ಪುತ್ತೂರು : ರೈಟ್ ಹೇಳಿದ ವಿದ್ಯಾರ್ಥಿ | ನಿರ್ವಾಹಕನನ್ನು ಬಿಟ್ಟು ಹೊರಟ ಕೆಎಸ್‌ಆರ್‌ಟಿಸಿ ಬಸ್

ಪುತ್ತೂರು: ವಿದ್ಯಾರ್ಥಿಯೊಬ್ಬ ಬಸ್.ನಲ್ಲಿ ರೈಟ್ ಎಂದು ಹೇಳಿದ ಕಾರಣ ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ಬೆಳಿಗ್ಗೆ ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು.

ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದ. ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ. ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂ.ಟಿ.ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್ಸಿನಲ್ಲಿ ನಿರ್ವಾಹಕ ಇಲ್ಲದಿರುವುದು ಗೊತ್ತಾಗಿದೆ. ಇದೇ ವೇಳೆ ಬೇರೊಂದು ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ನಿರ್ವಾಹಕ ಆಗಮಿಸಿ ತನ್ನ ಕರ್ತವ್ಯದ ಬಸ್ ಸೇರಿಕೊಂಡಿದ್ದಾರೆ.

ಪೋಕರಿ ವಿದ್ಯಾರ್ಥಿ ರೈಟ್ ಹೇಳಿದ ಕಾರಣ ಬಸ್ ಚಲಾಯಿಸಿ ಪುನಃ ನಿರ್ವಾಹಕ ಬರುವವರೆಗೆ ಸುಮಾರು 15 ನಿಮಿಷ ಬಸ್ ನಿಲ್ಲಿಸುವಂತಾಯಿತು.

Leave A Reply

Your email address will not be published.