Soaked Anjeer Benefits : ಅಂಜೂರವನ್ನು ಈ ರೀತಿ ನೆನೆಸಿ ತಿಂದರೆ ಹೃದಯಕ್ಕೆ ಉತ್ತಮ!!!

ಆರೋಗ್ಯಕರ ಹಣ್ಣುಗಳಲ್ಲಿ ಒಂದಾದ ಅಂಜೂರವು ರುಚಿಕರ ಮತ್ತು ರಸಭರಿತವಾಗಿದೆ. ಅಂಜೂರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದೂ ಪೌಷ್ಟಿಕವಾಗಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅದ್ಭುತ ಆರೋಗ್ಯ ಪ್ರಯೋಜನಗಳಿಗಾಗಿ ವೈದ್ಯರು ಈ ಹಣ್ಣನ್ನು ಶಿಫಾರಸು ಮಾಡುತ್ತಾರೆ.

ಏಕೆಂದರೆ ನಮ್ಮ ದೇಹವು ಅದರ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಆದ್ದರಿಂದ ಪ್ರತಿದಿನ ಸುಮಾರು 2 ಅಥವಾ 3 ಒಣಗಿದ ಅಂಜೂರದ ಹಣ್ಣುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟೂ ಬೆಳಗ್ಗೆ ಸೇವಿಸಬೇಕು. ಇದರಿಂದಾಗುವ ಆರೋಗ್ಯ ಪ್ರಯೋಜನವನ್ನು ತಿಳಿದುಕೊಳ್ಳೋಣ.

ಇಂದು ನಮ್ಮಲ್ಲಿ ಅನೇಕರು ಎದುರಿಸುತ್ತಿರುವ ಜೀರ್ಣಕಾರಿ ಸಮಸ್ಯೆಗಳಲ್ಲಿ ಒಂದಾದ ಮಲಬದ್ಧತೆಯನ್ನು ತಡೆಯುತ್ತದೆ. ಬೆಳಗ್ಗೆ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಂಜೂರದಲ್ಲಿ ಕರಗುವ ನಾರು ಮತ್ತು ಕರಗದ ನಾರು ಇರುತ್ತದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಅಂಜೂರದಲ್ಲಿ ನಾರಿನಂಶ ಅಧಿಕವಾಗಿದೆ. ಇದು ಜೀರ್ಣಿಸಿಕೊಳ್ಳಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುವುದನ್ನು ತಡೆಯುತ್ತದೆ.ಇದರಿಂದ ನಿಮ್ಮ ಹಸಿವು ಸಹ ನಿಗ್ರಹಿಸುತ್ತದೆ. ಇದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು.

ನೆನೆಸಿದ ಅಂಜೂರದಲ್ಲಿ ಕ್ಲೋರೊಜೆನಿಕ್ ಆಮ್ಲವಿದೆ. ಅಂಜೂರದಲ್ಲಿ ಪೊಟ್ಯಾಸಿಯಮ್ ಇರುವುದರಿಂದ ಅವು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅಂಜೂರವು ರಕ್ತದಲ್ಲಿನ ಟ್ರೈಗ್ಲಿಸರೈಡ್ಗಳು, ಇವುಗಳನ್ನು ಕೊಬ್ಬಿನ ಕಣಗಳು ಎಂದು ಕರೆಯಲಾಗುತ್ತದೆ. ಇವು ರಕ್ತನಾಳಗಳಿಗೆ ಅಂಟಿಕೊಳ್ಳುವುದರಿಂದ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗುತ್ತವೆ. ಪ್ರತಿದಿನ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ಈ ಕೊಬ್ಬಿನ ಕಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅನೇಕ ಮಹಿಳೆಯರು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದಾರೆ. ಅಂಜೂರವು ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದೂ, ಇದನ್ನು ತಿನ್ನುವುದರಿಂದ ಇವು ಮೂಳೆಗಳನ್ನು ಬಲ ಪಡಿಸುತ್ತದೆ.

ಅಂಜೂರದಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನೆನೆಸಿದ ಅಂಜೂರದ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ನಂತಹ ಸಾಮಾನ್ಯ ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಂಜೂರವು ಗರ್ಭಿಣಿಯಾಗಲು ಯೋಜಿಸುತ್ತಿರುವ ಮಹಿಳೆಯರಲ್ಲಿ ಫಲವತ್ತತೆಗೆ ಸಹಾಯ ಮಾಡುತ್ತದೆ. ಅಂಜೂರದಲ್ಲಿ ಸತು, ಮ್ಯಾಂಗನೀಸ್, ಖನಿಜಗಳು ಮತ್ತು ಮೆಗ್ನಿಸಿಯಮ್ ಸಮೃದ್ಧವಾಗಿದೆ. ಪ್ರತಿದಿನ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ಆರೋಗ್ಯಕರ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.

Leave A Reply

Your email address will not be published.