ಬೊಜ್ಜು ಕರಗಿಸಲು ಯಾಕಾಗಿ ಇಷ್ಟೊಂದು ಪರದಾಡ್ತಾ ಇದ್ದೀರಾ? ಹೀಗೆ ಮಾಡಿ ಸಾಕು!

ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಿದ್ದಾರೆ. ಆದರೆ ದೈಹಿಕ ಚಟುವಟಿಕೆ ಕೊರತೆ ಸ್ಥೂಲಕಾಯ ಉಂಟು ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಾಗೂ ದೀರ್ಘಕಾಲ ಕುಳಿತುಕೊಂಡಿರುವುದು ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಸಂಶೋಧನೆಯ ಪ್ರಕಾರ, ದೈಹಿಕವಾಗಿ ವ್ಯಕ್ತಿಯು ಸಕ್ರಿಯವಾಗಿ ಇರದೇ ಹೋದರೆ, ಹೆಚ್ಚಿನ ಸಮಯ ಕುಳಿತು ಕಳೆಯುತ್ತಿದ್ದರೆ, ಅಂತಹವರ ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚುತ್ತದೆ ಎಂದು ಹೇಳಿದೆ. ಈಗಾಗಲೇ ತೂಕ ಇಳಿಸಿದ್ದರೆ, ಮತ್ತೆ ದೈಹಿಕ ಚಟುವಟಿಕೆ ಮಾಡದೇ ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸ ಮುಂದುವರೆಸಿದರೆ ಮತ್ತೆ ಹೊಟ್ಟೆ ಕೊಬ್ಬು ಹೆಚ್ಚಾಗಬಹುದು. ಹಾಗಾಗಿ ತೂಕ ಇಳಿಕೆ ನಂತರ ದೈಹಿಕವಾಗಿ ಸಕ್ರಿಯವಾಗಿರಬೇಕು. ದೀರ್ಘಕಾಲದ ಬೊಜ್ಜಿನಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುತ್ತವೆ. ಹಾಗಾಗಿ ಪ್ರತೀ 30 ನಿಮಿಷದ ನಂತರ ಎದ್ದು ನಿಂತು ಸ್ಟ್ರೆಚಿಂಗ್ ಅಥವಾ ನಡೆದಾಡಿ.

ಕಚೇರಿಯಿಂದ ಮನೆ ಹತ್ತಿರವಿದ್ದರೆ ನಡೆದುಕೊಂಡೇ ಹೋಗಿ. ಬಸ್, ಆಟೋ ಬಳಸಬೇಡಿ. ಕಚೇರಿಗೆ ಹೋಗುವಾಗ ಮೆಟ್ಟಿಲಿದ್ದರೆ, ಅದನ್ನೇ ಬಳಸಿ. ಲಿಫ್ಟ್ ಮತ್ತು ಎಲಿವೇಟರ್ ಬಳಕೆ ಬೇಡ. ಇದು ನಿಮ್ಮನ್ನು ದೈಹಿಕವಾಗಿ ಸದೃಢ ಮತ್ತು ಸಕ್ರಿಯವಾಗಿರಿಸುತ್ತದೆ. ಹಾಗೂ ನಿಧಾನವಾಗಿ ಬೊಜ್ಜು ಕಡಿಮೆಯಾಗುತ್ತದೆ.

ವಾಕಿಂಗ್ ಮಾಡಿ: ದಿನವೂ ನಿಯಮಿತವಾಗಿ ವಾಕಿಂಗ್ ಮಾಡಿದರೆ ಬೇಗ ಬೊಜ್ಜು ಕರಗುತ್ತದೆ. ಹಾಗೂ ರೋಗಗಳು ಕಾಡುವುದಿಲ್ಲ. ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.

ಹೆಚ್ಚು ನೀರು ಕುಡಿಯಿರಿ: ಯಾವಾಗಲೂ ಕೆಲಸದ ಮೇಜಿನ ಬಳಿ ನೀರಿನ ಬಾಟಲಿ ಇಡಿ. ಆಗಾಗ್ಗೆ ನೀರು ಕುಡಿಯುತ್ತಾ ದೇಹವನ್ನು ಹೈಡ್ರೀಕರಿಸಿ. ಇದು ಬೊಜ್ಜು ಹೆಚ್ಚಾಗುವ ಚಿಂತೆಯನ್ನು ದೂರ ಮಾಡುತ್ತದೆ. ಆರೋಗ್ಯಕ್ಕೂ ಉತ್ತಮ.

ನಿಯಮಿತವಾಗಿ ವ್ಯಾಯಾಮ ಮಾಡಿ: ದಿನವೂ ನಿಯಮಿತವಾಗಿ 30 ನಿಮಿಷ ವ್ಯಾಯಾಮ ಮಾಡಿ. ಜಾಗಿಂಗ್, ವಾಕಿಂಗ್, ಸೈಕ್ಲಿಂಗ್ ಮುಂತಾದ ಸರಳ ವ್ಯಾಯಾಮ ಮಾಡಿ. ಈ ರೀತಿಯಾದ ಒಂದಷ್ಟು ಟಿಪ್ಸ್​ ಫಾಲೋ ಮಾಡಿದ್ರೆ ಪಕ್ಕಾ ಬೊಜ್ಜು ಕರಗುತ್ತದೆ. ಹಾಗೆಯೇ ಅನಾರೋಗ್ಯಕ್ಕೆ ತುತ್ತಾಗುವು ತಪ್ಪಿಸಬಹುದು.

Leave A Reply

Your email address will not be published.