Business Ideas : ಸರಕಾರಿ ಪಡಿತರ ಅಂಗಡಿ ನೀವೂ ಓಪನ್‌ ಮಾಡಬಹುದು | ಹೇಗೆ ಗೊತ್ತಾ?

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಬಡವರಿಗೆ ಸರ್ಕಾರ ರೇಷನ್ ನೀಡುವ ಉದ್ದೇಶದಿಂದ ಅಲ್ಲಲ್ಲಿ ರೇಷನ್ ಅಂಗಡಿಗಳನ್ನು ತೆರೆದಿದೆ. ನೀವೇನಾದರೂ ನಿರುದ್ಯೋಗಿಯಾಗಿದ್ದು, ಪಡಿತರ ಅಂಗಡಿ ತೆರೆಯುವ ಆಲೋಚನೆಯಲ್ಲಿದ್ದರೆ ಅದರ ಬಗ್ಗೆ ಮಾಹಿತಿ ಕಲೆ ಹಾಕಬೇಕುವುದು ಉತ್ತಮ.

ಪಡಿತರ ಅಂಗಡಿ ತೆರೆಯಲು ಬಯಸುವವರು  ಸರ್ಕಾರಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಎಂಬ ನಿಯಮವೇನಿಲ್ಲ. ಆದರೆ,  ಕೆಲವೊಂದು ನೀವು  ನಿಯಮ ಪಾಲನೆ ಮಾಡಬೇಕಾಗುತ್ತದೆ.

ಸರ್ಕಾರಿ ಪಡಿತರ ಅಂಗಡಿಯಲ್ಲಿ ನೀವು ಪಡಿತರ ಖರೀದಿಸಿರಬಹುದಾಗಿದ್ದು, ಅಲ್ಲಿ ನ್ಯಾಯ ಬೆಲೆಗೆ ಪಡಿತರ ದೊರೆಯಲಿದೆ.  ನಿಮಗೆ ಪಡಿತರ ಬೇಡ ಎಂದಿಟ್ಟುಕೊಳ್ಳಿ ಆದರೂ ಕೂಡ ನಿಮಗೆ ಪಡಿತರ ವಿತರಣೆ ಮಾಡ್ಬೇಕು ಎಂದುಕೊಂಡರೆ  ನಿಮಗೆ ಸರ್ಕಾರ ಖಂಡಿತ ಅವಕಾಶ ಕಲ್ಪಿಸುತ್ತದೆ.

ಸರ್ಕಾರಿ (Govt) ಪಡಿತರ (Ration) ಅಂಗಡಿ  ತೆರೆಯಲು ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಬಳಿಕ ಸರ್ಕಾರಿ ಪಡಿತರ ಅಂಗಡಿಯ ಪರವಾನಗಿ ಪಡೆಯಬೇಕಾಗಿದ್ದು,  ಇದಕ್ಕಾಗಿ  ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಫಾರ್ಮ್ (Form)  ಭರ್ತಿ ಮಾಡಬೇಕಾಗಿದ್ದು,  ಆಧಾರ್, ವಿದ್ಯಾರ್ಹತೆ ಮತ್ತು ಕುಟುಂಬ ಐಡಿಯಂತಹ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ. ದಾಖಲೆ ಪರಿಶೀಲನೆ ಮಾಡಿ ಸರ್ಕಾರ ಪರವಾನಗಿ ನೀಡಿದ ಬಳಿಕ ನೀವು  ಅಂಗಡಿ ತೆರೆಯಬಹುದಾಗಿದೆ.

ಸರ್ಕಾರಿ ಪಡಿತರ ಅಂಗಡಿ ತೆರೆಯಲು ಅರ್ಹತೆಯ ಮಾನದಂಡ ಹೀಗಿವೆ
ಪರವಾನಗಿಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ  ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 50000 ರೂಪಾಯಿ ಇರಬೇಕಾಗುತ್ತದೆ. ಬ್ಯಾಂಕ್  ಖಾತೆಯಲ್ಲಿ 50000 ರೂಪಾಯಿಗಳ ಬ್ಯಾಲೆನ್ಸ್  ಇದ್ದು,  ಭಾರತ (India) ದ ನಾಗರಿಕರು ಮಾತ್ರ ಪಡಿತರ ಅಂಗಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.   ಭಾರತದ ಯಾವುದೇ ಆಹಾರ ನಿಗಮದಿಂದ ಪರವಾನಗಿ ಹೊಂದಿದ್ದರೆ ನಿಮಗೆ ಪಡಿತರ ಅಂಗಡಿ ಪರವಾನಗಿ ದೊರೆಯುವುದಿಲ್ಲ.
ಸರ್ಕಾರಿ ಪಡಿತರ ಅಂಗಡಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿ ಇರುವ ಎರಡು ವಿಧಗಳ ಬಗ್ಗೆ ಮಾಹಿತಿ ತಿಳಿದಿರಬೇಕಾಗುತ್ತದೆ.

