ನಿಮಗಿದು ಗೊತ್ತೇ ? ಡ್ರಿಂಕ್ಸ್ ಮಾಡಿದರೆ ಫುಲ್ ಬಾಡಿ ಶೇಕ್ ಆಗೋದು ಯಾಕೆಂದು? ಶಾಕಿಂಗ್ ಮಾಹಿತಿ ಇಲ್ಲಿದೆ!
ಎಣ್ಣೆನೂ…. ಸೋಡಾನು… ಎಂತ ಒಳ್ಳೆ ಫ್ರೆಂಡ್ಸು… ನಾನು… ನೀನು… ಇರೋ ಹಂಗೆ…. ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೆ.. ರೋಡ್ ಅನ್ನೇ ತಮ್ಮ ಮನೆ ಅನ್ನೋ ಹಾಗೇ ಸಿಕ್ಕಿದ್ದಲ್ಲಿ ಕುಡಿದು ತೂರಾಡುವ ಅದೆಷ್ಟೋ ಮಂದಿ ನಮ್ಮ ಕಣ್ಣ ಮುಂದೆ ಆಗಾಗ ನೋಡಲು ಸಿಗುತ್ತಾರೆ. ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ!! ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!.
ಆದರೆ, ಒಮ್ಮೆ ಪರಮಾತ್ಮ ಒಳ ಹೊಕ್ಕರೆ ಎಣ್ಣೆ ಹೊಟ್ಟೆಗೆ ಹಾಕಿಕೊಂಡ ಮಂದಿಗೆ ಇಹಲೋಕದ ಪರಿವೇ ಇಲ್ಲದೇ ಏನೇನೋ ಮಾತನಾಡುವ , ಗಲಾಟೆ ಮಾಡುವ ಜೊತೆಗೆ ಮದ್ಯ (Alcohol) ಸೇವಿಸಿದ ಬಳಿಕ ವ್ಯಕ್ತಿಯ ಒಟ್ಟಾರೆ ವರ್ತನೆಯಲ್ಲಿ ಬದಲಾವಣೆಯಾಗುವುದು ಗೊತ್ತಿರುವ ವಿಚಾರವೇ!!!
ಎಣ್ಣೆ ಪ್ರಿಯರಿಗೆ ಇದರ ಬಗ್ಗೆ ಹೆಚ್ಚು ತಿಳಿದಿರುತ್ತದೆ. ಮದ್ಯಪಾನ ಮಾಡಿದ ಸ್ವಲ್ಪ ಸಮಯದ ಬಳಿಕ ಕುಡಿಯುವವರ ಧ್ವನಿ (Voice) ಬದಲಾಗಲು ಆರಂಭವಾಗುತ್ತದೆ. ಎಣ್ಣೆಯ ಮಹಿಮೆ ಬಲ್ಲವರೇ ಬಲ್ಲ!!! ಹೀಗಾಗಿ, ಎಣ್ಣೆ ಒಳಗೆ ಹೋದ ಬಳಿಕ ವ್ಯಕ್ತಿ ಸ್ವಾಧೀನ ಕಳೆದುಕೊಳ್ಳುತ್ತಾನೆ. ಆದರೆ, ಹೀಗೆ ನಡೆದುಕೊಳ್ಳಲು ಕಾರಣವೇನು ಎಂಬುದನ್ನು ಚಿಂತಿಸಿದ್ದಿರಾ?? ಸ್ವಲ್ಪ ಸಮಯದ (Time) ಬಳಿಕ ಆಲ್ಕೋಹಾಲ್ ಏಕೆ ಪ್ರಭಾವ ಬೀರುತ್ತದೆ?? ಈ ಬದಲಾವಣೆಗಳನ್ನು ನಾವು ಗಮನಿಸಿರುತ್ತೇವೆ..
ಕೆಲ ವರದಿಯ ಪ್ರಕಾರ, ನಮ್ಮ ಯಕೃತ್ತು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್ ಅನ್ನು ಒಡೆಯುವುದಲ್ಲದೆ, ದೇಹದ ಮೇಲೆ ಅದರ ಪ್ರಭಾವ ಕಡಿಮೆ ಮಾಡುತ್ತದೆ. ಯಕೃತ್ತು ಇದಕ್ಕಾಗಿ ಶ್ರಮಿಸಬೇಕಾಗಿದೆ. ಆದರೂ, ಯಕೃತ್ತಿನಿಂದ ನಾಶವಾಗದ ಆಲ್ಕೋಹಾಲ್ ಅಂಶಗಳು ಮೆದುಳನ್ನು ತಲುಪಿದಾಗ, ಕೆಲವೇ ನಿಮಿಷಗಳಲ್ಲಿ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ.
ಈ ವೇಳೆ, ಮದ್ಯವು ವ್ಯಕ್ತಿಯ ಕೇಂದ್ರ ನರಮಂಡಲದ ಮೇಲೂ ಪರಿಣಾಮ ಬೀರಿ ನರಮಂಡಲದ ಸಂಪರ್ಕಗಳು ಮುರಿದುಹೋಗುತ್ತವೆ ಜೊತೆಗೆ ಜೀವಕೋಶಗಳು ನಿಧಾನವಾಗಿ ಕೆಲಸ ಮಾಡುತ್ತದೆ. ಮೆದುಳು ಕೂಡ ಈ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡಬೇಕಾಗುತ್ತದೆ. ಆಲ್ಕೋಹಾಲ್ ಮೆದುಳಿನ ಮಧ್ಯಭಾಗದ ಮೇಲೂ ಪರಿಣಾಮ ಬೀರುವುದರಿಂದ ಕುಡಿದ ವ್ಯಕ್ತಿಯು ತನ್ನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ.
