ಯಶ್ ಹುಟ್ಟುಹಬ್ಬದಂದು ಕನ್ನಡಿಗರಿಗೆ ಸಿಗಲಿದೆ ಗುಡ್ ನ್ಯೂಸ್! ಸ್ಯಾಂಡಲ್ ವುಡ್ ಕ್ಯೂಟ್ ಜೋಡಿಯಿಂದ ಅಭಿಮಾನಿಗಳಿಗೆ ಡಬಲ್ ಧಮಾಕ!

ಕೆಜಿಎಫ್ ಸಿನಿಮಾಗಳು ತೆರೆ ಕಂಡು ಸೂಪರ್ ಹಿಟ್ ಆದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು, ಯಾವ ಚಿತ್ರಗಳಲ್ಲಿ ನಟಿಸಲಿದ್ದಾರೆ ಎಂಬ ಹಲವು ಅಭಿಮಾನಿಗಳ ಕುತೂಹಲ ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಆದರೆ ಇದೀಗ ಆ ಸಸ್ಪೆನ್ಸ್ ಅಂತ್ಯವಾಗಲಿದ್ದು ಅಭಿಮಾನಿಗಳಿಗೆ ಡಬಲ್ ಧಮಾಕದಂತೆ ಸಿಹಿ ಸುದ್ಧಿ ಸಿಗಲಿದೆ.

 

ಹಲವು ತಿಂಗಳಿಂದ ಯಶ್ ಅವರ ಹೊಸ ಸಿನಿಮಾ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಈ ಕುರಿತು ಯಶ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಜೊತೆಗೆ ತಾವಾಗಿಯೇ ತಮ್ಮ ಮುಂದಿನ ಚಿತ್ರಗಳ ಕುರಿತು ಯಾವುದೇ ಹೊಸ ಮಾಹಿತಿ ಹಂಚಿಕೊಂಡಿರಲಿಲ್ಲ.

ಎಲ್ಲಾದರೂ ಮುಂದಿನ ಸಿನಿಮಾಗಳ ವಿಚಾರ ಬಂದಾಗೆಲ್ಲ ಅವರು ಜಾರಿಕೊಂಡಿದ್ದರು. ಇದರ ಜೊತೆಗೆ ಯಶ್ ಪತ್ನಿ ಹಾಗೂ ಕನ್ನಡ ಸ್ಟಾರ್ ನಟಿ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಕೂಡ ಮುನ್ನಲೆಗೆ ಬಂದಿತ್ತು.

ಚಿತ್ರ ಯಾವುದು? ಅದರ ನಿರ್ದೇಶಕರು ಯಾರು? ಬ್ಯಾನರ್ ಯಾವುದು? ಎನ್ನುವ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈ ಬಾರಿ ತಮ್ಮ ಹುಟ್ಟು ಹಬ್ಬದ ದಿನದಂದು ಯಶ್ ಅವರು ಅಭಿಮಾನಿಗಳನ್ನು ನಿರಾಸೆ ಮಾಡುವುದಿಲ್ಲವಂತೆ. ತನ್ನ ಹಾಗೂ ತನ್ನ ಪತ್ನಿಯ ಮುಂದಿನ ಸಿನೆಮಾ ಪಯಣದ ಬಗ್ಗೆ ಮಾತನಾಡುವುದು ಪಕ್ಕಾ ಆಗಿದೆಯಂತೆ.

ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಹುಟ್ಟು ಹಬ್ಬದ ದಿನದಂದು ಯಶ್ ಅವರ ಹೊಸ ಸಿನಿಮಾದ ಕೆಲ ಅಪ್ ಡೇಟ್ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಅವರು ಯಾವ ಬ್ಯಾನರ್ ನಿಂದ ಸಿನಿಮಾ ಮಾಡುತ್ತಾರೆ ಎನ್ನುವುದು ತಿಳಿದಿಲ್ಲ. ಆದರೂ ತಮ್ಮ ಮುಂದಿನ ಸಿನೆಮಾವನ್ನು ತಾವೇ ನಿರ್ಮಾಣ ಮಾಡಬಹುದು ಎಂಬ ಗಾಸಿಪ್ ಕೂಡ ಸಾಕಷ್ಟು ಕೇಳಿಬರುತ್ತಿವೆ.

ಒಟ್ಟಿನಲ್ಲಿ ಯಶ್ ಹುಟ್ಟುಹಬ್ಬದ ದಿನ ಮಾತ್ರ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಯಿಂದ ಶುಭ ಸುದ್ದಿಯೊಂದು ಸಿಗಲಿದೆ. ಆ ದಿನ ತಮ್ಮ ಮತ್ತು ತಮ್ಮ ಪತ್ನಿಯ ಮುಂದಿನ ಸಿನೆಮಾ ವಿಚಾರ ಕುರಿತಾಗಿ ಯಶ್ ಮಾತನಾಡಲಿದ್ದು ಯಶ್ ಹುಟ್ಟು ಹಬ್ಬ ವಿಶೇಷವಾಗಿ ಇರಲಿದೆಯಂತೆ. ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ನಟನಿಂದ ಸಿಗುವ ಸುದ್ದಿಗಳು ಡಬಲ್ ಧಮಾಕವಾಗಲಿವೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.