Watch Video: ರಾವಣನ ಪ್ರತಿಕೃತಿ ದಹನ | ಜನರ ಮೇಲೆಯೇ ಬಿದ್ದ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ

ಎಲ್ಲೆಡೆಯೂ ದಸರಾ ಹಬ್ಬದ ಕಳೆ ಕಟ್ಟಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಆಯಾ ಪ್ರದೇಶದ ಆಚರಣೆಗಳಲ್ಲಿ ಅನುಗುಣವಾಗಿ ದಸರಾ ಆಚರಣೆ ನಡೆಯಲಿದ್ದು, ಕೆಲವೆಡೆ ಮಂಟಪಗಳ ಮೆರವಣಿಗೆ ನಡೆದರೆ, ಮತ್ತೆ ಕೆಲವರು ಬೊಂಬೆಗಳನ್ನು ಕೂರಿಸಿ , ದೇವಿಯ ಆರಾಧನೆ ಮಾಡಿ ಪುನೀತರಾಗುತ್ತಾರೆ. ಈ ನಡುವೆ ಹರಿಯಾಣದಲ್ಲಿ ದಸರಾ ಆಚರಣೆ ವೇಳೆ ರಾವಣನ ಪ್ರತಿಕೃತಿ ಬಿದ್ದ ಘಟನೆ ನಡೆದಿದೆ.

ದೇಶಾದಾದ್ಯಂತ ನಿನ್ನೆ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ದೇವಿಯ ಮಹಾತ್ಮೆಯನ್ನು ಸಾರುವ ಪ್ರತಿಕೃತಿ ಮಾಡಿ ಉತ್ತಮ ಸಂದೇಶ ರವಾನೆ ಮಾಡುವ ಕ್ರಮ ಹಲವೆಡೆ ಪ್ರಚಲಿತದಲ್ಲಿದೆ. ರಾಮಲೀಲಾ ಪ್ರದರ್ಶನಗಳು, ಜಾತ್ರೆಗಳು ಮತ್ತು ರಾವಣನ ಜೊತೆಗೆ ಅವನ ಮಗ ಮೇಘನಾದ್ ಮತ್ತು ಸಹೋದರ ಕುಂಭಕರನ್ ಅವರ ಪ್ರತಿಕೃತಿಗಳನ್ನು ಸುಡುವ ಕ್ರಮವೂ ಕೂಡ ಕೆಲವೆಡೆ ಇದೆ.

ಹರಿಯಾಣದಲ್ಲಿಯೂ ಕೂಡ ದಸರಾ ಹಬ್ಬವನ್ನು ಭಾರಿ ಅದ್ದೂರಿಯಾಗಿ ಯಮುನಾನಗರದಲ್ಲಿ ಬುಧವಾರ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ರಾವಣ ದಹನದ ಆಚರಣೆಯ ಸಮಯದಲ್ಲಿ ವೇಳೆ ಇದ್ದಕ್ಕಿದ್ದಂತೆ ರಾವಣನ ಪ್ರತಿಕೃತಿ ನೆರೆದಿದ್ದ ಜನರ ಮೇಲೆ ಪತನವಾಗಿದೆ.

ಆದರೆ, ಅದೃಷ್ಟವಶಾತ್‌ ಯಾವುದೇ ದೊಡ್ಡ ಮಟ್ಟದ ಅನಾಹುತ ನಡೆಯದೆ, ಈ ವೇಳೆ ಕೆಲವರು ಗಾಯಗೊಂಡಿದ್ದಾರೆ.
ರಾವಣ ದಹನ ಸಂದರ್ಭದ ಈ ವಿಡಿಯೋ ವೈರಲ್‌ ಆಗಿದ್ದು, ವಿಡಿಯೋದಲ್ಲಿ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿ ಸಂಭ್ರಮಿಸುತ್ತಿದ್ದ ಜನ ಸಮೂಹದ ಮೇಲೆ ಪ್ರತಿಕೃತಿ ಅವರ ಮೇಲೆ ಬೀಳುವ ದೃಶ್ಯ ಸೆರೆಯಾಗಿದೆ.

Leave A Reply

Your email address will not be published.