KSP Recruitment 2022: ಸಬ್​ ಇನ್ಸ್​​ಪೆಕ್ಟರ್ ಹುದ್ದೆಗಳ ನೇಮಕಾತಿ- ಲಿಖಿತ ಪರೀಕ್ಷೆ ದಿನಾಂಕ ಪ್ರಕಟ

KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(Karnataka Police Department)ಯಲ್ಲಿ ಖಾಲಿ ಇರುವ ವಿಶೇಷ ರಿಸರ್ವ್​ ಸಬ್​-ಇನ್ಸ್​​ಪೆಕ್ಟರ್(ಕೆಎಸ್​ಆರ್​​ಪಿ & ಐಆರ್​​ಬಿ) 70 ಹುದ್ದೆಗಳಿಗೆ ಲಿಖಿತ ಪರೀಕ್ಷೆ ಯಾವಾಗ ನಡೆಯುತ್ತೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಪತ್ರಿಕೆ-1 ಡಿಸೆಂಬರ್​ 18, 2022 – ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ
ಪತ್ರಿಕೆ- 2 ಡಿಸೆಂಬರ್ 18, 2022- ಮಧ್ಯಾಹ್ನ 2 ಗಂಟೆಯಿಂದ 3.30ರ ವರೆಗೆ ನಡೆಯಲಿದೆ.
ಬೆಂಗಳೂರು ನಗರದ 12 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆಗೆ ಅರ್ಹ ಇರುವ ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್​ಸೈಟ್​https://ksp-recruitment.in/ ಗೆ ಭೇಟಿ ನೀಡಿ ಅಲ್ಲಿ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಪ್ರವೇಶ ಪತ್ರ ಡೌನ್​​ಲೋಡ್​ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗಳಿಗೆ ಹಾಜರಾಗಲು ಸೂಚಿಸಲಾಗಿದೆ.

Leave A Reply

Your email address will not be published.