ಬೆಂಗಳೂರಿನಲ್ಲಿ ಕೊರಗಜ್ಜನ ನೇಮ ಕ್ಯಾನ್ಸಲ್ | ದೈವಾರಾಧಕರ ವಿರೋಧಕ್ಕೆ ಕೊನೆಗೂ ಸಿಕ್ಕಿತ್ತು ಜಯ!

ಕರಾವಳಿಯ ಜನ ಭಕ್ತಿಯಿಂದ ದೈವಾರಾಧನೆ, ಭೂತ ಕೋಲ ಮುಂತಾದ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸಾಮಾನ್ಯ.

ಕಾಂತಾರ ಸಿನಿಮಾದ ಬಳಿಕ, ಎಲ್ಲೆಡೆ ದೈವದ ಹೆಸರಿನಲ್ಲಿ ಹಣ ಲೂಟಿ ಮಾಡುವ ದಂಧೆ ನಡೆಯುತ್ತಿದ್ದು, ಈ ರೀತಿ ಮಾಡುವವರ ವಿರುದ್ಧ ತುಳುನಾಡಿನ ದೈವರಾಧಕರು ಖಡಕ್ ಎಚ್ಚರಿಕೆ ಕೂಡ ನೀಡಿದ್ದರು.


ಕಾಂತಾರ ಸಿನಿಮಾ ಚಿತ್ರದಲ್ಲಿ ಬರುವ ದೈವದ ಪಾತ್ರದ ಅನುಕರಣೆ ಮಾಡುವ ಪರಿಪಾಠ ಕಂಡು ಬಂದಾಗ, ರಿಷಬ್ ಶೆಟ್ಟಿ ಕೂಡ ದೈವಾರಾಧನೆ ಬಗ್ಗೆ ಮಾತನಾಡಿದ್ದರು. ‘ಕಾಂತಾರ’ ಸಿನಿಮಾದಲ್ಲಿ ದೈವದ ಮಾತಿನಂತೆ, ‘ವೋ..’ ಎಂದು ಕೂಗುವ ದೃಶ್ಯವಿದ್ದು, ಇದನ್ನು ಅನೇಕರು ಅನುಕರಣೆ ಮಾಡಿದ್ದನ್ನು ಗಮನಿಸಿ, ‘ಆ ರೀತಿ ಮಾಡಬಾರದು. ಅದಕ್ಕೆ ಅದರದ್ದೇ ಆದ ಗೌರವ ಇದೆ’ ಎಂದು ರಿಷಬ್ ಶೆಟ್ಟಿ ತುಳುನಾಡಿನ ಸಂಸ್ಕೃತಿಯ ಬಗ್ಗೆ ತಮಗಿರುವ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ (ನವೆಂಬರ್ 26) ರಂದು ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿ ಆಮಂತ್ರಣ ಪತ್ರಿಕೆ ಕೂಡ ಎಲ್ಲೆಡೆ ಸಂಚಲನ ಮೂಡಿಸಿತ್ತು.
ಬೆಂಗಳೂರಿನಲ್ಲಿ ಕೊರಗಜ್ಜ ನೇಮ ನಡೆಸುವ ಕುರಿತು ತುಳುವರಿಂದ ತೀವ್ರ ವಿರೋಧ ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.


‘ ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಲೂಟಿ ಮಾಡುವ ಪ್ರಯತ್ನ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ದೈವಾರಾಧನೆ ಎಂದರೆ ದೇವತಾರಾಧನೆ ಎಂಬ ಅನ್ವರ್ಥ ಭಾವ ವಾಗಿದ್ದು, ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಕೊರಗಜ್ಜ ನ ನೇಮ ನಡೆಸುವುದು ಯೋಗ್ಯ ಎಂಬ ಕುರಿತಾಗಿ ತುಳು ನಾಡಿನ ಮಂದಿ ತಮ್ಮ ಮನದ ಇಂಗಿತ ಹೊರಹಾಕಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಕೊರಗಜ್ಜ ನೇಮ ಕಾರ್ಯಕ್ರಮ ಸ್ಥಗಿತಗೊಂಡಿದೆ.

Leave A Reply

Your email address will not be published.