ದಾಳಿಂಬೆ ಸಿಪ್ಪೆಯ ಆರೋಗ್ಯಕರ ಮಾಹಿತಿ ಇಲ್ಲಿದೆ!

ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಹಾಗಾಗಿ ಅವುಗಳ ಸೇವನೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ದಾಳಿಂಬೆ ಹಣ್ಣು ಕೂಡಾ ಒಂದು. ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಈ ಹಣ್ಣುಗಳು ಸ್ವಲ್ಪ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯದ ವಿಷ್ಯಕ್ಕೆ ಬಂದ್ರೆ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ವಿಟಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಈ ಹಣ್ಣಿನಿಂದ ಸಿಗುತ್ತಿದೆ. ಇದರಿಂದ ಹಲವಾರು ರೀತಿಯ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದಾಳಿಂಬೆ ಹಣ್ಣಿನ ಬೀಜಗಳನ್ನು ತಿಂದ ಬಳಿಕ ಸಿಪ್ಪೆಯ ಬಗ್ಗೆ ಮರೆತೇ ಬಿಡುತ್ತೇವೆ!

ಹೌದು, ಸಿಪ್ಪೆಯಿಂದ ಏನು ಪ್ರಯೋಜನವಿಲ್ಲವೆಂದು ಬಿಸಾಡಿ ಬಿಡುತ್ತೇವೆ. ಇಲ್ಲಿಯೇ ನೋಡಿ, ನಾವು ಮಾಡುತ್ತಿರುವುದು ದೊಡ್ಡ ತಪ್ಪು! ಹಾಗಾದರೆ ಇನ್ನು ಮುಂದೆ ಈ ಹಣ್ಣಿನ ಸಿಪ್ಪೆಯನ್ನು ಬಿಸಾಡಲು ಹೋಗಬೇಡಿ, ಇದರಿಂದ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಚರ್ಮದ ಸಮಸ್ಯೆ:- ದಾಳಿಂಬೆ ಸಿಪ್ಪೆಯ ಪುಡಿ ಚರ್ಮಕ್ಕೆ ಅದ್ಭುತವಾಗಿದೆ. ನಿಂಬೆ ರಸವನ್ನು ಈ ಪುಡಿಗೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಬಿಡಿ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಇಲ್ಲವಾದರೆ ಸ್ವಲ್ಪ ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ ಅದಕ್ಕೆ ಸ್ವಲ್ಪ ಅರಿಶಿನ ಹಾಗೂ ಹಾಲು ಹಾಕಿ ಕಲಸಿ ಪೇಸ್ಟ್ ಮಾಡಿಕೊಳ್ಳಿ. ಈ ಪುಡಿಯು ಮೊಡವೆಗಳನ್ನು ತೊಡೆದುಹಾಕಲು, ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಕಾಲಜನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಈ ದಾಳಿಂಬೆ ಸಿಪ್ಪೆಯನ್ನು ಬಳಸಿ ಮಾಸ್ಕ್ ತಯಾರಿಸುವುದರಿಂದ ಹಾಗೂ ನೀರಿಗೆ ಹಾಕಿ ಕುದಿಸಿ ಕುಡಿಯುವುದು ಮೊಡವೆ ಹೋಗಲಾಡಿಸಲು ಸಹಾಯ ಮಾಡುತ್ತದೆ.

ಋತುಚಕ್ರ:- ಮಹಿಳೆಯರನ್ನು ಕಾಡುವ ಪಿರಿಯಡ್ಸ್​ ಹೊಟ್ಟೆ ನೋವಿಗೆ ಈ ದಾಳಿಂಬೆ ಸಿಪ್ಪೆ ಮುಕ್ತಿ ನೀಡುತ್ತದೆ. ಸ್ವಲ್ಪ ದಾಳಿಂಬೆ ಸಿಪ್ಪೆಯನ್ನು ನೀರಿಗೆ ಹಾಕಿ ಕುದಿಸಿ ದಿನಕ್ಕೆ 2 ಬಾರಿ ಕುಡಿಯಿರಿ. ನೋವು ನಿವಾರಣೆಯಾಗುತ್ತದೆ.

