Optical Illusion: ಬುದ್ಧಿವಂತರಿಗೆ ಮಾತ್ರ| ಈ ಫೋಟೋದಲ್ಲಿ ಒಂದು ತಪ್ಪು ಇದೆ

ಈ ರೀತಿಯ ಹಲವು ಮೈಂಡ್ ಗೇಮ್ ಅನ್ನು ನೀವು ನೋಡಿರುತ್ತೀರಾ. ಅದನ್ನ ಬಗೆಹರಿಸಲು ಪ್ರಯತ್ನ ಕೂಡ ಮಾಡಿರುತ್ತೀರಿ. ಕೆಲವರು ಗೆದ್ದರೆ, ಇನ್ನೂ ಕೆಲವರು ಸೋತಿರುತ್ತೀರಿ. ಆದರೆ ಇದರ ಉತ್ತರ ನಿಮ್ಮ ಬುದ್ಧಿವಂತಿಕೆ ಮತ್ತು ತೀಕ್ಷ್ಣವಾದ ದೃಷ್ಠಿಯನ್ನು ತಿಳಿಸುತ್ತದೆ. ಇವೆರಡನ್ನು ಪರೀಕ್ಷಿಸಲು ಇಲ್ಲಿದೆ ಉತ್ತಮ ಆಟ.

ಇಲ್ಲಿ ನೀಡಿರುವ ಚಿತ್ರದಲ್ಲಿ 3 ವ್ಯಕ್ತಿಗಳು ಸಾಲಾಗಿ ಕೋಣೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಚಿತ್ರದಲ್ಲಿ ಮೂವರೂ ಆಫೀಸಿನಲ್ಲಿ ಇರುವಂತಿದೆ. ಅವರು ತಮ್ಮ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ನೋಡುತ್ತಿದ್ದಾರೆ. ಅದರಾಚೆ ಮೂರು ಗಾಜಿನ ಕಿಟಕಿಗಳಿವೆ. ಹಾಗೂ ಚಿತ್ರದಲ್ಲಿರುವ ಪ್ರತಿ ವ್ಯಕ್ತಿಗಳ ಮುಖಭಾವ ವಿಭಿನ್ನವಾಗಿದೆ. ಇಷ್ಟೆಲ್ಲಾ ನೋಡುವಾಗ ಕಾಣುವಂತದ್ದು, ಆದರೆ ಇಲ್ಲಿ ನೀಡಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಒಂದು ತಪ್ಪು ಇದೆ. ಅದನ್ನು ನೀವು ಕಂಡುಹಿಡಿಯಬೇಕು. ಅದು ಕೂಡ ಕೇವಲ 10 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ನಿಮ್ಮ ತೀಕ್ಷ್ಣವಾದ ಕಣ್ಣು ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಿ, ಇಲ್ಲಿರುವ ತಪ್ಪನ್ನು ಕಂಡುಹಿಡಿಯಿರಿ.

ಚಿತ್ರದಲ್ಲಿನ ತಪ್ಪು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ? ಹಾಗಾದ್ರೆ ಇಲ್ಲಿದೆ ನೋಡಿ ಉತ್ತರ. ಇದು ಕೇವಲ ಹುಡುಕಿ ಹುಡುಕಿ ಉತ್ತರ ತಿಳಿಯದೆ ಬೇಸತ್ತವರಿಗೆ. ಈ ಚಿತ್ರದಲ್ಲಿ ದೋಷವನ್ನು ಕಂಡುಹಿಡಿಯುವುದು ವಾಸ್ತವವಾಗಿ ತುಂಬಾ ಸುಲಭವಾಗಿದೆ. ಚಿತ್ರದಲ್ಲಿನ ಕಿಟಕಿಗಳನ್ನು ಒಮ್ಮೆ ನೋಡಿರುತ್ತೀರಿ, ಇದೀಗ ಮತ್ತೊಮ್ಮೆ ನೋಡಿ. ಒಂದೇ ಕೋಣೆಯ 3 ಕಿಟಕಿಗಳಲ್ಲಿ 3 ಸೂರ್ಯಗಳು ಇರುವುದು ಕಾಣುತ್ತದೆ. ಆದರೆ ನಿಜವಾದ ಸೂರ್ಯ ಒಬ್ಬನೇ. ಚಿತ್ರದಲ್ಲಿ ಮೂರು ಸೂರ್ಯ ಇದ್ದಾನೆ. ಇದುವೇ ತಪ್ಪು. ಒಬ್ಬ ಸೂರ್ಯ ಸಾಕಲ್ಲವೇ. ಇದುವೇ ಉತ್ತರ.

ಈ ರೀತಿಯ ಚಿತ್ರವನ್ನು ನೋಡಿ, ಅದನ್ನು ಪರಿಹರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಇದು ಗ್ರಹಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಯೋಚನಾ ಸಾಮರ್ಥ್ಯ ಹೆಚ್ಚುತ್ತದೆ. ಈ ರೀತಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರ ಗಮನ ಸೆಳೆದಿವೆ. ಇಂತಹ ಆಟಗಳನ್ನು ಪರಿಹರಿಸೋದ್ರಿಂದ ಹಲವು ಪ್ರಯೋಜನಗಳಿವೆ.

Leave A Reply

Your email address will not be published.