Airtel 5G : ಬೆಂಗಳೂರಿಗರಿಗೆ ಸಿಹಿ ಸುದ್ದಿ | ಇಂದಿನಿಂದ 5G ಸೇವೆ ಆರಂಭ | ಎಲ್ಲೆಲ್ಲಿ ಗೊತ್ತೇ?

ನೆಟ್ ವರ್ಕ್ ಸಮಸ್ಯೆ ಎಲ್ಲಾ ಕಡೆ ಇದೆ. ಈಗಿನ ಆಧುನಿಕ ಕಾಲದಲ್ಲಿ ನೆಟ್ ವರ್ಕ್ ಇಲ್ಲ ಅಂದ್ರೆ ಯಾವ ಕೆಲಸಾನು ನಡೆಯಲ್ಲ ಇನ್ನೂ ಬೆಂಗಳೂರಿನಂತ ಮಹಾ ನಗರಗಳಲ್ಲಿ ಗಾಳಿಯಷ್ಟೇ ವೇಗವಾಗಿ ನೆಟ್ ವರ್ಕ್ ಜಾಲ ಬೆಳೆಯುತ್ತಿದೆ. ಹಾಗಾಗಿ ಬೆಂಗಳೂರು ನಗರದ ಕೆಲವು ಭಾಗಗಳು ಮಾತ್ರ ಪ್ರಸ್ತುತ 5G ಸೇವೆಗಳಿಗೆ ತೆರೆದುಕೊಳ್ಳುತ್ತಿವೆ. ಏರ್‌ಟೆಲ್ 5G ಸೇವೆಯು ಪ್ರಸ್ತುತ 5G ಟವರ್‌ಗಳನ್ನು ಸ್ಥಾಪಿಸಿದ ಸ್ಥಳಗಳಲ್ಲಿ ಮಾತ್ರ ಸೇವೆ ದೊರೆಯುತ್ತದೆ ಅಂದರೆ 5G ಸ್ಮಾರ್ಟ್‌ಫೋನ್ ಹೊಂದಿರುವ ಸಂಸ್ಥೆಯು ಬಳಕೆದಾರರೂ 5G ಅನುಭವವನ್ನು ಪಡೆಯಲು 5G ಸೇವೆಗಳು ಲಭ್ಯವಿರುವ ಪ್ರದೇಶದಲ್ಲಿ ಇದ್ದರೆ ಮಾತ್ರ ಸಾಧ್ಯ . ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಈ ಮುಖ್ಯ ವಿಚಾರ ಒಂದನ್ನು ತಿಳಿಸಿರುತ್ತಾರೆ ಅಂದರೆ ಮುಂದಿನ ಶನಿವಾರದಿಂದಲೇ ನಗರದ ಹಲವೆಡೆ 5G ಸೇವೆಯನ್ನು ಒದಗಿಸಲು ಸಜ್ಜುಗೊಳಿಸಲಾಗಿದೆ ಎಂದು ಖಾತ್ರಿ ಪಡಿಸಿದ್ದಾರೆ. ಏರ್‌ಟೆಲ್ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಕಂಪನಿಯಾಗಿದ್ದು, ಬೆಂಗಳೂರು, ದೆಹಲಿ ಮತ್ತು ಚೆನ್ನೈ ನಗರಗಳ ಜನತೆ ಒಂದೆರಡು ದಿನಗಳಲ್ಲಿ 5G ಸೇವೆಯನ್ನು ಬಳಕೆ ಪಡೆಯಲು ಸಾಧ್ಯವಾಗುತ್ತದೆ. ಮತ್ತು 5G ಸೇವೆಗೆ ಎಷ್ಟು ಬೆಲೆ ಇರಲಿದೆ ಎಂಬ ಬಗ್ಗೆ ಕಂಪನಿಯ ಹಿರಿಯ ಅಧಿಕಾರಿ ಭಾರ್ತಿ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಸಂಸ್ಥೆಯು ಭರದಿಂದ ಕಾರ್ಯನಿರ್ವಹಿಸುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ ಟೆಸ್ಟಿಂಗ್ ಮೂಲಕ ಏರ್‌ಟೆಲ್ 5G ಸೇವೆಯನ್ನು ಪರೀಕ್ಷಿಸಲಾಗುತ್ತಿದ್ದು, ಈಗಾಗಲೇ ವಿಧಾನಸೌಧ, ಎಂಜಿ ರಸ್ತೆ ಮತ್ತು ಕೋರಮಂಗಲದಂತಹ ನಗರದ ಹಲವು ಪ್ರಮುಖ ಭಾಗಗಳಲ್ಲಿ 5G ಬಡ್‌ಗಳನ್ನು ಯಶಸ್ವಿಯಾಗಿದೆ ಅಳವಡಿಸಲಾಗಿದೆ. ಹಾಗಾಗಿ, ನಗರದ ಜನತೆ ಒಂದೆರಡು ದಿನಗಳಲ್ಲಿ 5G ಸೇವೆಯನ್ನು ಬಳಕೆ ಪಡೆಯಲು ಸಾಧ್ಯವಾಗುತ್ತದೆ ಮತ್ತು ಇನ್ನು ಮುಂದೆ ನಗರದಲ್ಲಿ 5G ಸೇವೆಗಳು ಅಸ್ತಿತ್ವದಲ್ಲಿರುವ 4G ದರದಲ್ಲೇ ಲಭ್ಯವಾಗುತ್ತದೆ. ಹಾಗೂ ಸ್ವಲ್ಪ ಸಮಯದ ನಂತರ ಹೊಸ ಸುಂಕವನ್ನು ಪ್ರಕಟಿಸಲಾಗುತ್ತದೆ ಎಂದು ಏರ್‌ಟೆಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಏರ್‌ಟೆಲ್‌ನ ಈ ಉನ್ನತ ಅಧಿಕಾರಿ ಅವರ ಪ್ರಕಾರ ನಗರದ ಕೆಲವು ಭಾಗಗಳು ಮಾತ್ರ ಪ್ರಸ್ತುತ 5G ಸೇವೆಗಳಿಗೆ ತೆರೆದುಕೊಳ್ಳುತ್ತಿವೆ. 5G ಸ್ಮಾರ್ಟ್‌ಫೋನ್ ಹೊಂದಿರುವ ಸಂಸ್ಥೆಯ ಬಳಕೆದಾರರ 5G ಅನುಭವವನ್ನು ಪಡೆಯಲು 5G ಸೇವೆಗಳು ಲಭ್ಯವಿರುವ ಪ್ರದೇಶದಲ್ಲಿರಬೇಕು. ಏರ್‌ಟೆಲ್ 5G ಸೇವೆಯು ಪ್ರಸ್ತುತ 5G ಟವರ್‌ಗಳನ್ನು ಸ್ಥಾಪಿಸಿದ ಸ್ಥಳಗಳಲ್ಲಿ ಮಾತ್ರ ಸೇವೆ ದೊರೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ ಹಾಗೂ ಹೆಚ್ಚಿನ ಖಾತ್ರಿಗಾಗಿ ಇನ್ನೆರಡು ದಿವಸಗಳು ಬೇಕಾಗಬಹುದು ಎಂದಿದ್ದಾರೆ.ಮಾರ್ಚ್ 2023ರ ವೇಳೆಗೆ ದೇಶದಾದ್ಯಂತ ಹಲವಾರು ನಗರಗಳಲ್ಲಿ ಮತ್ತು ಮಾರ್ಚ್ 2024 ರ ವೇಳೆಗೆ ಭಾರತದಾದ್ಯಂತ 5G ಸೇವೆಗಳನ್ನು ಏರ್‌ಟೆಲ್ ಹೊರತರಲಿದೆ ಹಾಗೂ 5G ಬಿಡುಗಡೆಯ ನಂತರ, ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ 5G ಸ್ಮಾರ್ಟ್‌ಫೋನಿನಲ್ಲಿ ಒಮ್ಮೆ ನೆಟ್‌ವರ್ಕ್ ಮೋಡ್ ಅನ್ನು 5G ಗೆ ಬದಲಾಯಿಸಿ. ನಂತರ ನೀವು 5G-ಸಕ್ರಿಯಗೊಳಿಸಿದ ಸ್ಥಳದಲ್ಲಿದ್ದರೆ, ನಿಮ್ಮ ಸಾಧನವು ಸ್ವಯಂಚಾಲಿತವಾಗಿ ಮೇಲ್ಬಾಗದಲ್ಲಿ 5G ಲೋಗೋವನ್ನು ತೋರಿಸಲಿದೆ. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಅ.01 ರಂದು 5G ಸೇವೆಯನ್ನು ಪ್ರಾರಂಭಿಸಿದಾಗ ಏರ್‌ಟೆಲ್‌ನಿಂದ 8 ನಗರಗಳಾದ ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ 5G ಸೇವೆ ಲಭ್ಯವಿರುತ್ತದೆ ಎಂದು ಮಿತ್ತಲ್ ಅವರು ಸ್ಪಷ್ಟನೆ ನೀಡಿದರು.

Leave A Reply

Your email address will not be published.