ನೀವು ಒಂದು ಸಿಪ್ ಆಲ್ಕೋಹಾಲ್ ಕುಡಿದ ಕೂಡಲೇ, ಅದು ನಿಮ್ಮ ದೇಹವನ್ನು ಸೇರಲ್ಪಟ್ಟು, ತಕ್ಷಣ ಪರಿಣಾಮ ಬೀರಲು ಶುರುವಾಗುತ್ತದೆ. ಆಲ್ಕೋಹಾಲ್ ಹೊಟ್ಟೆಗೆ ಪ್ರವೇಶಿಸಿದಾಗ, ಅದು ಮೊದಲು ಗ್ಯಾಸ್ಟ್ರಿಕ್ ಆಮ್ಲವನ್ನು ಉತ್ಪಾದನೆ ಮಾಡುತ್ತವೆ. ಇದು ಹೊಟ್ಟೆಯ ಲೋಳೆಯ ರೇಖೆಯಲ್ಲಿ ಉರಿಯೂತವನ್ನು ಸೃಷ್ಟಿಸಿ ಬಳಿಕ ನಮ್ಮ ಕರುಳು ಆಲ್ಕೋಹಾಲ್ ಅನ್ನು ಹೀರಿಕೊಳ್ಳಲು ಶುರುವಾಗಿ ಯಕೃತ್ತನ್ನು ಸೇರುವುದಲ್ಲದೆ ಯಕೃತ್ತು ಕರುಳಿಗೆ ಬಹಳ ಹತ್ತಿರದಲ್ಲಿರುವುದರಿಂದ ಮದ್ಯವು ಹೊಟ್ಟೆಯಿಂದ ನೇರವಾಗಿ ಯಕೃತ್ತನ್ನು ತಲುಪುವ ಸಂಭವ ಹೆಚ್ಚಿದೆ.
ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ಸುಮಾರು ಆರು ಗಂಟೆಗಳವರೆಗೆ ರಕ್ತ ಪರೀಕ್ಷೆಯಿಂದ ಪರಿಶೀಲಿಸಬಹುದಾಗಿದೆ. ಆ ಬಳಿಕ ರಕ್ತದಲ್ಲಿ ಆಲ್ಕೋಹಾಲ್ ಅನ್ನು ಕಂಡುಹಿಡಿಯುವುದು ತುಸು ಕಷ್ಟ ಎನ್ನಬಹುದು. ಇದರ ಜೊತೆಗೆ ಉಸಿರಾಟದ ಪರೀಕ್ಷೆಯ ಮೂಲಕ 12 ರಿಂದ 24 ಗಂಟೆಗಳ ಕಾಲ ದೇಹದಲ್ಲಿ ಆಲ್ಕೋಹಾಲ್ ಅನ್ನು ಕಂಡುಹಿಡಿಯಬಹುದಾಗಿದ್ದು, ಹೆಚ್ಚುವರಿಯಾಗಿ, ಆಲ್ಕೊಹಾಲ್ ಸೇವಿಸಿದ ನಂತರ 72 ಗಂಟೆಗಳವರೆಗೆ ಮಾನವ ಮೂತ್ರದಲ್ಲಿ ಆಲ್ಕೋಹಾಲ್ ಅನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಲಾಲಾರಸ ಪರೀಕ್ಷೆಯು 12 ರಿಂದ 14 ಗಂಟೆಗಳ ಕಾಲ ದೇಹದಲ್ಲಿ ಆಲ್ಕೋಹಾಲ್ ಕುರುಹುಗಳನ್ನು ಪತ್ತೆ ಮಾಡಲು ನೆರವಾಗುತ್ತದೆ. ಹೀಗಾಗಿ, ವಿವಿಧ ಪರೀಕ್ಷಾ ವಿಧಾನಗಳು ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವನ್ನು ಸೂಚಿಸಲು ಬಳಸಲಾಗುತ್ತದೆ.
ವಿವಿಧ ವರದಿಗಳ ಅನುಸಾರ ಮದ್ಯ ಸೇವಿಸಿದ ನಂತರ 72 ಗಂಟೆಗಳವರೆಗೆ ನಮ್ಮ ದೇಹದಲ್ಲಿ ಆಲ್ಕೋಹಾಲ್ ಇರುತ್ತದೆ ಎನ್ನಲಾಗುತ್ತದೆ. ನಿಮ್ಮ ದೇಹದಲ್ಲಿ ಆಲ್ಕೋಹಾಲ್ ಎಷ್ಟು ಕಾಲ ಉಳಿಯುತ್ತದೆ ಎಂಬ ವಿಚಾರ ಆಲ್ಕೋಹಾಲ್ನಲ್ಲಿರುವ ಆಲ್ಕೋಹಾಲ್ ಪ್ರಮಾಣ, ಆಲ್ಕೋಹಾಲ್ನ ಗುಣಮಟ್ಟ, ಆಲ್ಕೋಹಾಲ್ ಸೇವಿಸುವ ವಿಧಾನಗಳ ಮೇಲೆ ನಿರ್ಣಯವಗುತ್ತದೆ. ಇದಲ್ಲದೆ, ಆಲ್ಕೋಹಾಲ್ ಪರೀಕ್ಷೆಯ ವಿಧಾನವನ್ನು ಆಧರಿಸಿ ದೇಹದಲ್ಲಿನ ಆಲ್ಕೋಹಾಲ್ ಪ್ರಮಾಣವು ಭಿನ್ನತೆ ಕಾಯ್ದುಕೊಳ್ಳುತ್ತದೆ.