ಅಕ್ರಮ ಸಕ್ರಮ : ರೈತರೇ ನಿಮಗಾಗಿ ಇದೆ ಈ ಮುಖ್ಯವಾದ ಮಾಹಿತಿ | ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಹೌದು!! .. ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಕುರಿತಾಗಿ ಆದೇಶ ನೀಡಿದ್ದಾರೆ.

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ(4)ಗೆ ತಿದ್ದುಪಡಿ ಮಾಡಿದ ತರುವಾಯ ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡಿಕೊಂಡಿರುವ ರೈತರು ಮತ್ತು ಸಣ್ಣ ರೈತರ ಹಿತದಹಿತದೃಷ್ಟಿಯಿಂದ ಈ ರೀತಿಯ ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಹಾಗೂ ಸಕ್ರಮೀಕರಣಕ್ಕಾಗಿ ಬಹಳಷ್ಟು ಅನಧಿಕೃತ ಸಾಗುವಳಿದಾರರು ತಿಳುವಳಿಕೆಯ ಕೊರತೆಯಿಂದ ಅರ್ಜಿ ಸಲ್ಲಿಸದೆ ಬಾಕಿ ಉಳಿದವರಿಗೆ ಮತ್ತೊಂದು ಅವಕಾಶವನ್ನು ನೀಡಲು ಮುಂದಾಗಿದ್ದಾರೆ.

ರೈತರ ಹಾಗೂ ಸಣ್ಣ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು 2023 ರ ಮೇ, 30 ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಮಡಿಕೇರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.

Leave A Reply

Your email address will not be published.