Tata Motors: ಟಾಟಾದಿಂದ ಹೊಸ ಎಲೆಕ್ಟ್ರಿಕ್ ಕಾರುಗಳ ಪರಿಚಯ | ವಿಶೇಷತೆಗಳೇನು?

ವಾಹನಗಳ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪೆಟ್ರೋಲ್, ಡೀಸೆಲ್ ಗಳ ಬೆಲೆ ಗಗನಕ್ಕೇರಿರುವುದರಿಂದ ಜನರು ಎಲೆಕ್ಟ್ರಿಕ್ ಕಾರಿನ ಕಡೆಗೆ ಮುಖ ಮಾಡಿದ್ದಾರೆ. ಇದೀಗ ಭಾರತದ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೊಸ ಮಾಡೆಲ್’ಗಳ ಮತ್ತಷ್ಟು ತಲೆಮಾರಿನ ಇವಿ ಕಾರುಗಳನ್ನು ಪರಿಚಯಿಸುವ ಸಿದ್ಧತೆಯಲ್ಲಿದೆ.

ಹೌದು, ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲಾಟ್ ಫಾರ್ಮ್ ಅಡಿಯಲ್ಲಿ ಇವಿ ಕಾರುಗಳನ್ನು ನಿರ್ಮಾಣ ಮಾಡುತ್ತಿರುವ ಟಾಟಾ ಕಂಪನಿ ಮುಂದಿನ ಕೆಲವೇ ದಿನಗಳಲ್ಲಿ ಬಾರ್ನ್ ಇವಿ ಫ್ಲ್ಯಾಟ್ ಫಾರ್ಮ್ ಆರಂಭಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದನೇ ತಲೆಮಾರಿನ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಂಪನಿಯು 2024ರಿಂದ 2ನೇ ತಲೆಮಾರು ಮತ್ತು 2026ರಿಂದ 3ನೇ ತಲೆಮಾರಿನ ಕಾರುಗಳ ಬಿಡುಗಡೆಗಾಗಿ ಬಾರ್ನ್ ಇವಿ ಫ್ಲ್ಯಾಟ್ ಫಾರ್ಮ್ ಸಿದ್ದಪಡಿಸಿದೆ. ಹೊಸ ಫ್ಲ್ಯಾಟ್ ಫಾರ್ಮ್ ಅಡಿ, ಪ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ನಿರ್ಮಾಣವಾಗುತ್ತಿರುವ, ಕರ್ವ್(Curvv) ಮತ್ತು ಅವಿನ್ಯಾ (Avinya) ಕಾರುಗಳು ಸುಧಾರಿತ ತಂತ್ರಜ್ಞಾನದ ಪ್ರೇರಣೆ ಹೊಂದಿರಲಿವೆ.

ಕಂಪನಿಯು ಹೊಸ ಕರ್ವ್ ಮತ್ತು ಅವಿನ್ಯಾ ಕಾರುಗಳನ್ನು 2024ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರುಗಳ ಉತ್ಪಾದನಾ ಆವೃತ್ತಿಯನ್ನು ಕಂಪನಿಯು ಇದೇ ತಿಂಗಳು 12ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದೆ. ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಕರ್ವ್ ಕಾರು ಮಾದರಿಯು ಕೂಪೆ ಎಸ್ ಯುವಿ ವಿನ್ಯಾಸವನ್ನು ಹೊಂದಿದ್ದು, ಇದು ಎಲೆಕ್ಟಿಕ್ ಆವೃತ್ತಿಯಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಮಾದರಿಯಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹಾಗೆಯೇ ಅವಿನ್ಯಾ ಕಾರು ಮಾದರಿಯು ಸಂಪೂರ್ಣವಾಗಿ ಇವಿ ಮಾದರಿಯೊಂದಿಗೆ ಮಾತ್ರ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಬ್ಯಾಟರಿ ಆಯ್ಕೆಯಲ್ಲಿ ಮತ್ತಷ್ಟು ಗಮನಸೆಳೆಯಲಿವೆ.

ಹೊಸ ಬಾರ್ನ್ ಇವಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇವಿ ಕಾರುಗಳ ಬಗ್ಗೆ ನೋಡುವುದಾದರೆ, ಐಸಿ ಎಂಜಿನ್ ಪರಿವರ್ತಿತ ಫ್ಲ್ಯಾಟ್‌ಫಾರ್ಮ್ ಅಡಿಯಲ್ಲಿನ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯದಕ್ಷತೆ ಪಡೆದುಕೊಂಡಿರಲಿವೆ. ಹಾಗೆಯೇ ಕಂಪನಿಯ ಮತ್ತೊಂದು ಸ್ಕೆಟ್‌ಬೋರ್ಡ್ ಫ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಗೊಳ್ಳಲಿರುವ ಇವಿ ಕಾರುಗಳ ಮೇಲೆ ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನದ ಪ್ರಭಾವ ಬೀರಲಿದ್ದು, ಅವಿನ್ಯಾ ಇವಿ ಕಾನ್ಸೆಪ್ಟ್ ಮಾದರಿಯು ಸಂಪೂರ್ಣವಾಗಿ ಡಿಜಿಟಲ್ ಡಿಸೈನ್ ಲಾಂಗ್ವೇಜ್ ಆಧರಿಸಿ ಅಭಿವೃದ್ಧಿಗೊಳಿಸುತ್ತಿದೆ.

ಅದೇ ರೀತಿ ಹೊಸ ಕರ್ವ್ ಕಾನ್ಸೆಪ್ಟ್ ಮಾದರಿಯನ್ನು ಟಾಟಾ ಕಂಪನಿಯು ತನ್ನ ಹೊಸ ಇವಿ ಫ್ಲ್ಯಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಿದ ಮೊದಲ ಇವಿ ಕಾರು ಮಾದರಿಯಾಗಿ ಬಿಡುಗಡೆ ಮಾಡಲಿದೆ. ಕರ್ವ್ ಕಾನ್ಸೆಪ್ಟ್ ಮಾದರಿಯು ಇವಿ ಮಾದರಿಯೊಂದಿಗೆ ಸಾಮಾನ್ಯ ಕಾರು ವಿಭಾಗದಲ್ಲೂ ಸದ್ದು ಮಾಡಲಿದ್ದು, ಇದು ಸಾಮಾನ್ಯ ಮಾದರಿಯೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಸೆಲ್ಲೊಸ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಇವಿ ಆವೃತ್ತಿಯು ಎಂಜಿ ಜೆಡ್ ಎಸ್ ಇವಿ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದ್ದು, ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.

ಹೊಸಕನ್ನಡ ವಾಟ್ಸಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ: https://chat.whatsapp.com/J4dNyzsaxZ54FlSgJ1ezLO

Leave A Reply

Your email address will not be published.