ಇಂಡೋನೇಷ್ಯ | ಫುಟ್ ಬಾಲ್ ಕ್ರೀಡಾಂಗಣದ ದುರಂತದಲ್ಲಿ ಸತ್ತ ಮಕ್ಕಳ ಸಂಖ್ಯೆ ಎಷ್ಟು ಗೊತ್ತ ?

ಇಂಡೋನೇಷ್ಯಾದ ಸ್ಥಳೀಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಗಲಭೆಯ ವೇಳೆ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದ್ದು, ಇದರಲ್ಲಿ 32 ಮಕ್ಕಳೂ ಸೇರಿದ್ದಾರೆ ಎಂಬ ವರದಿ ಲಭ್ಯವಾಗಿದೆ.

ಪಂದ್ಯಾವಳಿ ವೇಳೆ ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪರಸ್ಪರ ದಾಂಧಲೆಯೆಬ್ಬಿಸಿದ್ದರು. ಈ ಗಲಭೆಯಲ್ಲಿ ಹಲವು ಸಾವು ನೋವು ಸಂಭವಿಸಿದ್ದವು. ಈ ಪ್ರಕರಣವು ವಿಶ್ವ ವ್ಯಾಪ್ತಿಯಲ್ಲಿ ವ್ಯಾಪಕ ಸುದ್ದಿಯಾಗಿತ್ತು.

01 ಅಕ್ಟೋಬರ್ ರಂದು ಶನಿವಾರ ತಡರಾತ್ರಿ ಇಲ್ಲಿಯ ಕಂಜುರುಹಾನ್ ಕ್ರೀಡಾಂಗಣದಲ್ಲಿ ನಡೆದ ಬಿಆರ್ಐ ಲೀಗ್ ಪಂದ್ಯಾವಳಿಯಲ್ಲಿ ಸ್ಥಳೀಯ ಅರೆಮಾ ಎಫ್ಸಿ ತಂಡವು 2 – 3 ಗೋಲುಗಳ ಅಂತರದಲ್ಲಿ ಪೆರ್ಸೆಬಾಯಾ ಸುರಬಯಾ ಎದುರು ಸೋಲುಂಡಿತ್ತು.

ಈ ಸೋಲಿನ ಪರಿಣಾಮ ಅರೆಮಾ ಎಫ್ಸಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ, ದಾಂಧಲೆಯೆಬ್ಬಿಸಿದ್ದರು. ಅಲ್ಲಿನ ಸಿಬ್ಬಂದಿಗಳು ಪರಿಸ್ಥಿತಿ ನಿಯಂತಣಕ್ಕೆ ತರಲು ಅಶ್ರುವಾಯು ಪ್ರಯೋಗಿಸಿದಾಗ ಕಾಲ್ತುಳಿತದಿಂದಾಗಿ ದುಗುಡ ದುರಂತ ಸಂಭವಿಸಿತ್ತು.

Leave A Reply

Your email address will not be published.