SSY Changes : ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ : ಕೇಂದ್ರ ಸರ್ಕಾರ
ಸುಕನ್ಯಾ ಸಮೃದ್ಧಿ ಯೋಜನೆಯ (SSY) ಬದಲಾದ ನಿಯಮಗಳ ಅಡಿಯಲ್ಲಿ, ಖಾತೆಯಲ್ಲಿನ ತಪ್ಪು ಬಡ್ಡಿಯನ್ನು ಹಿಂತಿರುಗಿಸುವ ನಿಬಂಧನೆಯನ್ನು ತೆಗೆಯಲಾಗಿದ್ದು, ಮೊದಲು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಅದರ ಬದಲಿಗೆ, ಖಾತೆಯ ಮೇಲಿನ ವಾರ್ಷಿಕ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಜಮಾ ಮಾಡಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯು ದೇಶದಲ್ಲಿ ಹೆಣ್ಣು ಮಗುವಿನ ಉತ್ತಮ ಗುರಿಯನ್ನು ಹೊಂದಿದ್ದು, ಪ್ರತಿ ಕುಟುಂಬದಲ್ಲಿನ ಹೆಣ್ಣು ಮಗುವಿಗೆ ಉಳಿತಾಯದ ಸಾಧನವನ್ನು ನೀಡಲು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ.
ಇದು ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಯ ಒಂದು ಭಾಗವಾಗಿದ್ದು,ಇದನ್ನು ಗೊತ್ತುಪಡಿಸಿದ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳಲ್ಲಿ ತೆರೆಯಬಹುದ್ದಾಗಿದ್ದು, SSY ಖಾತೆಯು 21 ವರ್ಷಗಳ ಅವಧಿಯನ್ನು ಹೊಂದಿದ್ದು ಇಲ್ಲವೇ 18 ವರ್ಷದ ನಂತರ ಹೆಣ್ಣು ಮಗು ಮದುವೆಯಾಗುವವರೆಗೆ ಖಾತೆಯನ್ನು ನಿರ್ವಹಿಸಬಹುದಾಗಿತ್ತು.
ಹಿಂದಿನ ನಿಯಮಗಳ ಆಧಾರದ ಮೇಲೆ, ಖಾತೆಯನ್ನು ಹೊಂದಿರುವ ಮಗಳು 10 ವರ್ಷ ವಯಸ್ಸಿನಲ್ಲಿ ಖಾತೆಯನ್ನು ನಿರ್ವಹಿಸಬಹುದಾಗಿತ್ತು. ಆದರೆ ಬದಲಾವಣೆಯ ಬಳಿಕ, ಹೆಣ್ಣುಮಕ್ಕಳು 18 ವರ್ಷಕ್ಕಿಂತ ಮೊದಲು ಖಾತೆಯನ್ನು ನಿರ್ವಹಿಸಲು ಅನುಮತಿ ಇಲ್ಲ. ಹೆಣ್ಣು ಮಗುವಿನ ಪಾಲಕರು ಮಾತ್ರ ಆಕೆಗೆ 18 ವರ್ಷ ವಯಸ್ಸಾಗುವವರೆಗೆ ಖಾತೆಯನ್ನು ನಿರ್ವಹಿಸಬಹುದು.
ಪ್ರತಿ ವರ್ಷ SSY ಖಾತೆಯಲ್ಲಿ ಕನಿಷ್ಠ 250 ಮತ್ತು ಗರಿಷ್ಠ 1.5 ಲಕ್ಷ ರೂ. ಆಗಿದ್ದು, ಈಗ ಹೊಸ ನಿಯಮ ಜಾರಿಗೆ ತಂದಿದ್ದು, ನೀವು ಯಾವುದೇ ಮೊತ್ತವನ್ನು ಠೇವಣಿ ಮಾಡದೆ ಇದ್ದರೆ, ನಿಮ್ಮ ಖಾತೆಯನ್ನು ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆ ಬಳಿಕ, ಖಾತೆಯನ್ನು ಮರುಸಕ್ರಿಯಗೊಳಿಸದಿದ್ದರೆ, ಮುಕ್ತಾಯವಾಗುವವರೆಗೆ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಅನ್ವಯವಾಗುವ ದರದಲ್ಲಿ ಬಡ್ಡಿಯು ಮುಂದುವರಿಯುತ್ತ ಹೋಗಲಿದೆ.
ಆರಂಭಿಕ ನಿಯಮಗಳ ಅಡಿಯಲ್ಲಿ, ಆದಾಯ ತೆರಿಗೆಯ ಸೆಕ್ಷನ್ 80C (80C) ಅಡಿಯಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು ಇಬ್ಬರು ಹೆಣ್ಣುಮಕ್ಕಳ ಖಾತೆಗೆ ಮಾತ್ರ ಅನ್ವಯವಾಗುತ್ತಿತ್ತು. ಆದರೆ ಈಗ ಮೊದಲ ಮಗಳ ನಂತರ ಎರಡನೇ ಬಾರಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದರೆ, ನೀವು ಎರಡನೇ ಮತ್ತು ಮೂರನೇ ಮಗಳಿಗೂ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದಾಗಿದೆ.
ಈ ಮೂಲಕ ಒಬ್ಬ ವ್ಯಕ್ತಿ ಮೂರು ಹೆಣ್ಣು ಮಕ್ಕಳ ಖಾತೆಯನ್ನು ತೆರೆದು ನಿರ್ವಹಿಸಬಹುದು.ಮಗಳು ಸತ್ತರೆ ಇಲ್ಲವೇ ಮಗಳ ವಿಳಾಸ ಬದಲಾದಾಗ ‘ಸುಕನ್ಯಾ ಸಮೃದ್ಧಿ ಯೋಜನೆ’ ಖಾತೆಯನ್ನು ಈ ಹಿಂದೆ ಬಂದ್ ಮಾಡುವ ಸೌಲಭ್ಯ ಇತ್ತು. ಆದರೆ ಈಗ ಖಾತೆದಾರರ ಮಾರಣಾಂತಿಕ ಕಾಯಿಲೆಯೂ ಅದರಲ್ಲಿ ಸೇರ್ಪಡೆಯಾಗಿದ್ದು ಈಗ ಪಾಲಕರ ಮರಣದ ನಂತರವೂ ಖಾತೆಯನ್ನು ಅವಧಿಗೆ ಮುನ್ನ ಬಂದ್ ಮಾಡುವ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.