ಗಂಟಲು ನೋವು:- ಸುಮಾರು ಎರಡು ಟೇಬಲ್ ಆಗುವಷ್ಟು ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಸೋಸಿಕೊಂಡು, ಪಕ್ಕದಲ್ಲಿ ಇಟ್ಟುಬಿಡಿ. ಒಮ್ಮೆ ಈ ಪಾನೀಯ ತಣ್ಣಗಾದ ಬಳಿಕ, ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ, ಗಂಟಲು ನೋವು ಮತ್ತು ಗಂಟಲಿನ ಅಸ್ವಸ್ಥತೆ ಮಾಯವಾಗುತ್ತದೆ.
ಇನ್ನೊಂದು ವಿಧಾನ ಯಾವುದು ಎಂದರೆ ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಕುದಿಸಿ ಅದಕ್ಕೆ ಶುಂಠಿಯ ರಸವನ್ನು ಹಾಕಿ ಕುಡಿಯಿರಿ. ಇದು ನಿಮ್ಮ ಗಂಟಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶೀತ,ಕೆಮ್ಮು:- ಚಳಿಗಾಲದಲ್ಲಿ ಶೀತ ಹಾಗೂ ಕೆಮ್ಮು ಸಾಮಾನ್ಯ. ಅದಕ್ಕೆ ಹಲವಾರು ಮನೆಮದ್ದುಗಳನ್ನು ಬಳಸುತ್ತೇವೆ. ಹಾಗೆಯೇ ದಾಳಿಂಬೆ ಸಿಪ್ಪೆ ಸಹ ನಿಮಗೆ ಪ್ರಯೋಜನ ನೀಡುತ್ತದೆ. ದಾಳಿಂಬೆ ಸಿಪ್ಪೆಯ ಕಷಾಯ ಮಾಡಿಕೊಂಡು ಕುಡಿಯಿರಿ
ಮೂಳೆಗಳ ಆರೋಗ್ಯ:- ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಈ ದಾಳಿಂಬೆ ಸಿಪ್ಪೆ ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯನ್ನು ಕೇವಲ ನೀರಿನ ಜೊತೆ ಕುಡಿಯುವ ಬದಲು ಅದಕ್ಕೆ ಸ್ವಲ್ಪ ಜೀರಿಗೆ ಹಾಗೂ ಶುಂಠಿ ಹಾಕಿ ಕುಡಿಯಿರಿ. ಇನ್ನೊಂದು ವಿಧಾನವೆಂದರೆ ಸುಮಾರು ಎರಡು ಟೇಬಲ್ ಚಮಚ ಆಗುವಷ್ಟು ದಾಳಿಂಬೆ ಸಿಪ್ಪೆಯ ಪೌಡರ್‌ನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಹಾಕಿ, ಆಮೇಲೆ ಇದಕ್ಕೆ ಒಂದು ಟೀ ಚಮಚ ನಿಂಬೆ ರಸ ಹಾಗೂ ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಸಾಕಷ್ಟು ಅನುಕೂಲವಿದೆ.

ಜೀರ್ಣಕ್ರಿಯೆ:- ಜೀರ್ಣಕ್ರಿಯೆ ಸಮಸ್ಯೆಗೆ ಸಹ ಈ ದಾಳಿಂಬೆ ಸಿಪ್ಪೆ ಪ್ರಯೋಜನ ನೀಡುತ್ತದೆ. ಇದರ ಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ದಿನಕ್ಕೆ 3 ಬಾರಿ ಸೇವಿಸಿ ಸಾಕು. ಇದರಿಂದ ಅಜೀರ್ಣ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅತಿಸಾರ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಗೆ ಇದು ಉತ್ತಮ ಮನೆಮದ್ದಾಗಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ದಾಳಿಂಬೆ ಸಿಪ್ಪೆಯು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಮತ್ತು ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಕಾರಿಯಾಗಿದೆ.

ಬಾಯಿಯ ಆರೋಗ್ಯ:- ದಾಳಿಂಬೆ ಸಿಪ್ಪೆ ನಿಮ್ಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಸ್ವಲ್ಪ ದಾಳಿಂಬೆ ಪುಡಿಯನ್ನು ಜೇನುತುಪ್ಪದ ಜೊತೆ ದಿನಕ್ಕೆ ಒಮ್ಮೆ ಸೇವಿಸಿ.

Leave A Reply

Your email address will not be published.