ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು!!!

ದಿನಂಪ್ರತಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣ ವರದಿಯಾಗುತ್ತಲೆ ಇರುತ್ತವೆ. ಅತ್ಯಾಚಾರವೆಸಗಿದ ಆರೋಪಿಯ ವಿರುದ್ಧ ಸಾಕ್ಷಿ ಸಮೇತ ಸತ್ಯ ಪರಾಮರ್ಶೆ ನಡೆಸಲು ನಾನಾ ಪರೀಕ್ಷೆಗಳು ನಡೆಯುವುದು ವಾಡಿಕೆ.ಈ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ‘ಎರಡು-ಬೆರಳಿನ ಪರೀಕ್ಷೆ’ ಬಳಕೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿಷೇಧ ಮಾಡಿ ಮಹತ್ತರ ನಿರ್ಧಾರ ಕೈಗೊಂಡಿದೆ.

ಅತ್ಯಾಚಾರ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳಿಗೆ Two Finger Test ನಡೆಸುವ ಕುರಿತಂತೆ ಸುಪ್ರೀಂ ಕೋರ್ಟ್ ಕಿಡಿ ಕಾರಿದ್ದು, ಅಲ್ಲದೆ ಅವೈಜ್ಞಾನಿಕ ಹಾಗೂ ಕಾನೂನುಬಾಹಿರವಾಗಿರುವ ಇಂತಹ ಪರೀಕ್ಷೆಯನ್ನು ನಡೆಸುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಂತ್ರಸ್ತೆಯ ಅತ್ಯಾಚಾರಕ್ಕೂ ಹಿಂದಿನ ಲೈಂಗಿಕ ಬದುಕನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇಂದಿನ ದಿನಗಳಲ್ಲಿ ಕೂಡ Two Finger Test ನಡೆಸುತ್ತಿರುವುದು ಅಮಾನವೀಯವೆಂದು ತೀರ್ಪು ನೀಡಿ ಈ ನಡೆಯನ್ನು ಕೋರ್ಟ್ ವಿರೋಧಿಸಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಕರಣಗಳಲ್ಲಿ ಎರಡು ಬೆರಳಿನ ಪರೀಕ್ಷೆಯ ಬಳಕೆಯನ್ನು ಈ ನ್ಯಾಯಾಲಯವು ಅನೇಕ ಬಾರಿ ತಿರಸ್ಕರಿಸಿದೆ.

ಅವೈಜ್ಞಾನಿಕ ಹಾಗೂ ಕಾನೂನುಬಾಹಿರವಾಗಿರುವ ಈ ಪರೀಕ್ಷೆಯನ್ನು ಕೂಡಲೇ ನಿಲ್ಲಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದೆ. ಇದಲ್ಲದೆ, ವೈದ್ಯಕೀಯ ಕಾಲೇಜಿನ ಪಠ್ಯಗಳಲ್ಲಿ ಇದರ ಉಲ್ಲೇಖವಿದ್ದರೆ ಅದನ್ನು ಸಹ ತೆಗೆದುಹಾಕಬೇಕೆಂದು ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದೆ.

ಯಾರಾದರೂ ಇಂತಹ ಪರೀಕ್ಷೆ ನಡೆಸಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯ ಪೀಠ ಎಚ್ಚರಿಕೆ ನೀಡಿರುವ ಜೊತೆಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಒಬ್ಬ

Leave A Reply

Your email address will not be published.