Tech Tips: ಇನ್ಮುಂದೆ ಹೈಟ್​ ನೋಡಲು ಮೆಷರ್ ಟೇಪ್ ಮೊರೆ ಹೋಗಬೇಡಿ | ಮೊಬೈಲ್ ನಲ್ಲೇ ನೋಡಿ!

ಅಬ್ಬಾ!! ಸ್ಮಾರ್ಟ್ಫೋನ್ ನಿಂದ ಹೈಟ್ ಕೂಡ ನೋಡಬಹುದಾ? ಆಶ್ಚರ್ಯಕರವಾಗಿದೆ ಅಲ್ವಾ!! ಆದರೆ ಇದು ನಿಜ. ಈಗಿನವರೆಗೆ ಹೈಟ್​ ಅನ್ನು ಮೆಷರ್​​ ಟೇಪ್ ನಲ್ಲೇ ನೋಡಬೇಕಿತ್ತು. ಆದರೆ ಇನ್ಮುಂದೆ ಹೈಟ್ ಅನ್ನು ಮೊಬೈಲ್​ ಕ್ಯಾಮೆರಾದಿಂದ ಕೆಲವೇ ನಿಮಿಷಗಳಲ್ಲಿ ನೋಡಬಹುದಾಗಿದೆ. ಹೇಗೆ ಎಂಬ ಕುತೂಹಲವೇ? ಅದಕ್ಕೆಂದೇ ಇಲ್ಲಿದೆ ಸಂಪೂರ್ಣ ಮಾಹಿತಿ.

ಐಫೋನ್​ಗಳು ಉತ್ತಮ ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಐಫೋನ್ ತನ್ನ ವಿಭಿನ್ನ ಫೀಚರ್ಸ್​ನಿಂದ ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಇದರಲ್ಲಿನ ಕೆಲವು ಫೀಚರ್ಸ್ ಹಲವರಿಗೆ ತಿಳಿದಿಲ್ಲ. ಇದರಲ್ಲಿ ಹೈಟ್​ ನೋಡುವ ಫೀಚರ್ಸ್​ ಕೂಡ ಒಂದಾಗಿದೆ. ಇನ್ನೂ ಹೈಟ್ ಯಾವ ರೀತಿ ನೋಡೋದು? ಯಾವ ಸ್ಮಾರ್ಟ್ಫೋನ್ಗಳಲ್ಲಿ ನೋಡಬಹುದು? ಎಂಬ ಮಾಹಿತಿ ಇಲ್ಲಿದೆ.

ಐಫೋನ್ ನ ಕ್ಯಾಮೆರಾದಿಂದ ನಿಮ್ಮ ಹೈಟ್ ಎಷ್ಟಿದೆ ಎಂದು ನೋಡಬಹುದು. ಹೇಗೆಂದರೆ, ಐಫೋನ್​ನಲ್ಲಿ ಇನ್​ಬಿಲ್ಟ್​ ಎಂಬ ಅಳತೆ ಮಾಡುವ ಅಪ್ಲಿಕೇಶನ್ ಇದೆ. ಆ ಮೂಲಕ ಅದನ್ನು ಡೌನ್​ಲೋಡ್ ಮಾಡಿ, ವ್ಯಕ್ತಿಯ ಹೈಟ್ ಮತ್ತು ವಸ್ತುಗಳ‌ನ್ನು ಕೂಡ ಅಳತೆ ಮಾಡಬಹುದಾಗಿದೆ.

ಇನ್ನೂ ಐಫೋನ್‌ ನ ರಿಯರ್‌ ಕ್ಯಾಮೆರಾ ಪಕ್ಕದಲ್ಲಿ LiDAR ಸ್ಕ್ಯಾನರ್‌ ಎಂಬ ಆಯ್ಕೆ ಇದೆ. ಈ ಸ್ಕ್ಯಾನರ್‌ ಮೂಲಕ ಹೈಟ್​ ನೋಡಬಹುದು ಅಲ್ಲದೆ, ವಸ್ತುಗಳ ಉದ್ದವನ್ನು ಕೂಡ ಅಳತೆ ಮಾಡಬಹುದು. ಇದು ನಿಮಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ.

ನಿಮ್ಮ ಐಫೋನ್‌ನಲ್ಲಿ ಮೆಷರ್ ಆ್ಯಪ್ ಅನ್ನು ಓಪನ್‌ ಮಾಡಬೇಕು. ನಂತರ ಯಾರ ಹೈಟ್ ಅಳತೆ ಮಾಡಬೇಕಿದೆ ಅವರನ್ನು ನಿಮ್ಮ ಮೊಬೈಲ್​ನ ಮುಂದೆ ನಿಲ್ಲಿಸಿ, ಮೊಬೈಲ್ ನ ಕ್ಯಾಮೆರಾ ಓಪನ್ ಮಾಡಿ. ಆಗ ಮೊಬೈಲ್​ನ ಡಿಸ್‌ಪ್ಲೇ ನಲ್ಲಿ ಅವರ ಪೂರ್ಣ ಚಿತ್ರಣ ಕಾಣಿಸುತ್ತಿದೆಯಾ ಎಂದು ನೋಡಿ. ಬಳಿಕ ಡಿಸ್​ಪ್ಲೇಯಲ್ಲಿ ಆ ವ್ಯಕ್ತಿಯ ಎತ್ತರ ಕಾಣಬಹುದಾಗಿದೆ. ಹಾಗೇ ನೀವು ಅಡಿ, ಇಂಚುಗಳ ಮಾಹಿತಿಯನ್ನು ಕೂಡ ಇದರಲ್ಲಿ ಪಡೆಯಬಹುದಾಗಿದೆ. ಹೇಗೆಂದರೆ, ಅಲ್ಲೇ ಕಾಣಿಸುವ ಸೆಟ್ಟಿಂಗ್‌ ಆಪ್‌ನಲ್ಲಿ ಮೆಷರ್‌ ಅನ್ನು ಆಯ್ಕೆ ಮಾಡಿ, ನಂತರ ಅಲ್ಲಿರುವ ‘ಮೆಷರ್‌ ಯೂನಿಟ್‌’ ಮೇಲೆ ಟ್ಯಾಪ್‌ ಮಾಡಿ. ಇಷ್ಟೇ ಹೀಗೇ ನೀವು ಸುಲಭವಾಗಿ ಹೈಟ್ ನೋಡಬಹುದು.

ಇನ್ನೂ ಈ ಫೀಚರ್ಸ್ ಯಾವ ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿದೆ ಎಂದರೆ, ಐಫೋನ್‌ 12 ಪ್ರೋ, ಐಫೋನ್‌ 12 ಪ್ರೋ ಮ್ಯಾಕ್ಸ್‌, ಐಫೋನ್‌ 13 ಪ್ರೋ, ಐಫೋನ್‌ 13 ಪ್ರೋ ಮ್ಯಾಕ್ಸ್, ಐಫೋನ್‌ 14 ಪ್ರೋ ಮತ್ತು ಐಫೋನ್‌ 14 ಪ್ರೋ ಮ್ಯಾಕ್ಸ್ ಫೋನ್‌ಗಳಲ್ಲಿ ಈ ಫೀಚರ್ಸ್‌ ಬಳಸಬಹುದಾಗಿದೆ.

Leave A Reply

Your email address will not be published.