Jio ಯೋಜನೆಗಳು | 2GB ಡೇಟಾ ಜೊತೆಗೆ ಒಟಿಟಿ ಪ್ರಯೋಜನ | ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಟೆಲಿಕಾಂ ಜಗತ್ತಿನಲ್ಲಿ ತನ್ನದೇ ಪಾರುಪತ್ಯ ಕಾಯ್ದುಕೊಳ್ಳುತ್ತಿರುವ ರಿಲಯನ್ಸ್ ಒಡೆತನದ ಪ್ರಸಿದ್ಧ ಜಿಯೋ ಜನರನ್ನು ಸೆಳೆಯಲು ನಾನಾ ರೀತಿಯ ಸರ್ಕಸ್ ನಡೆಸುತ್ತಿದೆ.

ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಡೇಟಾ ಪ್ಯಾಕ್ ನೀಡುವ ಯೋಜನೆಯಲ್ಲಿದ್ದು , ಜನರಿಗೆ 5G ಸೇವೆ ನೀಡಲು ಸಕಲ ಸಿದ್ಧತೆಯನ್ನು ಭರದಿಂದ ನಡೆಸುತ್ತಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಅಕ್ಟೋಬರ್ 1 ರಂದು ದೇಶದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ವಾಣಿಜ್ಯ 5G ಸೇವೆಗಳನ್ನು ಆರಂಭಿಸಿದ್ದು, ಟೆಲಿಕಾಮ್ ಕಂಪೆನಿ ಏರ್‌ಟೆಲ್ 5G ಸೇವೆ ಪ್ರಾರಂಭಿಸಿದ ಬೆನ್ನಲ್ಲೇ, ರಿಲಯನ್ಸ್ ಜಿಯೋ ತಮ್ಮ 5G ಸೇವೆಗಳನ್ನು ನೀಡಲು ಸಜ್ಜಾಗುತ್ತಿದೆ .

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದ್ದು, 2022 ರ ವಿಜಯದಶಮಿ ಹಬ್ಬದ ಶುಭ ದಿನದಂದೇ ಜಿಯೋ ತನ್ನ ‘ವೆಲ್ಕಮ್ ಆಫರ್’ ಘೋಷಣೆ ಜೊತೆಗೆ ದೇಶದಲ್ಲಿ ಮೊದಲು ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ನಾಲ್ಕು ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಪ್ರಸ್ತುತಪಡಿಸಿದೆ. ಇದೀಗ ಈ ಸೇವೆಯು ಕನಿಷ್ಠ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.

ರಿಲಯನ್ಸ್ ಜಿಯೋ ಗ್ರಾಹಕರು 1 Gbps ವೇಗದಲ್ಲಿ 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಬೇಕಾಗಿದೆ. ಜಿಯೋವಿನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು 5G ವೆಲ್‌ಕಮ್ ಆಫರ್ ಪಡೆಯಲು ಕನಿಷ್ಠ 239 ಅಥವಾ ಹೆಚ್ಚಿನ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿಸಿರಬೇಕಾಗಿದೆ.

ರಿಲಯನ್ಸ್ ಜಿಯೋ (Reliance Jio) ದಿನಕ್ಕೆ 2GB ಮೊಬೈಲ್ ಡೇಟಾದೊಂದಿಗೆ ಅನಿಯಮಿತ ಕರೆಗಳು ಮತ್ತು SMS ಪ್ರಯೋಜನಗಳನ್ನು ಈಗಾಗಲೇ ನೀಡುತ್ತಿದ್ದು, JioTV, JioCinema ಮತ್ತು JioSecurity ಸೇರಿದಂತೆ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶದೊಂದಿಗೆ ಬಹು ಪ್ರಿಪೇಯ್ಡ್ ಯೋಜನೆಗಳನ್ನು ನೀಡಲು ಅಣಿಯಾಗುತ್ತಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಸಂಖ್ಯೆಯನ್ನು ಹೊಂದಿದ್ದು, ಸಾಕಷ್ಟು ಮೊಬೈಲ್ ಡೇಟಾ ಮತ್ತು ಪ್ರಯೋಜನಗಳನ್ನು ನೀಡುವ ರೀಚಾರ್ಜ್ ಯೋಜನೆಯ ಲಾಭ ಪಡೆಯಲು ಬಯಸುವವರಿಗೆ ಕೆಲ ಮಾಹಿತಿಗಳು ಇಲ್ಲಿವೆ.

ಜಿಯೋ ಗ್ರಾಹಕರಿಗೆ ದಿನಕ್ಕೆ 2GB ಡೇಟಾದೊಂದಿಗೆ Jio ಮೊಬೈಲ್ ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದು, ರಿಲಯನ್ಸ್ ಜಿಯೋ ₹249 ಯೋಜನೆಯ ಮೂಲಕ ಜಿಯೋ ಗ್ರಾಹಕರು ದಿನಕ್ಕೆ 2GB ಡೇಟಾ ಜೊತೆಗೆ, ದಿನಕ್ಕೆ 100SMS ಡೇಟಾದೊಂದಿಗೆ ದೊರೆಯಲಿದ್ದು, ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ಡೇಟಾವನ್ನು ಸಹ ನೀಡಲಾಗುತ್ತದೆ.

