ಎತ್ತು ರಸ್ತೆಯಲ್ಲಿ ಮೂತ್ರ ಮಾಡಿದ್ದಕ್ಕೆ ಬಿತ್ತು ಭಾರೀ ದಂಡ| ಕೋರ್ಟ್‌ ನಿರ್ಧಾರಕ್ಕೆ ರೈತ ಕಂಗಾಲು

ಸರ್ಕಾರದ ನಿಯಮಗಳಿಗೆ ನಾವು ಬದ್ಧರಾಗಿರಬೇಕು. ನಿಯಮ ಪಾಲಿಸಲು ತಪ್ಪಿದಲ್ಲಿ ದಂಡ ಖಚಿತ. ಸಾರ್ವಜನಿಕರು ಎಷ್ಟೇ ಜಾಗೃತಿ ವಹಿಸಿದರು ಕೆಲವೊಂದು ಸಾರಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸರ್ಕಾರದ ದಂಡಗಳಿಗೆ ನಾವು ಸಿಕ್ಕಿಕೊಳ್ಳುತ್ತೇವೆ.

ಹೌದು ತೆಲಂಗಾಣದ ಭದ್ರಾದಿ ಕೊತ್ತಗುಡೆಂ ಜಿಲ್ಲೆಯ ಎಸ್‌ಸಿಸಿಎಲ್ ಕಲ್ಲಿದ್ದಲು ಕಂಪೆನಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದೆ ಎಂದು, ಅದರ ಮಾಲೀಕನಿಗೆ ನೂರು ರೂಪಾಯಿ ದಂಡ ವಿಧಿಸಲಾಗಿದೆ.

ರೈತ ಸುಂದರ್ ಲಾಲ್ ಎಂಬಾತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಎಸ್‌ಸಿಸಿಎಲ್ ಕಲ್ಲಿದ್ದಲು ಕಂಪೆನಿ ಇನ್ನೂ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿ, ಕಂಪೆನಿಯ ಮುಂದೆ ಪ್ರತಿಭಟನೆ ಮುಂದಾಗಿದ್ದ. ಈತ ತನ್ನ ಊರಿನಿಂದ ಎತ್ತಿನ ಗಾಡಿಯಲ್ಲಿ ಪ್ರಯಾಣಿಸಿ ಬಂದಿದ್ದ. ಹೀಗಾಗಿ ರೈತ ಪ್ರತಿಭಟನೆ ನಡೆಸುವಾಗ ಎತ್ತಿನ ಗಾಡಿಯೂ ಅಲ್ಲೇ ಇತ್ತು. ಈ ವೇಳೆ ಎತ್ತು ಕಂಪೆನಿಯ ಗೇಟಿನ ಬಳಿ ಮೂತ್ರ ಮಾಡಿದೆ. ಪ್ರತಿಭಟನೆ ಮಾಡಿದ್ದ ರೈತನಿಗೆ ಸರಿಯಾದ ಶಾಸ್ತ್ರಿ ಮಾಡಬೇಕೆಂಬ ಹಠದಲ್ಲಿದ್ದ ಕಂಪೆನಿ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಎತ್ತು ಮೂತ್ರ ಮಾಡುವ ದೃಶ್ಯವನ್ನು ಕೋರ್ಟ್ ಗೆ ಸಲ್ಲಿಸಿದೆ. ನಂತರ ರೈತನಿಗೆ ದಂಡ ವಿಧಿಸುವಂತೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಎಸ್‌ಸಿಸಿಎಲ್ ಕಲ್ಲಿದ್ದಲು ಕಂಪೆನಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಎತ್ತು ಮೂತ್ರ ಮಾಡುವ ದೃಶ್ಯವನ್ನು ಕೋರ್ಟ್ ಗೆ ಸಲ್ಲಿಸಿದ ನಂತರ ಆ ದೃಶ್ಯಾವನ್ನು ಪರಿಶೀಲಿಸಿದ ಕೋರ್ಟ್ ತನ್ನ ತನ್ನ ತೀರ್ಪನ್ನು ಈ ರೀತಿ ನೀಡಿದೆ.

ಕೋರ್ಟ್ ಪ್ರಕಾರ ಕಂಪೆನಿಯ ಮುಂದಿನ ಸ್ವಚ್ಛವಾದ ರಸ್ತೆಯಲ್ಲಿ ಎತ್ತು ಮೂತ್ರ ಮಾಡಿರುವುದು ತಪ್ಪು. ಇದಕ್ಕೆ ಎತ್ತಿನ ಮಾಲೀಕನೇ ಹೊಣೆಯಾಗಿದ್ದೇನೆ ಎಂದು ಹೇಳಿ ನೂರು ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುವುದು ವರದಿಯಾಗಿದೆ.

ಒಟ್ಟಿನಲ್ಲಿ ಕೆಲವೊಂದು ಬಾರಿ ಬುದ್ಧಿವಂತಿಕೆ ಮತ್ತು ಅತೀ ಬುದ್ಧಿವಂತಿಕೆ ಗಳಲ್ಲಿ ಅತೀ ಬುದ್ಧಿವಂತಿಕೆ ಸಹ ಗೆಲ್ಲುತ್ತದೆ ಅನ್ನೋದಕ್ಕೆ ಇದೇ ಘಟನೆ ಸಾಕ್ಷಿ. ಆದರೆ ಅಮಾಯಕ ರೈತ ಪರೋಕ್ಷವಾಗಿ ತಪ್ಪು ಒಪ್ಪಿಕೊಂಡಿರುವುದಾಗಿದೆ.

Leave A Reply

Your email address will not be published.