Viral Video : ಅಚ್ಚರಿ | ಮೊಬೈಲ್ ಡಯಲ್ ಪ್ಯಾಡ್ ನಲ್ಲಿ ನಾಡಗೀತೆ, ಯುವಕನೋರ್ವನ ಪ್ರತಿಭೆ !!!

ಸಂಗೀತ ಅನ್ನೋದು ಒಂದು ರೀತಿಯಲ್ಲಿ ದೇವರ ಸ್ಮರಣೆ ಕೂಡ ಹೌದು. ಎಲ್ಲರಿಗೂ ಏಕಾಗ್ರತೆಯಿಂದ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಚಾಣಕ್ಯತನ ಇರುವುದಿಲ್ಲ. ಏಕೆಂದರೆ ರಾಗ ತಾಳ ಭಾವಗಳು ಸೇರಿದರೆ ಸಂಗೀತ. ಹಾಗೆಯೇ ಸಂಗೀತದ ಮೂಲಗಳು ಬೇರೆ ಬೇರೆ ಇದ್ದರೂ ಸಹ ರಾಗ ಒಂದೇ ಆಗಿರುತ್ತೆ.

ಪ್ರತಿಭೆ ಎನ್ನುವಂತಹದ್ದು ಪ್ರತಿಯೊಬ್ಬರಲ್ಲೂ ಇರುವಂತಹದ್ದೇ. ಆದರೆ ಅದರ ಪ್ರಸ್ತುತಿಗೆ ಸರಿಯಾದ ವೇದಿಕೆ ಸಿಗದೆ ಕೆಲವೊಂದಿಷ್ಟು ಜನ ಮೂಲೆಗುಂಪಾಗುತ್ತಾರೆ. ಇನ್ನೂ ಕೆಲವರು ಸಾಧನೆಯ ಶಿಖರವನ್ನೇರುತ್ತಾರೆ. ಇದರ ಹೊರತಾಗಿರುವ ಒಂದಿಷ್ಟು ಜನ ತಮ್ಮ ಪ್ರತಿಭೆ ಅನಾವರಣ ಮಾಡಲು ಸಿಕ್ಕ ಅವಕಾಶವೇ ಸಾಕು ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ ಯುವಕ ಡಯಲ್ ಪ್ಯಾಡ್ ಮೂಲಕ ಸಂಗೀತ ರಾಗದ ಅನಾವರಣವಾಗಿದೆ. ಇದೊಂದು ಅಸಾಮಾನ್ಯ ಸಂಗೀತ ಎನ್ನಬಹುದು

https://m.facebook.com/100001322594467/videos/%E0%B2%A8%E0%B2%AE%E0%B3%8D%E0%B2%AE%E0%B3%82%E0%B2%B0-%E0%B2%B9%E0%B3%81%E0%B2%A1%E0%B3%81%E0%B2%97%E0%B2%A8-%E0%B2%B9%E0%B3%8A%E0%B2%B8-%E0%B2%AA%E0%B3%8D%E0%B2%B0%E0%B2%AF%E0%B2%A4%E0%B3%8D%E0%B2%A8-%E0%B2%92%E0%B2%AE%E0%B3%8D%E0%B2%AE%E0%B3%86-%E0%B2%A8%E0%B3%8B%E0%B2%A1%E0%B2%BF-sriram-thirthahalli/1184635819067207/?locale2=kn_IN

ಹೌದು ಶ್ರೀರಾಮ್ ತೀರ್ಥಹಳ್ಳಿ ಎಂಬವರು ಮೊಬೈಲ್ ಫೋನ್ ಡಯಲ್ ಪ್ಯಾಡ್ ಮೂಲಕ ನಾಡಗೀತೆಯನ್ನು ಅಚ್ಚುಕಟ್ಟಾಗಿ ನುಡಿಸುತ್ತಿದ್ದಾರೆ. ಈ ಪ್ರತಿಭೆ ಅಸಾಮಾನ್ಯ. ಏಕೆಂದರೆ ಸಾಮಾನ್ಯವಾಗಿ ಸಂಗೀತ ಸಾಧನಗಳ ಮೂಲಕ ಹಾಡುಗಳ ಸ್ವರವನ್ನು ನುಡಿಸುವುದನ್ನು ಗಮನಿಸಿದ್ದೇವೆ. ಆದರೆ ಇದು ನಂಬರ್ ಗಳನ್ನು ಪೋಣಿಸುತ್ತಾ ಸ್ವರವನ್ನು ಅಚ್ಚುಕಟ್ಟಾಗಿ ನುಡಿಸುವುದು ಸಾಮಾನ್ಯದ ಮಾತಲ್ಲ.

ಇತ್ತೀಚಿನ ದಿನಗಳಲ್ಲಿ ಅನೇಕ ವಿಧವಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಯುವಕರು ಇದೇ ವೇದಿಕೆಯನ್ನು ತಮ್ಮ ಪ್ರತಿಭೆ ಅನಾವರಣ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಟಿ.ಜಿ ನಾಗೇಶ್ ಎಂಬವರು ಹಂಚಿಕೊಂಡಿದ್ದು, “ನಮ್ಮೂರ ಹುಡುಗನ ಹೊಸ ಪ್ರಯತ್ನ… ಒಮ್ಮೆ ನೋಡಿ…” ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿದ ವೀಕ್ಷಕರು ಯುವಕನಿಗೆ ಮನಸಾರೆ ಮೆಚ್ಚುಗೆ ತಿಳಿಸಿದ್ದಾರೆ

Leave A Reply

Your email address will not be published.