ಗ್ರಾಮೀಣ ಪ್ರದೇಶದ ಪಡಿತರ ಅಂಗಡಿ ಹಾಗೂ ನಗರ ಪ್ರದೇಶದ ಪಡಿತರ ಅಂಗಡಿ ಎಂದು ಎರಡು ವಿಭಾಗ ಮಾಡಲಾಗಿದೆ. ಇವೆರಡಕ್ಕೂ ಪ್ರತ್ಯೇಕ ಅರ್ಜಿ ಲಭ್ಯವಿದೆ. ಸರ್ಕಾರಿ ಪಡಿತರ ಅಂಗಡಿಗೆ ಪರವಾನಗಿ ಪಡೆಯಲು  10ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ. ಹಲವೆಡೆ 12ನೇ ತರಗತಿ ಹಾಗೂ ಪದವಿ ಮಾರ್ಕ್ಸ್ ಕಾರ್ಡ್ ಕೇಳಬಹುದು.

ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಂಗಡಿ ತೆರೆಯಲು ಬಯಸಿದರೆ  ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದು.  ನಗರ ಪ್ರದೇಶದ ಪಡಿತರ ಅಂಗಡಿಗಾಗಿ ನೀವು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಂಗಡಿ ತೆರೆಯುವ ಮುನ್ನ ಕಾರಣವನ್ನು ನೀಡಬೇಕಾಗುತ್ತದೆ.  ಪಡಿತರ ಅಂಗಡಿ ದೂರವಿದೆ ಅಥವಾ ಈಗಿರುವ ಅಂಗಡಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬುದನ್ನು ನೀವು ರುಜುವಾತು ಮಾಡಬೇಕಾಗುತ್ತದೆ.  ನಿಮ್ಮ ಅರ್ಜಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ರವಾನೆ ಮಾಡಲಾದ ಬಳಿಕ, ಪರವಾನಗಿ ನೀಡಲಾಗುತ್ತದೆ.

ಸರ್ಕಾರಿ ಪಡಿತರ ಅಂಗಡಿ ತೆರೆಯಲು ಸ್ಥಳದ ಆಯ್ಕೆ ಮುಖ್ಯ ಪಾತ್ರ ವಹಿಸುತ್ತದೆ.  ನಿಮ್ಮ ಸ್ವಂತ ಜಾಗದಲ್ಲಿ ನೀವು ಅಂಗಡಿ ತೆರೆಯುವುದು ಉತ್ತಮ. ಒಂದು ವೇಳೆ ಬಾಡಿಗೆ ಜಾಗವಾಗಿದ್ದರೆ ಕರಾರು ಮುಖ್ಯವಾಗುತ್ತದೆ. ಇದು ಒಂದು ವರ್ಷ ನಡೆಸಿ ಮುಚ್ಚುವ ಅಂಗಡಿಯಲ್ಲದೆ ಇರುವುದರಿಂದ ಹಾಗಾಗಿ ಕರಾರಿಗೆ ನೀವು ಮಹತ್ವ ನೀಡಬೇಕಾಗುತ್ತದೆ. ಪಡಿತರ ಅಂಗಡಿಯನ್ನು ತೆರೆಯುತ್ತಿದ್ದರೆ ಆ ಅಂಗಡಿ ಜನನಿಬಿಡ ಪ್ರದೇಶದಲ್ಲಿ ಇಡಬೇಕಾಗುತ್ತದೆ.

ಅಂಗಡಿ ಮುಂದೆ 8 ರಿಂದ 15 ಅಡಿ ಅಗಲದ ರಸ್ತೆ ಇದ್ದರೆ ಒಳ್ಳೆಯದು. ಅಂಗಡಿ ಮುಂದೆ ಸ್ವಲ್ಪ ಜಾಗವಿರುವಂತೆ ನೋಡಿಕೊಳ್ಳಬೇಕು. ಲಾರಿಗಳು ಬಂದು ನಿಲ್ಲಲು ಜಾಗವಿರುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಪಡಿತರ ಅಂಗಡಿಯು ಸಾಮಾನ್ಯ ಪಡಿತರ ಅಂಗಡಿಗಳಿಗಿಂತ ಸ್ವಲ್ಪ ದೊಡ್ಡದಿರಬೇಕಾಗುತ್ತದೆ.

ಅಂಗಡಿಯ ಎತ್ತರವು 3 ಮೀಟರ್‌ಗಿಂತ ಹೆಚ್ಚಿರಬೇಕು. ಅಂಗಡಿಯೊಂದಿಗೆ ಗೋದಾಮು ಕೂಡ ನಿರ್ಮಿಸಬೇಕಾಗುತ್ತದೆ. ಹಾಗಾಗಿ ಅಂಗಡಿ ದೊಡ್ಡದಿರುವಂತೆ ನೋಡಿಕೊಳ್ಳುವುದು ಉತ್ತಮ. ಪಡಿತರ ಚೀಟಿದಾರರ ಸಂಖ್ಯೆ ಹೆಚ್ಚಿಲ್ಲದಿದ್ದರೆ ಪ್ರತ್ಯೇಕ ಗೋದಾಮು ನಿರ್ಮಿಸುವ ಅವಶ್ಯಕತೆ ಉಂಟಾಗದು. ಮೇಲೆ ತಿಳಿಸಿದ ವಿಚಾರಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಪಡಿತರ ಅಂಗಡಿ ತೆರೆಯಬಹುದು.

Leave A Reply

Your email address will not be published.