ಡೇಂಜರಸ್ ಹಾವು | ಒಮ್ಮೆ ಕಚ್ಚಿದರೆ 100 ಮಂದಿ ಅಲ್ಲೇ ಸಾವು | ಈ ಹಾವಿನ ಬಗ್ಗೆ ನೀವು ಖಂಡಿತ ತಿಳಿದುಕೊಳ್ಳಲೇಬೇಕು!!!
ಹಾವುಗಳು ಅಂದರೆ ಹೆಚ್ಚಿನವರಿಗೆ ಏನೋ ಭಯ. ಪ್ರಪಂಚದಲ್ಲಿ ಸಾವಿರಾರು ಬಗೆಗಳ ಹಾವುಗಳಿದ್ದು ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಇನ್ನು ಹಾವುಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ. ಪ್ರದೇಶದಿಂದ ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಹಾವುಗಳ ಬಗ್ಗೆ ವಿಶ್ಲೇಷಿಸುವುದಾದರೆ ತಿಳಿದುಕೊಳ್ಳುವ ವಿಚಾರ ಬಹಳ ಇದೆ. ಹೌದು ಇಲ್ಲೊಂದು ವಿಷಕಾರಿ ಹಾವು ಕಚ್ಚಿದರೆ ಒಂದೇ ಕಡಿತದಲ್ಲಿ 100 ಮಂದಿಯನ್ನು ಕೊಲ್ಲುವ ಶಕ್ತಿ ಇದೆಯಂತೆ! ಹಾಗಿದ್ದರೆ ಈ ಹಾವು ಎಲ್ಲಿದೆ ಎಂದು ತಿಳಿಯೋಣ.
ಆಸ್ಟ್ರೇಲಿಯಾದಲ್ಲಿ ಕಂಡು ಬರುವ ‘ಇನ್‌ಲ್ಯಾಂಡ್ ತೈಪಾನ್’ ಎಂಬ ಹಾವು ಜಗತ್ತಿನ ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಹಾವು ಎಂದು ಗುರುತಿಸಲಾಗಿದೆ. ಈ ಹಾವು ಇಷ್ಟೊಂದು ಅಪಾಯ ಏಕೆಂದರೆ, ಒಂದು ಬಾರಿ ಕಚ್ಚಿದರೆ, 110 ಮಿಲಿಗ್ರಾಂ ವಿಷ ಹೊರ ಬರುತ್ತದೆ ಎಂದು ತಿಳಿದು ಬಂದಿದೆ.
ಜಗತ್ತಿನಲ್ಲಿ 600 ವಿಷಕಾರಿ ಹಾವುಗಳ ಜಾತಿಗಳಿದ್ದರೆ, ಅವುಗಳಲ್ಲಿ ಕೇವಲ 200 ಹಾವುಗಳು ಮಾತ್ರ ಮನುಷ್ಯರನ್ನು ಕೊಲ್ಲುತ್ತವೆ ಅಥವಾ ಗಂಭೀರವಾಗಿ ಗಾಯಗೊಳಿಸುತ್ತವೆ.
ಬ್ರಿಸ್ಟೋಲ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಇನ್ ಲ್ಯಾಂಡ್ ತೈಪಾನ್ ಹಾವು ಒಮ್ಮೆ ಕಡಿದರೆ, ಬರೋಬ್ಬರಿ 100 ಮಂದಿ ಅಥವಾ 2.5 ಮಿಲಿಯನ್ ಇಲಿಗಳು ಸಾಯುವಷ್ಟು ಶಕ್ತಿ ಅದರ ವಿಷದಲ್ಲಿದೆ ಎಂದು ತಿಳಿಸಲಾಗಿದೆ.
ಸಂಶೋಧಕರ ಪ್ರಕಾರ ಈ ಹಾವು ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಕಂಡು ಬರುವುದಿಲ್ಲ. ಕೇವಲ ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರ ಇವು ವಾಸಿಸುತ್ತವೆ. ದಟ್ಟ ಕಾಡಿನ ನಡುವೆ ಇವು ಸಂಚರಿಸುತ್ತಿರುತ್ತವೆ. ಆದರೆ, ಇವು ಹಗಲು ವೇಳೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
‘ಇನ್‌ಲ್ಯಾಂಡ್ ತೈಪಾನ್’ ಹಾವು ಸುಮಾರು 1.8 ಮೀಟರ್ ಉದ್ದ ಬೆಳೆಯುತ್ತದೆ. ಹಾವಿನ ವಿಷದ ಕೊಂಡಿಗಳು 3.5 ರಿಂದ 6.2 ಮಿಲಿ ಮೀಟರ್ ಉದ್ದ ಇರಲಿವೆ. ಕಾಲಕ್ಕೆ ತಕ್ಕಂತೆ ಅಥವಾ ಆಯಾ ಋತುಗಳಲ್ಲಿ ಇನ್‌ಲ್ಯಾಂಡ್ ತೈಪಾನ್ ಹಾವು ತನ್ನ ಚರ್ಮದ ಬಣ್ಣವನ್ನು ಬದಲಾಯಿಸುತ್ತದೆ.
ಈ ಹಾವು ಚಳಿಗಾದಲ್ಲಿ ಕಡು ಕಂದು ಬಣ್ಣದಲ್ಲಿದ್ದರೆ, ಬೇಸಿಗೆಯಲ್ಲಿ ತಿಳಿ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಾವು ಕಪ್ಪೆಗಳು ಮತ್ತು ಕೋಳಿಗಳು ಆಹಾರವಾಗಿ ತಿನ್ನುತ್ತದೆ. ಅದಲ್ಲದೆ ಬೆಳಗಿನ ಜಾವದಲ್ಲಿ ಈ ಹಾವು ತುಂಬಾ ಚಟುವಟಿಕೆಯಿಂದ ಕೂಡಿರುತ್ತದೆಯಂತೆ. ಈ ಹಾವು ಆಳವಾದ ಮಣ್ಣಿನ ಬಿರುಕುಗಳು ಮತ್ತು ಪ್ರಾಣಿಗಳ ಬಿಲಗಳಲ್ಲಿ ಇರುತ್ತದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.
ಅಬ್ಬಾ ಈ ಹಾವಿನ ಬಗ್ಗೆ ಹೇಳಿದಾಗ ಮೈ ಜುಮ್ ಎನ್ನುವುದು ಖಂಡಿತ. ಏನೇ ಆಗಲಿ ಹಾವು ಎಂದರೆ ಮನುಷ್ಯರಿಗೆ ಭಯ ಹುಟ್ಟಿಸದೆ ಇರಲಾರದು. ಆದರೆ ಈ ಹಾವು ಕಚ್ಚಿದರೆ ಒಂದೇ ಕಡಿತಕ್ಕೆ 100ಜನರನ್ನು ಸಾಯಿಸುತ್ತದೆ ಎಂದಾಗ ಆಶ್ಚರ್ಯ ಆಗುತ್ತೆ.