ಈ ಯೋಜನೆಯ ಲಾಭವೂ 23 ದಿನಗಳ ಮಾನ್ಯತೆಯನ್ನು ಹೊಂದಿದ್ದು, 46GB ಒಟ್ಟು ಮೊಬೈಲ್ ಡೇಟಾವನ್ನು ನೀಡಲಾಗುತ್ತದೆ. ರಿಲಯನ್ಸ್ ಜಿಯೋ ₹299 ಯೋಜನೆ ರಿಲಯನ್ಸ್ ಜಿಯೋ ₹299 ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು , ಪ್ರತಿದಿನ 2GB ಮೊಬೈಲ್ ಡೇಟಾದೊಂದಿಗೆ ಈ ಯೋಜನೆಯಲ್ಲಿ ಜಿಯೋ ಗ್ರಾಹಕರು ಅನಿಯಮಿತ ಧ್ವನಿ ಕರೆ ಡೇಟಾ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಪಡೆಯಬಹುದು.

ರಿಲಯನ್ಸ್ ಜಿಯೋ ₹533 ಯೋಜನೆಯಲ್ಲಿ Jio ಗ್ರಾಹಕರು 56 ದಿನಗಳ ಮಾನ್ಯತೆಯ ಲಾಭ ಗಳಿಸಬಹುದು ಜೊತೆಗೆ ರಿಲಯನ್ಸ್ ಜಿಯೋ ₹533 ಈ ಯೋಜನೆಯಲ್ಲಿ ಒಟ್ಟು 112GB ಅನ್ನು ಪಡೆಯಬಹುದಾಗಿದೆ. ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯೊಂದಿಗೆ ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ ₹719 ಯೋಜನೆ

ರಿಲಯನ್ಸ್ ಜಿಯೋ ₹719 ಯೋಜನೆಯಲ್ಲಿ ಪ್ರತಿ ದಿನ 2GB ಡೇಟಾವನ್ನು ನೀಡುವ ಜನಪ್ರಿಯ ಯೋಜನೆಯಾಗಿದ್ದು, ಈ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ ಹಾಗೂ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು JioTV, JioCinema, JioSecurity ಮತ್ತು ಇತರವುಗಳನ್ನು ಒಳಗೊಂಡಂತೆ Jio ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯಂತಹ ಪೂರಕ ಪ್ರಯೋಜನಗಳೊಂದಿಗೆ ಜಿಯೋ ಗ್ರಾಹಕರು ಮನೆಯಲ್ಲೆ ಕುಳಿತು ಸರಾಗವಾಗಿ ಇದರ ಸದುಪಯೋಗ ಪಡಿಸಿಕೊಳ್ಳಬಹುದು.

ರಿಲಯನ್ಸ್ ಜಿಯೋ ₹799 ಯೋಜನೆಯಲ್ಲಿ ಜಿಯೋ ಪ್ರಿಪೇಯ್ಡ್ ಈ ಯೋಜನೆಯು 56 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಇದು ಮಾನ್ಯತೆಯ ಅವಧಿಗೆ 112GB ಹೈ-ಸ್ಪೀಡ್ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ.

ದಿನಕ್ಕೆ 2GB ಮೊಬೈಲ್ ಡೇಟಾ ಪಡೆಯುವ ಜೊತೆಗೆ ಯೋಜನೆಯಲ್ಲಿ ಡಿಸ್ನಿ+ ಹಾಟ್ಸ್ಟಾರ್ಗೆ 1-ವರ್ಷದ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಚಂದಾದಾರಿಕೆ ಪಡೆಯಬಹುದು.

ರಿಲಯನ್ಸ್ ಜಿಯೋ ₹1,066 ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ಯೋಜನೆಯ ಮೂಲಕ ಜಿಯೋ ಗ್ರಾಹಕರು ಪ್ರತಿದಿನ 2GB ಮೊಬೈಲ್ ಡೇಟಾವನ್ನು ಮತ್ತು 173GB ಡೇಟಾವನ್ನು ಪಡೆಯಬಹುದು.

ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್ಗಳಿಗೆ ಪ್ರವೇಶದೊಂದಿಗೆ ₹499 ಮೌಲ್ಯದ 1-ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ದೊರೆಯಲಿದೆ.

ಜಿಯೋ ಗ್ರಾಹಕರು ಮನೆಯಲ್ಲೆ ಕುಳಿತು ಸರಾಗವಾಗಿ ಮನರಂಜನೆಯ ಜೊತೆಗೆ ಹೆಚ್ಚಿನ ಡೇಟಾ ಪ್ಯಾಕ್ ನ ಸದುಪಯೋಗ ಪಡಿಸಿಕೊಳ್ಳಬಹುದಾಗಿದ್ದು, ಅದಕ್ಕಾಗಿ ರೀಚಾರ್ಜ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಗ್ರಾಹಕರು ಜಿಯೋ ರೀಚಾರ್ಜ್ ಪ್ಯಾಕೇಜ್ ನ ಮೂಲಕ ಹೆಚ್ಚಿನ ಲಾಭ ಗಳಿಸಬಹುದಾಗಿದೆ.

Leave A Reply

Your email address will not be published.