ಮದ್ಯಪ್ರಿಯರೇ ಗಮನಿಸಿ | 21 ದಿನಗಳ ಕಾಲ ಮದ್ಯದಂಗಡಿ ಬಂದ್

ಡ್ರೈ ಡೇ ಗಳ ಸಂಖ್ಯೆಯನ್ನು ಅರವಿಂದ್ ಕೇಜ್ರಿವಾಲ್ ಸರಕಾರ ಹೆಚ್ಚಿಸಿದೆ. ದಸರಾ, ದೀಪಾವಳಿ, ಈದ್ ಮಿಲಾದ್ ಮತ್ತು ವಾಲ್ಮೀಕಿ ಜಯಂತಿಯಂದು ಮದ್ಯದಂಗಡಿಗಳನ್ನು (Wine Shops) ಮುಚ್ಚುವುದರೊಂದಿಗೆ ದೆಹಲಿಯ ಸರ್ಕಾರವು ‘ಡ್ರೈ ಡೇ’ಗಳ (Dry Days) ಸಂಖ್ಯೆಯನ್ನು 21 ದಿನಗಳಿಗೆ ಹೆಚ್ಚಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಡ್ರೈ ಡೇಗಳ ಸಂಖ್ಯೆಯನ್ನು ಜನವರಿ 26, ಆಗಸ್ಟ್ 25 ಮತ್ತು ಅಕ್ಟೋಬರ್ 2 – ಹೀಗೆ ಕೇವಲ 3 ದಿನಕ್ಕೆ ಕಡಿತಗೊಳಿಸಲು ಹಿಂದಿನ ಅಬಕಾರಿ ನೀತಿ (Liquor Policy) (2021-22) ಅಡಿಯಲ್ಲಿ ಮಾಡಲಾಗಿತ್ತು.

ಅಕ್ಟೋಬರ್ 5 ರಂದು ಅಂದರೆ ದಸರಾ (Dasara) (ವಿಜಯದಶಮಿ), ಈದ್-ಮಿಲಾದ್-ಉನ್-ನಬಿ, ಅಕ್ಟೋಬರ್ 9 ರಂದು ಮಹರ್ಷಿ ವಾಲ್ಮೀಕಿ ಜಯಂತಿ, ಅಕ್ಟೋಬರ್ 24 ರಂದು ದೀಪಾವಳಿ, ನವೆಂಬರ್ 8 ರಂದು ಗುರುನಾನಕ್ ಜಯಂತಿ ಮತ್ತು ನವೆಂಬರ್ 24 ರಂದು ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನ – ಈ ಎಲ್ಲಾ ದಿನಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಅಬಕಾರಿ ಇಲಾಖೆ (Excise Department) ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. “ಹಳೆಯ ಅಬಕಾರಿ ಆಡಳಿತದಲ್ಲಿ ಡ್ರೈ ಡೇಗಳ ಸಂಖ್ಯೆ 21 ಆಗಿತ್ತು. ಈ ಸಂಖ್ಯೆಯನ್ನು ನಿಗದಿಪಡಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಸಾಂಪ್ರದಾಯಿಕವಾಗಿ ಪ್ರತಿ 3 ತಿಂಗಳಿಗೊಮ್ಮೆ ಡ್ರೈ ದಿನಗಳ ಪಟ್ಟಿಯನ್ನು ನೀಡಲಾಗುತ್ತದೆ. ಆದರೂ, ಮದ್ಯವನ್ನು ಪೂರೈಸುವ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೆರೆದಿರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು, ಡ್ರೈ ಡೇಗಳ ದಿನ ಮದ್ಯ ಪರವಾನಗಿದಾರರಿಗೆ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ. ಅವರು ತಮ್ಮ ವ್ಯಾಪಾರದ ಆವರಣದಲ್ಲಿ ಪ್ರಮುಖವಾದ ಸ್ಥಳಗಳಲ್ಲಿ ಡ್ರೈ ಡೇ ಆದೇಶವನ್ನು ಅಥವಾ ಮದ್ಯ ದೊರೆಯುವುದಿಲ್ಲ ಎಂದು ಪ್ರದರ್ಶಿಸಬೇಕು ಎಂದೂ ಅರವಿಂದ್ ಕೇಜ್ರಿವಾಲ್‌ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ, ಮದ್ಯದ ಕಂಪನಿಗಳು ಹಬ್ಬದ ಸೀಸನ್‌ಗಾಗಿ ಎದುರು ನೋಡುತ್ತವೆ. ಅಕ್ಟೋಬರ್ ಹಬ್ಬದ ಸೀಸನ್ ಆಗಿರುವುದರಿಂದ ಇದು ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ. ಆದರೆ, ದಸರಾ ಹಬ್ಬ, ದೀಪಾವಳಿ ಸೇರಿ ಈ ತಿಂಗಳ ಅನೇಕ ದಿನಾಂಕಗಳಂದು ಮದ್ಯದಂಗಡಿ ಬಂದ್‌ ಆಗಿರುವುದು ಮದ್ಯ ಪ್ರಿಯರಿಗೆ ಮಾತ್ರವಲ್ಲದೆ, ಮದ್ಯದ ಕಂಪನಿಗಳಿಗೂ ಬೇಸರದ ವಿಷಯವಾಗಿದೆ ಎಂದರೆ ತಪ್ಪೇನಿಲ್ಲ.

Leave A Reply

Your email address will not be published.