ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಇಲಾಖೆಯಿಂದ ಮಹತ್ವದ ಮಾಹಿತಿ | ಜೀವ ವಿಮಾ ಪಾಲಿಸಿಗಳ ಪೂರೈಕೆ ಅವಧಿ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್ ದೊರಕಿದ್ದು, ಜೀವ ವಿಮಾ ಪಾಲಿಸಿಗಳ ಪೂರೈಕೆ ಅವಧಿ ಹೆಚ್ಚಳ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಸರ್ಕಾರಿ ನೌಕರರ ಹಿತದೃಷ್ಠಿಯಿಂದ ವಿಮಾ ಸೌಲಭ್ಯವನ್ನು 60 ವರ್ಷಗಳವೆರೆ ಹೆಚ್ಚಿಸಿದೆ.
ಸರ್ಕಾರಿ ನೌಕರರು ವಿಮಾ ಸೌಲಭ್ಯದಿಂದ ವಂಚಿತರಾಗುವುದಲ್ಲದೇ, ಸರ್ಕಾರಿ ನೌಕರರು ಅಕಾಲಿಕ ಮರಣ ಹೊಂದಿದರೇ ಅವರ ಅವಲಂಬಿತ ಕುಟುಂಬಕ್ಕೆ ಕೂಡ ಆರ್ಥಿಕ ಭದ್ರತೆ ದೊರೆಯುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಅನುಗುಣವಾಗಿ ನೌಕರರಿಗೆ ನೀಡಲಾಗುತ್ತಿರುವತ ಜೀವ ವಿಮಾ ಪಾಲಿಸಿಗಳ ಪೂರೈಕೆ ಅವಧಿಯನ್ನು ಹೆಚ್ಚಳ ಮಾಡಿ, ಸರ್ಕಾರಿ ವಿಮಾ ಇಲಾಖೆ ಆದೇಶಿಸಿದೆ.
ಸುಮಾರು 60 ವರ್ಷಗಳಿಂದ ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯವನ್ನು 55 ವರ್ಷ ವಯಸ್ಸಿನವರೆಗೆ ಮಾತ್ರ ನೀಡಲಾಗುತ್ತಿತ್ತು. ಬಳಿಕ 2006ರಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಗಳಿಗೆ ಹೆಚ್ಚಿಸಿದಾಗ, ನಿವೃತ್ತಿ ವಯಸ್ಸನ್ನು ಸರ್ಕಾರ 55 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿಸಿದೆ. ಆದರೂ ಕೂಡ ಇಲಾಖೆಯು ವಿಮಾ ಸೌಲಭ್ಯವನ್ನು ಸರ್ಕಾರಿ ನೌಕರರ ವಯಸ್ಸು 55 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತಿತ್ತು. ಇದೀಗ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ವಿಮಾ ಸೌಲಭ್ಯವನ್ನು 55 ವರ್ಷಗಳಿಂದ 60 ವರ್ಷಗಳವೆರೆ ಹೆಚ್ಚಿಸಿ, ಆದೇಶಿಸಲಾಗಿದೆ.