ಇನ್ಮುಂದೆ ದೊರೆಯುವುದಿಲ್ಲ ಈ ಸಿಮೆಂಟ್ | ಸಾಲ ತಗ್ಗಿಸಲು ವ್ಯವಹಾರದಿಂದಲೆ ಹಿಂದೆ ಸರಿದ ಕಂಪನಿ!

ಇಂದಿನ ಕಾಲದಲ್ಲಿ ಮುಖ್ಯವಾಗಿ ಇರೋ ವಸ್ತುಗಳಲ್ಲಿ ಸಿಮೆಂಟ್ ಕೂಡ ಒಂದು. ಯಾವುದೇ ಒಂದು ಕಟ್ಟಡ ಕಟ್ಟ ಬೇಕಾದರೂ ಸಿಮೆಂಟ್ ಬಹುಮುಖ್ಯ. ಇಂತಹ ಅವಶ್ಯ ಸಿಮೆಂಟ್ ಹಲವು ಕಂಪನಿಗಳಲ್ಲಿ ತಯಾರಾಗುತ್ತದೆ.

ಇಂತಹ ಸಿಮೆಂಟ್ ತಯಾರಕ ಕಂಪನಿಗಳಲ್ಲಿ ಎಸಿಸಿ, ಅಂಬುಜಾ, ಜೇಪೀ ಸಿಮೆಂಟ್, ಬುಲಂದ್, ಮಾಸ್ಟರ್ ಬಿಲ್ಡರ್, ಬುನಿಯಾದ್ ಸಿಮೆಂಟ್ ಸೇರಿದೆ. ಹೀಗೆ ಅನೇಕ ಹೆಸರುಗಳು ಫೇಮಸ್‌ ಆಗಿವೆ. ಆದರೆ ಈಗ JAL ಮತ್ತು ಈ ಗ್ರೂಪ್‌ನ ಇತರ ಕಂಪನಿಗಳು ತಮ್ಮ ಸಿಮೆಂಟ್ ವ್ಯವಹಾರದ ಉಳಿದ ಭಾಗವನ್ನು ಸಹ ಮಾರಾಟ ಮಾಡಿವೆ.

ಹೌದು. JAL ತನ್ನ ಉಳಿದ ಸಿಮೆಂಟ್ ವ್ಯವಹಾರವನ್ನು ದಾಲ್ಮಿಯಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಘೋಷಿಸಿದೆ. ಎರಡೂ ಕಂಪನಿಗಳ ಮಧ್ಯೆ 5,666 ಕೋಟಿ ರೂಪಾಯಿಗೆ ಒಪ್ಪಂದವಾಗಿದ್ದು, ಈ ಒಪ್ಪಂದದ ಅಡಿಯಲ್ಲಿ ದಾಲ್ಮಿಯಾ ಭಾರತ್ ಲಿಮಿಟೆಡ್, ಜೇಪೀ ಗ್ರೂಪ್‌ನ ಪ್ರಮುಖ ಕಂಪನಿ JAL ಮತ್ತು ಅದರ ಸಂಯೋಜಿತ ಕಂಪನಿಯಿಂದ ವಾರ್ಷಿಕ 94 ಲಕ್ಷ ಟನ್ ಸಿಮೆಂಟ್ ಸಾಮರ್ಥ್ಯದೊಂದಿಗೆ ವಿವಿಧ ರಾಜ್ಯಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ.

ಇದರೊಂದಿಗೆ ದಾಲ್ಮಿಯಾ ಭಾರತ್ ಲಿಮಿಟೆಡ್‌ನ ಸಿಮೆಂಟ್ ಉತ್ಪಾದನಾ ಮಿತಿಯು ವಾರ್ಷಿಕ 35.9 ಮಿಲಿಯನ್ ಟನ್‌ಗಳಿಂದ 45.3 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಲಿದೆ. 2026-27ರ ಆರ್ಥಿಕ ವರ್ಷದಲ್ಲಿ 75 ಮಿಲಿಯನ್ ಟನ್ ಮತ್ತು 2030-31ರ ವೇಳೆಗೆ 11 ರಿಂದ 13 ಮಿಲಿಯನ್ ಟನ್ ಸಾಮರ್ಥ್ಯದ ಸಿಮೆಂಟ್ ಕಂಪನಿಯಾಗಿ ಬದಲಾಗುವ ಗುರಿಯನ್ನು ಸಂಸ್ಥೆ ಹೊಂದಿದೆ. ಸಾಲ ತಗ್ಗಿಸಲು ಜೇಪೀ ಗ್ರೂಪ್ ಈ ನಿರ್ಧಾರ ತೆಗೆದುಕೊಂಡಿದ್ದು, ಸಿಮೆಂಟ್ ವ್ಯವಹಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯಲಿದೆ.

Leave A Reply

Your email address will not be published.