನಾ ಸೊಹೈಲ್‌ ಆಗಿ ಬದಲಾದಳು.

ಆದರೆ ಅವಳು ಅವನಾದ ನಂತರ ದೈಹಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿತ್ತು. ಸುಮಾರು ಒಂದು ವರ್ಷದ ನಂತರ ದೇಹವನ್ನು ಹೊಂದಿಸಲಾಯಿತು. ಆದರೆ ಅಷ್ಟರಲ್ಲಿ ಸೋನಾಲ್ ತನ್ನ ಮನಸ್ಸನ್ನು ಬದಲಾಯಿಸಿದ್ದಾರೆ.

ಹೌದು ಸನಾ ಅವನಾಗುವ ಸಮಯ ಅಂತರದಲ್ಲಿ ಸೋನಾಲ್ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು . ನಂತರ ಕಾಡಿ ಆಗ ಸನಾ ತನ್ನನ್ನು ಮದುವೆಯಾಗುವಂತೆ ಸೊಹೈಲ್‌ಳನ್ನು ಕೇಳಿಕೊಂಡಳು. ಆದ್ರೆ ಸೋನಾಲ್ ನಿರಾಕರಿಸಿದಳು.

ಇದೀಗ ಸೋನಾ ಸೋಹೈಲ್ ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸೋನಲ್‌ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸದ್ಯ ಸೋನಾಲ್ ಜಾಮೀನಿನ ಮೇಲೆ ಹೊರಗಿದ್ದು, ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ. ಪ್ರೀತಿಗಾಗಿ ಹುಡುಗಿಯಾಗಿದ್ದ ಸನಾ ಹುಡುಗನಾಗಿ ಬದಲಾದಲಾದರೂ ಸಹ ಪ್ರಯೋಜನಕ್ಕೆ ಬಾರದೆ ನೋವಿನ ಮೇಲೆ ಬರೆ ಎಳೆದಂತೆ ಆಗಿದೆ.

Leave A Reply

Your email address will not be published.