ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್ ಬಂತು ನೋಡಿ | ಇದರ ಡಿಸೈನ್‌ ಹಾಗೂ ಫೀಚರ್‌ ತಿಳಿದ್ರೆ ಬೇರೆ ಎಲ್ಲಾ ಮರೆತು ಬಿಡ್ತೀರ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಹೌದು, ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್ ಅನ್ನು ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅಗ್ರೇಸಿವ್ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಬರುತ್ತಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು BMW Motorrad ಇಂಡಿಯಾ ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಆದರೆ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಘೋಷಿಸಿಲ್ಲ. ಈ ಮೋಟಾರ್ ಸೈಕಲ್ ಬಿಡುಗಡೆ ಸಂದರ್ಭದಲ್ಲೇ ಬಿಎಂಡಬ್ಲ್ಯೂ CE 04 ಎಲೆಕ್ನಿಕ್ ಸ್ಕೂಟರ್ ಅನ್ನು ಕೂಡ ಪ್ರದರ್ಶಿಸಿದೆ. ಬಿಎಂಡಬ್ಲ್ಯು ಮೊಟೊರಾಡ್ ಇಂಡಿಯಾದ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಸ್ಕೂಟರ್ ಇದಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಅಂತನೇ ಹೇಳ್ಬೋದು ಯಾಕಂದ್ರೆ ಮೂಲಗಳ ಪ್ರಕಾರ ಈ ಸ್ಕೂಟರ್‌ನ ಆರಂಭಿಕ ಬೆಲೆ ಅಂದಾಜು 20.25 ಲಕ್ಷ ರೂಪಾಯಿ ಇರಲಿದೆ. BMW ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ (BMW CE-04) 8.9kwh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಈ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ 129 ಕಿಲೋಮೀಟರ್‌ಗೆ ಸೀಮಿತಗೊಳಿಸಿದೆ. ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು 3KW ಚಾರ್ಜರ್ ಮೂಲಕ 4 ಗಂಟೆ 20 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ CE-04 ವಿಭಿನ್ನವಾಗಿದೆ. ಇದರ ವಿನ್ಯಾಸವು ಸಾಕಷ್ಟು ವೈಶಿಷ್ಟ್ಯದಿಂದ ಕೂಡಿದೆ. ಸ್ಕೂಟರ್ ಮುಂಭಾಗ ವಿಶಿಷ್ಟವಾಗಿದ್ದೂ ದೊಡ್ಡ ಎಲ್‌ಇಡಿ ಹೆಡ್ ಲ್ಯಾಂಪ್ ಅಳವಡಿಸಲಾಗಿದೆ. ಸ್ಕೂಟರ್‌ಗೆ ಸಿಂಗಲ್ ಪೀಸ್ ಸೀಟ್ ಇರುವುದರಿಂದ ಸಾಕಷ್ಟು ಉದ್ದವಾಗಿದೆ. ಸ್ಕೂಟರ್‌ನಲ್ಲಿ ನೀವು ಆರಾಮಾಗಿ ಕುಳಿತು ಪ್ರಯಾಣಿಸುವಂತೆ ಡಿಸೈನ್ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಇನ್ನೊಂದು ವಿಶೇಷತೆಯೆಂದರೆ 10.25 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದೂ, ಇದು ಬ್ಲೂಟೂತ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳಂತಹ ಫೀಚರ್‌ಗಳನ್ನೂ ಹೊಂದಿದೆ.

Leave A Reply

Your email address will not be published.